ಟೀನೇಜ್ ನಲ್ಲಿ ಎಕ್ಸಾಮ್ ಮುಗಿದು ರಿಸಲ್ಟ್ ಗೆ ಕಾಯೋದೇ ಒಂಥರಾ ಥ್ರಿಲ್ ಬಿಡಿ.ಇನ್ನೇನು ರಿಸಲ್ಟ್ ಬರುವಾಗ ಎದೆಯಲ್ಲಿ ಶುರುವಾಗೋ ಗಿಟಾರ್ ಸೌಂಡ್ ಅಂತೂ ಅಬ್ಬಬ್ಬಾ.  ರಿಸಲ್ಟ್ ಬಂದ ಬಳಿಕ ಫಸ್ಟ್ ಬಂದ್ರೆ ಓಕೆ. . ‘ಜಸ್ಟ್ ಪಾಸ್‘ ಆದ್ರೆ ಮಾತ್ರ ಅಯ್ಯೋಯ್ಯೋ ಅನ್ನೋ ತರಹದ ವೇದನೆ.ಇಂತಹದ್ದೇ ಒಂದು ಥ್ರಿಲ್ಲಿಂಗ್ ಸಬ್ಜೆಕ್ಟ್ ಇರೋ “ಜಸ್ಟ್ ಪಾಸ್“ ಅನ್ನೋ ಟೈಟಲ್ ಮೂಲಕವೇ ಸಿನಿಮಾವೊಂದು ನಿಮ್ಮನ್ನ ಭರ್ಜರಿಯಾಗಿ ರಂಜಿಸಲು ಬರುತ್ತಿದೆ. ಶೀಘ್ರದಲ್ಲಿಯೇ ತೆರೆಗೆ ಬರಲು ಸಿದ್ಧವಾಗುತ್ತಿರುವ “ಜಸ್ಟ್‌ ಪಾಸ್‌’ ಸಿನಿಮಾದ ಈಗಾಗಲೇ ಸಿಕ್ಕಾಪಟ್ಟೆ ಟಾಕ್ ಶುರುವಾಗಿದೆ. ಸಿನಿಮಾ ಕೆಲಸ ಕಂಪ್ಲೀಟ್ ಆಗಿದ್ದು ಇನ್ನೇನು ತೆರೆಗೆ ಬರಲು ರೆಡಿಯಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Kaatera Collections: ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿರುವ ದರ್ಶನ್ ಅಭಿನಯದ 'ಕಾಟೇರ'.. ನಾಲ್ಕು ದಿನದ ಕಲೆಕ್ಷನ್ ಎಷ್ಟು?


‘ಜಸ್ಟ್‌ ಪಾಸ್‌’ ಸಿನಿಮಾದಲ್ಲಿ ಕೂದಲೆಳೆ ಅಂತರದಲ್ಲಿ ಪಾಸ್‌ ಆದವರಿಗಂತಲೇ ಕಾಲೇಜು ತೆರೆಯಲಾಗಿದೆ.ಜತೆಗೆ ಈ ಕಾಲೇಜ್‌ ಸೇರಿಕೊಂಡರೆ, ಹಾಸ್ಟೆಲ್‌ ಕೂಡ ಉಚಿತವಂತೆ.ಎಲ್ಲಾ ಕಡೆ Rank ಬಂದ ಸ್ಟೂಡೆಂಟ್ ಗಳಿಗೆ ಎಲ್ಲವೂ ಉಚಿತವಾದರೆ ಈ ಸಿನಿಮಾದಲ್ಲಿ ಜಸ್ಟ್ ಪಾಸ್ ಆದವರಿಗೆ ಆದ್ಯತೆ ಇರುತ್ತೆ. ಅದು ಹೇಗೆ ಮತ್ತು ಯಾಕೆ ಅನ್ನೋದನ್ನ ತೆರೆ ಮೇಲೆ ಸಿನಿಮಾ ಬಂದ ಮೇಲೆ ನೋಡಿ ಎಂಜಾಯ್ ಮಾಡೋಣ ಏನಂತೀರಾ. .?ಕಾಲೇಜ್ ಯೂತ್ ಸಬ್ಜೆಕ್ಟ್ ಒಳಗೊಂಡ ‘ಜಸ್ಟ್ ಪಾಸ್’ ಚಿತ್ರಕ್ಕೆ 'ಇರುವುದೆಲ್ಲವ ಬಿಟ್ಟು', 'ಗಜಾನನ ಗ್ಯಾಂಗ್' ಸಿನಿಮಾ ಖ್ಯಾತಿಯ ನಟ ಶ್ರೀ ಮಹದೇವ್ಯ‌ ನಾಯಕ ನಟನಾಗಿ ನಟಿಸುತ್ತಿದ್ದಾರೆ. ತರ್ಲೆ ವಿಲೇಜ್’, ‘ಪರಸಂಗ’, ‘ದೊಡ್ಡಹಟ್ಟಿ ಬೋರೇಗೌಡ’ ಸಿನಿಮಾ ಮೂಲಕ ಚಂದನವನದಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಕೆ.ಎಂ.ರಘು ಜಸ್ಟ್ ಪಾಸ್ ಸಿನಿಮಾ ಮೂಲಕ ಸಖತ್ ಮನರಂಜನೆ ನೀಡಲು ಸಿದ್ಧವಾಗಿದ್ದಾರೆ.ಹೊಸ ಪ್ರತಿಭೆ ಪ್ರಣತಿ ನಾಯಕಿಯಾಗಿ ಶೈನ್ ಆಗಲು ರೆಡಿಯಾಗಿದ್ದಾರೆ. ರಂಗಾಯಣ ರಘು ಅವರೊಂದಿಗೆ ಸಾಧು ಕೋಕಿಲ, ಪ್ರಕಾಶ್‌ ತುಮ್ಮಿನಾಡು, ದೀಪಕ್‌ ರೈ, ದಾನಪ್ಪ, ಗೋವಿಂದೇ ಗೌಡ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.


ಇದನ್ನೂ ಓದಿ: Sevasindhu Application Guide; ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಿ, ಯೋಜನೆಯ ಪ್ರಯೋಜನ ಪಡೆಯಿರಿ


“ರಾಯ್ಸ್ ಎಂಟರ್‌ ಟೈನ್ಮೆಂಟ್‌ ಲಾಂಛನದಲ್ಲಿ ಕೆ. ವಿ. ಶಶಿಧರ್‌ ನಿರ್ಮಿಸುತ್ತಿರುವ “ಜಸ್ಟ್‌ ಪಾಸ್‌’ ಸಿನಿಮಾಕ್ಕೆ ಕೆ. ಎಂ. ರಘು ನಿರ್ದೇಶನವಿರೋ ವಿಚಾರ ನಿಮಗೆ ಗೊತ್ತಿದೆ ಸಿನಿಮಾದ ಹಾಡುಗಳಿಗೆ ಹರ್ಷವರ್ಧನ್‌ ರಾಜ್‌ ಸಂಗೀತ ಸಂಯೋಜಿಸಿದ್ದು, ಸುಜಯ್‌ ಕುಮಾರ್‌ ಛಾಯಾಗ್ರಹಣವಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.