The Kashmir Files Box Office Collection: ವಿವೇಕ್ ಅಗ್ನಿಹೊತ್ರಿಯ 200 ಕೋಟಿಯ ಘರ್ಜನೆ
The Kashmir Files Box Office Collection: `ದಿ ಕಾಶ್ಮೀರ್ ಫೈಲ್ಸ್ ನ ಒಟ್ಟು ಗಲ್ಲಾ ಪೆಟ್ಟಿಗೆಯ ಕಲೆಕ್ಷನ್ 200.13 ಕೋಟಿ ರೂ. ತಲುಪಿದೆ (The Kashmir Files Box Office). ಈ ಚಲನಚಿತ್ರ ಬಾಲಿವುಡ್ ಮುಂದೆ ಒಂದು ಹೊಸ ಮೈಲುಗಲ್ಲನ್ನೇ ಸ್ಥಾಪಿಸಿದೆ ಎಂದರೆ ಅತಿಶಯೋಕ್ತಿಯಾಗಲಾರದು.
ನವದೆಹಲಿ: The Kashmir Files News - ಅನುಪಮ್ ಖೇರ್, ಪಲ್ಲವಿ ಜೋಶಿ, ಮಿಥುನ್ ಚಕ್ರವರ್ತಿ, ದರ್ಶನ್ ಕುಮಾರ್, ಪುನೀತ್ ಇಸ್ಸಾರ್ ಮತ್ತು ಇತರೆ ದಿಗ್ಗಜ ತಾರಾಗಣ ಹೊಂದಿರುವ 'ದಿ ಕಾಶ್ಮೀರ್ ಫೈಲ್ಸ್' (The Kashmir Files) ಹೊಸ ದಾಖಲೆ ನಿರ್ಮಿಸಿದೆ. ಬಾಕ್ಸ್ ಆಫೀಸ್‌ನಲ್ಲಿ (The Kashmir Files Box Office News) ಚಿತ್ರದ ಮ್ಯಾಜಿಕ್ ನಿರಂತರವಾಗಿ ಮುಂದುವರೆದಿದೆ. ಚಿತ್ರ 200 ಕೋಟಿ ಗಡಿ ದಾಟಿದೆ. ಅಷ್ಟೇ ಅಲ್ಲ, ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಚಿತ್ರ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಿತ್ರ ಎಂಬ ಹೆಗ್ಗಳಿಕೆಗೆ (ಕೊರೊನಾ ಸಂಕ್ರಾಮಿಕದ ನಂತರದ ಯುಗ) ಪಾತ್ರವಾಗಿದ್ದು, ಅಕ್ಷಯ್ ಕುಮಾರ್ ಅಭಿನಯದ 'ಸೂರ್ಯವಂಶಿ'ಯನ್ನು ಗಳಿಕೆಯ ವಿಚಾರದಲ್ಲಿ ಹಿಂದಿಕ್ಕಿದೆ.
ಬುಧವಾರ ಚಿತ್ರ ಈ ಮ್ಯಾಜಿಕ್ ನಂಬರ್ ಅನ್ನು ಸಾಧಿಸಿದೆ
ಗುರುವಾರ ಬಾಲಿವುಡ್ ಪಾಲಿಗೆ ತುಂಬಾ ವಿಶೇಷ ದಿನ ಸಾಬೀತಾಗಿದೆ. ಏಕೆಂದರೆ ಸಾಂಕ್ರಾಮಿಕ ರೋಗದ ನಂತರ ಮೊದಲ ಬಾರಿಗೆ, ಚಿತ್ರವೊಂದು 200 ಕೋಟಿ ಕ್ಲಬ್ ಗೆ ಶಾಮೀಲಾಗಿದೆ. ಕರೋನಾ ಸಾಂಕ್ರಾಮಿಕದ ನಂತರ ಅತಿ ಹೆಚ್ಚು ಚರ್ಚೆಗೆ ಗ್ರಾಸವಾದ ಮತ್ತು ಅತ್ಯಂತ ಯಶಸ್ವಿ ಚಲನಚಿತ್ರಗಳಲ್ಲಿ ಒಂದಾದ 'ದಿ ಕಾಶ್ಮೀರ್ ಫೈಲ್ಸ್' ಬುಧವಾರ 200 ಕೋಟಿ ರೂ.ಗಳ ಗಡಿ ದಾಟಿದೆ. ಬುಧವಾರದವರೆಗೆ 'ದಿ ಕಾಶ್ಮೀರ್ ಫೈಲ್ಸ್' ಬಾಕ್ಸ್ ಆಫೀಸ್ ಕಲೆಕ್ಷನ್ ಒಟ್ಟು 200.13 ಕೋಟಿ ರೂ.ಆಗಿತ್ತು.
ಈ ರೀತಿಯಾಗಿದೆ ಗಳಿಕೆಯ ಜರ್ನಿ
ಟ್ರೇಡ್ ಅನಾಲಿಸ್ಟ್ ಆಗಿರುವ ತರಣ್ ಆದರ್ಶ್, ಗುರುವಾರ ತನ್ನ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಈ ಕುರಿತು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿರುವ ಅವರು, #TheKashmirFiles ₹ 200 cr ಗಡಿ ದಾಟಿದೆ ಎಂದಿದ್ದಾರೆ.
ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಕರವೇ ಪ್ರತಿಭಟನೆ ; ಶಿವರಾಜ್ ಕುಮಾರ್ ಜೊತೆ ಮಾತುಕತೆ
ಪ್ರಭಾಸ್ ಚಿತ್ರ ಕೂಡ ಹಿಂದಕ್ಕೆ ಸರೆದಿದೆ
'ದಿ ಕಾಶ್ಮೀರ್ ಫೈಲ್ಸ್' ಚಲನಚಿತ್ರ ಬಾಕ್ಸ್ ಆಫೀಸ್ ನಲ್ಲಿ ತನ್ನ ಕಮಾಲ್ ಯಾವ ರೀತಿ ಮುಂದುವರೆಸಿದೆ ಎಂದರೆ, ಇದು ಸೌಥ್ ಸೂಪರ್ ಸ್ಟಾರ್ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಭಿನಯದ ಚಿತ್ರ 'ರಾಧೇ ಶಾಮ್'ಗೆ ಭಾರಿ ಪೈಪೋಟಿ ನೀಡಿದೆ. ಅಷ್ಟೇ ಅಲ್ಲ ಇದೀಗ ಗಳಿಕೆಯ ವಿಚಾರದಲ್ಲಿ ಅದು 'ರಾಧೇ ಶಾಮ್' ಶಾಮ್ ಗಿಂತ ಭಾರಿ ಮುಂದಕ್ಕೆ ಸಾಗಿದೆ.
ಇದನ್ನೂ ಓದಿ-ಜೇಮ್ಸ್ ಸಿನಿಮಾ ಎತ್ತಂಗಡಿ ಮಾಡದಂತೆ ಪ್ರತಿಭಟನೆ - RRR ಪೋಸ್ಟರ್ ಕಿತ್ತುಹಾಕಿ ಕರವೇ ಆಕ್ರೋಶ
ನೈಜ ಕಥಾ ಹಂದರ ಹೊಂದಿರುವ ಚಿತ್ರ
ಕಾಶ್ಮೀರ ಹತ್ಯಾಕಾಂಡದಿಂದ ಪೀಡಿತರಾಗಿರುವ ಕಾಶ್ಮೀರಿ ಪಂಡಿತರ ಕುಟುಂಬಗಳು ಮತ್ತು ಸಂತ್ರಸ್ತರ ವೀಡಿಯೊ ಸಂದರ್ಶನಗಳನ್ನು ಆಧರಿಸಿದ 'ದಿ ಕಾಶ್ಮೀರ್ ಫೈಲ್ಸ್' ಒಂದು ನೈಜ ಕಥೆ ಆಧಾರಿತ ಚಿತ್ರವಾಗಿದೆ. ಈ ಚಿತ್ರವು ಮಾರ್ಚ್ 11 ರಂದು ಬೆಳ್ಳಿ ಪರದೆಯ ಮೇಲೆ ಬಿಡುಗಡೆಯಾಗಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.