ನವದೆಹಲಿ: Vivek Agnihotri - 'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಇತ್ತೀಚಿನ ದಿನಗಳಲ್ಲಿ ನಿರಂತರ ವಿವಾದಗಳಲ್ಲಿ ಕಂಡುಬರುತ್ತಿದ್ದಾರೆ. 200 ಕೋಟಿಗೂ ಹೆಚ್ಚು ಗಳಿಕೆ ಮಾಡಿದ ಈ ಚಿತ್ರ ಪ್ರಶಂಸೆಯೊಂದಿಗೆ ವಿರೋಧವನ್ನೂ ಕೂಡ ಎದುರಿಸುತ್ತಿದೆ. ಇದೀಗ ಚಿತ್ರದ ನಿರ್ದೇಶಕರು ತಮ್ಮ ವಿವಾದಾತ್ಮಕ ಹೇಳಿಕೆಯೊಂದಕ್ಕೆ ಸಂಬಂಧಿಸಿದಂತೆ ಕಾನೂನಿನ ಪೇಚಿನಲ್ಲಿ ಸಿಲುಕಿದ್ದಾರೆ. ಈ ಹಿನ್ನೆಲೆ ಅವರ ಎಫ್‌ಐಆರ್‌ ದಾಖಲಿಸುವಂತೆಯೂ ಒತ್ತಾಯಿಸಲಾಗಿದೆ.

COMMERCIAL BREAK
SCROLL TO CONTINUE READING

'ಭೋಪಾಲಿ ಅಂದ್ರೆ ಸಲಿಂಗಕಾಮಿ' ಎಂದ ಅಗ್ನಿಹೋತ್ರಿ ('Bhopali Means Gay')
'ದಿ ಕಾಶ್ಮೀರ್ ಫೈಲ್ಸ್' (The Kashmiri Files) ನಿರ್ದೇಶಕರು ಇತ್ತೀಚೆಗೆ ನೀಡಿದ ಹೇಳಿಕೆಯಲ್ಲಿ 'ಭೋಪಾಲಿ ಅಂದರೆ ಸಲಿಂಗಕಾಮಿ' (Vivek Agnihotri Controversy) ಎಂದಿದ್ದಾರೆ.  ಮುಂಬೈನಲ್ಲಿ ಪೊಲೀಸರಿಗೆ ಈ ಕುರಿತು ದೂರು ನೀಡಲಾಗಿದ್ದು, ಅವರ ವಿರುದ್ಧ ಮಾನನಷ್ಟ ಮತ್ತು ಇತರ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲು ಮನವಿ ಮಾಡಲಾಗಿದೆ. ವಿವೇಕ್ ಅಗ್ನಿಹೋತ್ರಿ ವಿರುದ್ಧ ಪತ್ರಕರ್ತ ಮತ್ತು ಸೆಲೆಬ್ರಿಟಿ PR  ಮ್ಯಾನೇಜರ್ ರೋಹಿತ್ ಪಾಂಡೆ ಅವರು ತಮ್ಮ ವಕೀಲ ಅಲಿ ಕಾಶಿಫ್ ಖಾನ್ ದೇಶಮುಖ್ ಮೂಲಕ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.


ಇದನ್ನೂ ಓದಿ-ಹಿಜಾಬ್ ಧರಿಸಲು ಅವಕಾಶ ನೀಡಿ ಎಂದು ಸಿದ್ದರಾಮಯ್ಯರಿಂದ ಏಕಪಾತ್ರಾಭಿನಯ: ಬಿಜೆಪಿ ವ್ಯಂಗ್ಯ

ಭೋಪಾಲ್ ಜನರಿಗೆ ಅವಮಾನ (Vivek Agnihotri Caught In A New Controversy)
ದೂರಿನಲ್ಲಿ 'ದಿ ಕಾಶ್ಮೀರ್ ಫೈಲ್ಸ್' (The Kashmir Files News) ನಿರ್ದೇಶಕರು ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ 'ಉದ್ದೇಶಪೂರ್ವಕವಾಗಿ, ನಿರ್ದಾಕ್ಷಿಣ್ಯವಾಗಿ ಮತ್ತು ದುರುದ್ದೇಶಪೂರ್ವಕವಾಗಿ ಭೋಪಾಲಿಗಳನ್ನು ಸಲಿಂಗಕಾಮಿ ಎಂದು ಕರೆದಿದ್ದಾರೆ' ಎನ್ನಲಾಗಿದೆ. ಊರಿನಲ್ಲಿ ಇದುರೋಹಿತ್ ಪಾಂಡೆ ಮೂಲ ನಿವಾಸ ಸ್ಥಾನವಾಗಿರುವ ಭೋಪಾಲ್ ಅನ್ನು ಅಗೌರವಿಸಿ, ಅವಮಾನಿಸಿದಂತೆ ಎಂದು ಬರೆಯಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಬಗ್ಗೆ ಲಿಖಿತ ದೂರು ಸ್ವೀಕರಿಸಲಾಗಿದೆ ಎಂದು ಅಧಿಕಾರಿ ಖಚಿತಪಡಿಸಿದ್ದಾರೆ.


ಇದನ್ನೂ ಓದಿ-RRR:ಬಾಕ್ಸಾಫೀಸ್‌ ಕೊಳ್ಳೆ ಹೊಡೆದ ಆರ್‌ಆರ್‌ಆರ್‌.. ಮೊದಲ ದಿನವೇ 200 ಕೋಟಿ ದಾಟಿದ ಕಲೆಕ್ಷನ್..

ಅಗ್ನಿಹೋತ್ರಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್-153ಎ ಮತ್ತು ಬಿ (ಎರಡು ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), ಸೆಕ್ಷನ್-295ಎ (ಯಾವುದೇ ವರ್ಗದ ಧಾರ್ಮಿಕ ಅಥವಾ ಧಾರ್ಮಿಕ ನಂಬಿಕೆಯನ್ನು ಅವಮಾನಿಸುವ ಮೂಲಕ ಧಾರ್ಮಿಕ ಸಂಘರ್ಷವನ್ನು ಉಂಟುಮಾಡುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯ). ಸೆಕ್ಷನ್ 298 (ಉದ್ದೇಶಪೂರ್ವಕವಾಗಿ ಪದಗಳಿಂದ ಧಾರ್ಮಿಕ ಭಾವನೆಗಳನ್ನು ನೋಯಿಸುವುದು), ಸೆಕ್ಷನ್-500 (ಮಾನನಷ್ಟ) ಮತ್ತು ಸೆಕ್ಷನ್-505 II (ಹಗೆತನ, ದ್ವೇಷ ಅಥವಾ ಕೆಟ್ಟ ಇಚ್ಛೆಯನ್ನು ಉಂಟುಮಾಡುವ ಹೇಳಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಕೋರಲಾಗಿದೆ.


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.