RRR: ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ರಾಜಮೌಳಿ ಅಂದ್ರೆನೆ ಬಿಗ್ ಬಜೆಟ್ ಸಿನಿಮಾ ಅನ್ನೋ ಅಷ್ಟು ಟ್ರೆಂಡ್ ಕ್ರಿಯೇಟ್ ಆಗಿದೆ. ರಾಜಮೌಳಿ ಸಿನಿಮಾ ಸೆಟ್ ಏರಿದಾಗಲೇ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸೋದು ಪಕ್ಕಾ ಆಗಿರುತ್ತೆ. ಬಾಹುಬಲಿ 1 &2 ಬಿಗ್ ಹಿಟ್ ಬಳಿಕ ಇದೀಗ RRR ಚಿತ್ರ ಬಾಕ್ಸಾಫೀಸ್ ನಲ್ಲಿ ದಾಖಲೆ ಬರೆದಿದೆ.
ರಿಲೀಸ್ ಗೂ ಮುಂಚೆಯೇ ಕುತೂಹಲ ಹುಟ್ಟುಹಾಕಿದ್ದ RRR ಮೊದಲ ದಿನವೇ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದೆ. ರಿಲೀಸ್ ಆದ 24 ಗಂಟೆಯಲ್ಲೇ ಕೋಟಿ ಕೋಟಿ ಬಾಚಿಕೊಂಡಿದೆ.
RRR ರಿಲೀಸ್ ಆಗಿ ಒಂದು ದಿನ ಕಳೆದಿದೆ. ಮೊದಲ ದಿನವೆ ಸಿನಿಮಾ ನೋಡಿದ ಮಂದಿ ಚಿತ್ರಕ್ಕೆ ಜೈಕಾರ ಹಾಕುತ್ತಿದ್ದಾರೆ. ರಾಮ್ ಚರಣ್ (Ram Charan) ಮತ್ತು ಜೂನಿಯರ್ ಎನ್‌ಟಿಆರ್ ಪಾತ್ರಗಳನ್ನು ಮೆಚ್ಚಿ ಕೊಂಡಾಡಿದ್ದಾರೆ. ಈ ಹಿಂದೆ ಈ ಇಬ್ಬರು ನಟರನ್ನು ಈ ಅವತಾರದಲ್ಲಿ ನೋಡಿರದ ಪ್ರೇಕ್ಷಕರು ಇವರ ಪಾತ್ರಗಳನ್ನು ಮೆಚ್ಚಿದ್ದಾರೆ.
ಇದನ್ನೂ ಓದಿ- RRR full HD movie LEAKED: ಹೊಸದಾಗಿ ಬಿಡುಗಡೆಯಾದ ಮೆಗಾ ಸಿನಿಮಾಗೆ ಶಾಕ್ ಕೊಟ್ಟ Tamilrockers..!
RRR ರಿಲೀಸ್‌ಗೂ ಮುನ್ನವೇ ಕಲೆಕ್ಷನ್ ಬಗ್ಗೆ ಹೆಚ್ಚಿನ ಲೆಕ್ಕಾಚಾರಗಳು ಹುಟ್ಟಿ ಕೊಂಡಿದ್ದವು. ಇದೀಗ RRR ಚಿತ್ರದ ಮೊದಲ ದಿನದ ಕಲೆಕ್ಷನ್ ಬಗ್ಗೆ ಮಾಹಿತಿ ಹೊರ ಬಿದ್ದಿದ್ದು, ದೊಡ್ಡ ಮಟ್ಟದ ದಾಖಲೆಯನ್ನೇ ಬರೆದಿದೆ.
ವರದಿಯ ಪ್ರಕಾರ RRR ಚಿತ್ರದ ಮೊದಲ ದಿನ ವಿಶ್ವದಾದ್ಯಂತ ಒಟ್ಟಾರೆ 260 ಕೋಟಿ ದೋಚಿದೆ. ಆಂಧ್ರ ಮತ್ತು ತೆಲಂಗಾಣ ಸೇರಿ 120 ಕೋಟಿ ಗಳಿಕೆ ಮಾಡಿದೆ. ತಮಿಳುನಾಡಿನಲ್ಲಿ ಸುಮಾರು ರೂ 10 ಕೋಟಿ ಗಳಿಸಿದರೆ, ಕರ್ನಾಟಕ ಮತ್ತು ಕೇರಳದಲ್ಲಿ ಕ್ರಮವಾಗಿ ರೂ. 14 ಕೋಟಿ ಮತ್ತು ರೂ. 4 ಕೋಟಿ ಗಳಿಸಿದೆ.. ಅಲ್ಲದೇ RRR ಹಿಂದಿಯಲ್ಲಿ ಮೊದಲ ದಿನ 25 ಕೋಟಿ ರೂ. ಬಾಚಿಕೊಂಡಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ- The Kashmir Files Box Office Collection: ವಿವೇಕ್ ಅಗ್ನಿಹೊತ್ರಿಯ 200 ಕೋಟಿಯ ಘರ್ಜನೆ
ಇದು ನಿರೀಕ್ಷೆಯನ್ನು ಮೀರಿಸಿದ ಕಲೆಕ್ಷನ್ ಆಗಿದ್ದು, ರಾಜಮೌಳಿ ಸಿನಿಮಾ ಮತ್ತೊಮ್ಮೆ ಬಾಕ್ಸಾಫೀಸ್ ನಲ್ಲಿ ಸದ್ದು ಮಾಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.