The Kerala Story OTT Release: ಲವ್ ಜಿಹಾದ್ ಹಿನ್ನೆಲೆಯಲ್ಲಿ ತಯಾರಾದ 'ದಿ ಕೇರಳ ಸ್ಟೋರಿ' ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಇದೀಗ ಈ ಚಿತ್ರವು ಶೀಘ್ರದಲ್ಲೇ OTT ನಲ್ಲಿ ಬಿಡುಗಡೆಯಾಗಲಿದೆ. ಈ ಸುದ್ದಿಯಿಂದ ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ. ವಿಶೇಷವೆಂದರೆ ಈ ಚಿತ್ರ ಮೇ 5 ರಂದು ಬಿಡುಗಡೆಯಾಗಿದ್ದು ಅಂದಿನಿಂದ ಇಲ್ಲಿಯವರೆಗೆ ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್‌ 200 ಕೋಟಿ ಗಡಿ ದಾಟಿದೆ.


COMMERCIAL BREAK
SCROLL TO CONTINUE READING

ವರದಿಗಳ ಪ್ರಕಾರ, 'ದಿ ಕೇರಳ ಸ್ಟೋರಿ' ಚಿತ್ರದ OTT ಹಕ್ಕುಗಳನ್ನು ZEE 5 ಖರೀದಿಸಿದೆ. ಶೀಘ್ರದಲ್ಲೇ ZEE 5 ನಲ್ಲಿ ಸಿನಿಮಾ ರಿಲೀಸ್‌ ಆಗಲಿದೆಯಂತೆ. ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ ಮತ್ತು ಚಿತ್ರದ ನಿರ್ಮಾಪಕರು ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಇದು ಸಂಭವಿಸಿದಲ್ಲಿ, ಥಿಯೇಟರ್‌ನಲ್ಲಿ ಹಣ ಗಳಿಸಿದ ನಂತರ, ಈ ಚಿತ್ರವು OTT ಯಲ್ಲೂ ಉತ್ತಮ ಗಳಿಕೆ ಮಾಡುವ ನಿರೀಕ್ಷೆ ದುಪ್ಪಟ್ಟಾಗಿದೆ.


ಇದನ್ನೂ ಓದಿ: ಟರ್ಕಿಯಲ್ಲಿ ಸಮಂತಾ ಜೊತೆ ವಿಜಯ್ ದೇವರಕೊಂಡ.. ಬಿಯರ್ ಕುಡಿದು ಚಿಲ್‌ ಮಾಡಿದ ಫೋಟೋ ವೈರಲ್‌!


'ದಿ ಕೇರಳ ಸ್ಟೋರಿ' ಚಿತ್ರ ಬಿಡುಗಡೆಗೂ ಮುನ್ನ ಮತ್ತು ನಂತರ ನಿರಂತರ ಚರ್ಚೆಯಲ್ಲಿದೆ. ಈ ಚಿತ್ರ ಈಗಾಗಲೇ  200 ಕೋಟಿ ಗಡಿ ದಾಟಿದೆ. ಇಂತಹ ಪರಿಸ್ಥಿತಿಯಲ್ಲಿ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾದ ತಕ್ಷಣ ಇನ್ನಷ್ಟು ಗಳಿಕೆ ಮಾಡಬಹುದು ಎಂಬ ನಿರೀಕ್ಷೆಯಿದೆ. ಮೂವರು ಹುಡುಗಿಯರ ಕಥೆಯನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಶಾಲಿನಿ ಉನ್ನಿಕೃಷ್ಣನ್ ಅವರನ್ನು ಹೇಗೆ ಫಾತಿಮಾ ಮಾಡಲಾಯಿತು ಮತ್ತು ಆಕೆಯನ್ನು ಹೇಗೆ ಬ್ರೈನ್ ವಾಶ್ ಮಾಡಿ ಭಯೋತ್ಪಾದಕ ಸಂಘಟನೆ ಐಸಿಸ್‌ಗೆ ಸೆಳೆಯಯಲಾಯಿತು ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ.


ಈ ಚಿತ್ರ ನಿರಂತರವಾಗಿ ವಿವಾದಗಳಲ್ಲಿ ಸಿಲುಕಿಕೊಂಡಿದೆ. ಈ ಚಿತ್ರ ಕೂಡ ಹಲವು ರಾಜ್ಯಗಳಲ್ಲಿ ಬಿಡುಗಡೆಯಾಗಿರಲಿಲ್ಲ. ಈ ಚಿತ್ರದಲ್ಲಿ ಅದಾ ಶರ್ಮಾ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರವನ್ನು ಸುದೀಪ್ತೋ ಸೇನ್ ನಿರ್ದೇಶಿಸಿದ್ದಾರೆ ಮತ್ತು ವಿಪುಲ್ ಅಮೃತಶಾ ಲಾಲ್ ನಿರ್ಮಿಸಿದ್ದಾರೆ.


ಇದನ್ನೂ ಓದಿ: Bhairati Rangal: ಭೈರತಿ ರಣಗಲ್‌ನಲ್ಲಿ ಶಿವಣ್ಣಗೆ ಹೀರೋಯಿನ್‌ ಯಾರು..!?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.