Bhairati Rangal: ಭೈರತಿ ರಣಗಲ್‌ನಲ್ಲಿ ಶಿವಣ್ಣಗೆ ಹೀರೋಯಿನ್‌ ಯಾರು..!?

Bhairati Rangal: ಭೈರತಿ ರಣಗಲ್‌ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಅವರಿಗೆ ನಾಯಕಿ ಯಾರೆಂದು ಎಲ್ಲರಿಗೂ ಕುತೂಹಲ ಮೂಡಿಸಿದೆ. ಆಕ್ಷನ್ ಥ್ರಿಲ್ಲರ್ ಮಫ್ತಿ ನಂತರ ನರ್ತನ್ - ಶಿವಣ್ಣ ಜೋಡಿ ಮತ್ತೊಮ್ಮೆ ಕೈಜೋಡಿಸಿದ್ದಾರೆ. ಗೀತಾ ಪಿಕ್ಚರ್ಸ್ ಬ್ಯಾನರ್‌ ಅಡಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.  

Written by - Chetana Devarmani | Last Updated : May 25, 2023, 05:27 PM IST
  • ಶಿವರಾಜ್‌ಕುಮಾರ್ ನಟನೆಯ ಭೈರತಿ ರಣಗಲ್‌
  • ಮತ್ತೆ ಒಂದಾದ ನರ್ತನ್ - ಶಿವಣ್ಣ ಜೋಡಿ
  • ಶಿವಣ್ಣಗೆ ಹೀರೋಯಿನ್‌ ಯಾರು..!?
Bhairati Rangal: ಭೈರತಿ ರಣಗಲ್‌ನಲ್ಲಿ ಶಿವಣ್ಣಗೆ ಹೀರೋಯಿನ್‌ ಯಾರು..!? title=
Bhairati Rangal

Bhairati Rangal: ಸ್ಯಾಂಡಲ್‌ವುಡ್‌ ಸೆಂಚೂರಿ ಸ್ಟಾರ್‌ ಶಿವರಾಜ್‌ಕುಮಾರ್ ಅಭಿಮಾನಿಗಳು ಸದ್ಯ ಅವರ ಮುಂಬರುವ ಸಿನಿಮಾ ಭೈರತಿ ರಣಗಲ್‌ಗಾಗಿ ಕಾದು ಕುಳಿತಿದ್ದಾರೆ. ಶಿವರಾಜ್‌ಕುಮಾರ್ ಅವರ ಬಹು ನಿರೀಕ್ಷಿತ ಯೋಜನೆಗಳಲ್ಲಿ   ಭೈರತಿ ರಣಗಲ್ ಒಂದಾಗಿದೆ. ನರ್ತನ್ ಅವರು ಈ ಸಿನಿಮಾ ನಿರ್ದೇಶಿಸಿದ್ದಾರೆ. 2017 ರ ಆಕ್ಷನ್ ಥ್ರಿಲ್ಲರ್ ಮಫ್ತಿ ನಂತರ ನರ್ತನ್ - ಶಿವಣ್ಣ ಜೋಡಿ ಮತ್ತೊಮ್ಮೆ ಕೈಜೋಡಿಸಿದ್ದಾರೆ. ಪ್ರೊಡಕ್ಷನ್ ಹೌಸ್ ಗೀತಾ ಪಿಕ್ಚರ್ಸ್ ಬ್ಯಾನರ್‌ ಅಡಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.

ಇದನ್ನೂ ಓದಿ: ಪುಷ್ಪ 2 ಸಿನಿಮಾದಲ್ಲಿ ರಣವೀರ್ ಸಿಂಗ್.. ಈ ಪಾತ್ರದಲ್ಲಿ ಬಾಲಿವುಡ್‌ ಸ್ಟಾರ್‌!!

ಭೈರತಿ ರಣಗಲ್ ಚಿತ್ರದ ನಾಯಕಿ ಇವರೇನಾ?

ಸಿನಿಮಾ ಘೋಷಣೆಯಾದಾಗಿನಿಂದಲೂ ಅಭಿಮಾನಿಗಳು ಸಿನಿಮಾದ ನಾಯಕಿ ಯಾರೆಂದು ತಿಳಿಯಲು ಕಾತರರಾಗಿದ್ದರು. ವರದಿಗಳ ಪ್ರಕಾರ, ಸಿನಿಮಾಗೆ ನಾಯಕಿಯನ್ನು ಇನ್ನೂ ಆಯ್ಕೆ ಮಾಡಲಾಗಿಲ್ಲ ಎಂದು ನಿರ್ದೇಶಕ ನರ್ತನ್ ಬಹಿರಂಗಪಡಿಸಿದರು. ಹುಡುಕಾಟ ಇನ್ನೂ ಮುಂದುವರೆದಿದೆ ಎಂದು ಹೇಳಿದರು. ಭೈರತಿ ರಣಗಲ್ ಚಿತ್ರದ ಶೂಟಿಂಗ್ ಜನವರಿ 2024 ರಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.

ಸಾಲು ಸಾಲು ಸಿನಿಮಾಗಳಲ್ಲಿ ಶಿವರಾಜ್‌ಕುಮಾರ್‌ ಬ್ಯುಸಿ: 

ಭೈರತಿ ರಣಗಲ್ ಹೊರತಾಗಿ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಜೊತೆ ಜೈಲರ್‌ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ನಟಿಸಲಿದ್ದಾರೆ. ಚಿತ್ರನಿರ್ಮಾಪಕ ನೆಲ್ಸನ್ ದಿಲೀಪ್‌ಕುಮಾರ್ ಅವರ ನೇತೃತ್ವದಲ್ಲಿ ಈ ಯೋಜನೆಯಲ್ಲಿ ಮೋಹನ್‌ಲಾಲ್ ಮತ್ತು ಜಾಕಿ ಶ್ರಾಫ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: 60ರ ಹರೆಯದಲ್ಲಿ ಎರಡನೇ ಮದುವೆಯಾದ ನಟ

ಕ್ಯಾಪ್ಟನ್ ಮಿಲ್ಲರ್‌ನಲ್ಲಿ ಧನುಷ್ ಅವರೊಂದಿಗೆ ಶಿವರಾಜ್‌ಕುಮಾರ್‌ ತೆರೆ ಹಂಚಿಕೊಳ್ಳಲಿದ್ದಾರೆ. ಬಹು ನಿರೀಕ್ಷಿತ ಚಿತ್ರದಲ್ಲಿ ಅವರ ಅಣ್ಣನಾಗಿ ಕಾಣಿಸಿಕೊಳ್ಳಲಿದ್ದಾರೆ.

ಶಿವರಾಜಕುಮಾರ್ ಅವರು ಕಾರ್ತಿಕ್ ಅದ್ವೈತ್ ಅವರೊಂದಿಗೆ ಹೆಸರಿಸದ ಸಿನಿಮಾದಲ್ಲೂ ನಟಿಸಲಿದ್ದಾರೆ ಎಂಬ ಊಹಾಪೋಹಗಳಿವೆ. ಪ್ರೊಡಕ್ಷನ್ ಬ್ಯಾನರ್ ಎಸ್‌ಸಿಎಫ್‌ಸಿ ಅಡಿಯಲ್ಲಿ ಸುಧೀರ್ ಚಂದ್ರ ಪಾದಿರಿ ಪ್ಯಾನ್-ಇಂಡಿಯಾ ಆಕ್ಷನ್ ಥ್ರಿಲ್ಲರ್ ಅನ್ನು ನಿರ್ಮಿಸುತ್ತಿದ್ದಾರೆ.

ಇದನ್ನೂ ಓದಿ: ಕಾರ್ತಿ ಸಿನಿಮಾಗೆ ಡಿವೈನ್ ಸ್ಟಾರ್ ಸಾಥ್‌, ʻಜಪಾನ್ʼ ಟೀಸರ್ ರಿಲೀಸ್ ಮಾಡಿದ ರಿಷಬ್ ಶೆಟ್ಟಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News