ಬೆಂಗಳೂರು: ಬಹುನಿರೀಕ್ಷಿತ ಕೆಜಿಎಫ್ 2 ಚಿತ್ರದ ಟೀಸರ್ ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇ ದಿನದಂದು ಬಿಡುಗಡೆಯಾಗಬೇಕಾಗಿತ್ತು ಆದರೆ,ಆನ್ ಲೈನ್ ನಲ್ಲಿ ಸೋರಿಕೆ ಆದ ಹಿನ್ನಲೆಯಲ್ಲಿ ನಾಳೆ ರಿಲಿಸ್ ಆಗಬೇಕಿದ್ದ ಟ್ರಿಸರ್ ನ್ನು ಇಂದೇ ಬಿಡುಗಡೆ ಮಾಡಲಾಗಿದೆ.ಯಶ್ (Yash) ಅವರ 35 ನೇ ಹುಟ್ಟುಹಬ್ಬದ ಆಚರಣೆ ಹಿನ್ನಲೆಯಲ್ಲಿ ಟೀಸರ್ ನ್ನು ಶುಕ್ರವಾರ ಬೆಳಿಗ್ಗೆ 10:16 ಕ್ಕೆ ಬಿಡುಗಡೆ ಮಾಡಲು ಸಮಯವನ್ನು ನಿಗದಿಪಡಿಸಲಾಗಿತ್ತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: KGF Chapter 2: ಬಿಡುಗಡೆಯಾಗುತ್ತಿದ್ದಂತೆ ಟ್ರೆಂಡ್ ಸೃಷ್ಟಿಸಿದೆ ಈ ಚಿತ್ರದ ಫಸ್ಟ್ ಲುಕ್


ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ 'KGF 2' ತಂಡದಿಂದ ಗಿಫ್ಟ್


ನಮಗೆ ರಾಕಿ ತನ್ನ ಶತ್ರುಗಳ ವಿರುದ್ಧದ ದಾಳಿಯ ತೀವ್ರತೆಯನ್ನು ಹೆಚ್ಚಿಸುವ ಒಂದು ನೋಟವನ್ನುಈ ಟೀಸರ್ ನೀಡುತ್ತದೆ.ಈ ವೀಡಿಯೊದಲ್ಲಿ, ಅವರು ಹಗುರವಾದ ಮೆಷಿನ್ ಗನ್ ಸಹಾಯದಿಂದ ಶತ್ರು ಶಿಬಿರವನ್ನುಎದುರಿಸುವ ತೀವ್ರತೆಯನ್ನು ನೋಡುತ್ತೇವೆ. ಇದೆ ಸಂದರ್ಭದಲ್ಲಿ ಸಂಜಯ್ ದತ್ ನಿರ್ವಹಿಸಿದ ಅಧೀರಾ (Adheera) ಪಾತ್ರದ ಅವರ ಒಂದು ನೋಟವೂ ಸಿಗುತ್ತದೆ.ಅಷ್ಟೇ ಅಲ್ಲದೆ, ರವೀನಾ ಟಂಡನ್ ರಾಜಕಾರಣಿಯ ಪಾತ್ರದಲ್ಲಿ ಗಮನ ಸೆಳೆಯುವುದನ್ನು ಕಾಣುತ್ತೇವೆ.


ಇದನ್ನೂ ಓದಿ: Rocking Star Yash : ಶುಕ್ರವಾರ ರಾಕಿಭಾಯ್ ಜನುಮದಿನ, ಕೆಜಿಎಫ್ 2 ಟೀಸರ್ ರಿಲೀಸ್ ಕೌಂಟ್ ಡೌನ್ ಶುರು


ಒಟ್ಟಾರೆಯಾಗಿ ಟೀಸರ್ ಮತ್ತೊಮ್ಮೆ ನಿರ್ದೇಶಕ ಪ್ರಶಾಂತ್ ನೀಲ್ ತಮ್ಮ ಮೇಕಿಂಗ್ ಮೂಲಕ ಅಭಿಮಾನಿಗಳಲ್ಲಿ ಕೂತುಹಲ ಹೆಚ್ಚಿಸುವ ಅವರ ಕಲೆಗಾರಿಕೆ ಚಿತ್ರಣ ಇದರಲ್ಲಿ ಲಭಿಸುತ್ತದೆ.ಈ ಟೀಸರ್ ಪ್ರಮುಖವಾಗಿ ಯಶ್ ನಿರ್ವಹಿಸಿದ ಭೀಕರ ಕ್ರಿಮಿನಲ್ ರಾಕಿಯ ಪ್ರಯಾಣವನ್ನು ಗುರುತಿಸುತ್ತದೆ ಮತ್ತು ಕೋಲಾರದ ಚಿನ್ನದ ಗಣಿಗಳನ್ನು ಆಳುವ ಬಯಕೆಯು ಅಧೀರಾ ಜೊತೆಗಿನ ಯುದ್ಧಕ್ಕೆ ಕಾರಣವಾಗುತ್ತದೆ.ಕೆಜಿಎಫ್ 2 (KGF Chapter 2) ಚಿತ್ರವೂ ಈ ಬೇಸಿಗೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ


Android Link - https://bit.ly/3hDyh4G
iOS Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.