KBCಯಲ್ಲಿ 5 ಕೋಟಿ ರೂ. ಗೆದ್ದವನ ಕೈಯಲ್ಲಿಗ ಬಿಡಿಗಾಸು ಇಲ್ಲ! ಸುಶೀಲ್ ಕುಮಾರ್ ದುರಂತ ಕಥೆ
‘ಕೌನ್ ಬನೇಗಾ ಕರೋಡ್‌ಪತಿ’ ಸೀಸನ್ 5ರ ವಿಜೇತ ಸುಶೀಲ್ ಕುಮಾರ್ ಅವರ ದುರಂತ ಕಥೆ ಈಗ ಟ್ರೆಂಡಿಂಗ್ ಆಗುತ್ತಿದೆ.
ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್, ಬಿಗ್ ಬಿ ಅಮಿತಾಬ್ ಬಚ್ಚನ್(Amitabh Bachchan) ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್‌ಪತಿ’(Kaun Banega Crorepati)ಯ 13ನೇ ಸೀಸನ್ ಇಂದಿನಿಂದ (ಆಗಸ್ಟ್ 23) ಆರಂಭವಾಗಲಿದೆ. ಕೆಲವು ಬದಲಾವಣೆಗಳೊಂದಿಗೆ ಬಹುನಿರೀಕ್ಷಿತ ಕಾರ್ಯಕ್ರಮ ಮೂಡಿಬರಲಿದೆ ಅಂತಾ ಆಯೋಜಕರು ಮಾಹಿತಿ ನೀಡಿದ್ದಾರೆ. ಕೋಟ್ಯಂತರ ಅಭಿಮಾನಿಗಳು ವೀಕ್ಷಿಸುವ ಈ ರಸಪ್ರಶ್ನೆ ಕಾರ್ಯಕ್ರಮ ಅಪಾರ ಜನಪ್ರಿಯತೆ ಹೊಂದಿದೆ. ಈಗಾಗಲೇ 12 ಸೀಸನ್ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಈ ಮಧ್ಯೆ ಕೆಬಿಸಿ 5ರ ವಿಜೇತ ಸುಶೀಲ್ ಕುಮಾರ್ ಹೆಚ್ಚು ಸದ್ದು ಮಾಡುತ್ತಿದ್ದಾರೆ.
ಹೌದು, ಕೆಬಿಸಿ 5ರ ವಿಜೇತ ಸುಶೀಲ್ ಕುಮಾರ್(Sushil Kumar) ಅವರ ದುರಂತ ಕಥೆ ಈಗ ಟ್ರೆಂಡಿಂಗ್ ಆಗುತ್ತಿದೆ. 13ನೇ ಸೀಸನ್ ಗೆ ಕೌಂಟ್ ಡೌನ್ ಶುರುವಾಗಿರುವ ಬೆನ್ನಲ್ಲೇ ಸುಶೀಲ್ ಕುಮಾರ್ ಜೀವನ ಕಥೆ-ವ್ಯಥೆ ಮುನ್ನಲೆಗೆ ಬಂದಿದೆ. ಕೆಬಿಸಿ 5ರ ವಿನ್ನರ್ ಆಗಿ ಬರೋಬ್ಬರಿ 5 ಕೋಟಿ ರೂ. ಬಹುಮಾನ ಗೆದ್ದ ಈ ವ್ಯಕ್ತಿ ಕೈಯಲ್ಲಿಗ ಬಿಡಿಗಾಸು ಇಲ್ಲ. ಅಚ್ಚರಿಯಾದರೂ ಇದು ನಿಜ. ಕೆಬಿಸಿಯಲ್ಲಿ ಕೋಟಿ ರೂ. ಗೆಲ್ಲುವುದೇ ಬಹುತೇಕರ ಕನಸಾಗಿರುತ್ತದೆ. ಅಂತದ್ದರಲ್ಲಿ ಸುಶೀಲ್ ಕುಮಾರ್ ತಮ್ಮ ಬುದ್ಧಿವಂತಿಕೆಯಿಂದ ಕೆಬಿಸಿ 5ರ ವಿನ್ನರ್ ಆಗಿ ಬರೋಬ್ಬರಿ 5 ಕೋಟಿ ರೂ. ಗೆದ್ದಿದ್ದರು. ಕೋಟಿ ಕೋಟಿ ರೂ. ಕೈಗೆ ಬಂದರೂ ಸುಶೀಲ್ ಕುಮಾರ್(Sushil Kumar)ಈಗ ಮೊದಲಿನಂತಯೇ ಜೀವನ ನಡೆಸುವ ಪರಿಸ್ಥಿತಿಗೆ ಬಂದಿದೆ. 5 ಕೋಟಿ ರೂ. ಗೆದ್ದರೂ ಅವರ ಜೀವನದಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದಿಲ್ಲ.
ಇದನ್ನೂ ಓದಿ: KGF Chapter 2 : ‘ಕೆಜಿಎಫ್ 2’ ಬಿಡುಗಡೆ ದಿನಾಂಕ ರಿವೀಲ್ ಮಾಡಿದ ರಾಕಿಬಾಯ್..!
ಬಿಹಾರ ಮೂಲದ ಸುಶೀಲ್ ಕುಮಾರ್ ‘ಕೌನ್ ಬನೇಗಾ ಕರೋಡ್‌ಪತಿ’(Kaun Banega Crorepati) 5ನೇ ಆವೃತ್ತಿಯಲ್ಲಿ ಗೆಲುವು ಸಾಧಿಸುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದರು. ಸಾಮಾನ್ಯ ವ್ಯಕ್ತಿಯೊಬ್ಬ ತನ್ನ ಬುದ್ಧಿವಂತಿಕೆಯಿಂದ 5 ಕೋಟಿ ರೂ. ಬಹುಮಾನ ಗೆದ್ದಿದ್ದು ಪತ್ರಿಕೆಗಳ ಮುಖಪುಟದಲ್ಲಿ ಸುದ್ದಿಯಾಗಿತ್ತು. ನಂತರ ಕೆಲ ದಿನಗಳು ಮಾತ್ರ ಅವರ ಜೀವನ ಬದಲಾಗಿತ್ತು. ಅತ್ಯಂತ ಶೀಘ್ರದಲ್ಲಿಯೇ ಅವರು ಆರ್ಥಿಕ ದಿವಾಳಿಯಾಗಿ ಮೊದಲಿನಂತೆಯೇ ಜೀವನ ನಡೆಸುವ ಪರಿಸ್ಥಿಗೆ ಬಂದುಬಿಟ್ಟರು.
ಈ ಬಗ್ಗೆ ಸುಶೀಲ್ ತಮ್ಮ ಫೇಸ್‌ಬುಕ್(Facebook) ಖಾತೆಯಲ್ಲಿ ಬರೆದುಕೊಂಡಿದ್ದು, ‘ನನ್ನ ಜೀವನದ ಅಗ್ನಿಪರೀಕ್ಷೆಯಲ್ಲಿ ಕೆಬಿಸಿ 5ರಲ್ಲಿ ಗೆಲುವು ಸಾಧಿಸಿದ ನಂತರ ನಾನು ಅನೇಕ ಹೋರಾಟಗಳನ್ನು ಮಾಡಬೇಕಾಯಿತು. ಕೆಬಿಸಿ ವಿನ್ನರ್ ಆದ ಬಳಿಕ ನನ್ನ ಜೀವನದ ಕೆಟ್ಟ ಘಟ್ಟ ಪ್ರಾರಂಭವಾಯಿತು’ ಅಂತಾ ನೋವಿನಿಂದ ಹೇಳಿಕೊಂಡಿದ್ದಾರೆ. ‘2015-2016 ನನ್ನ ಜೀವನದ ಅತ್ಯಂತ ಸವಾಲಿನ ಸಮಯ. ನನಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಸ್ಥಳೀಯ ಸೆಲೆಬ್ರಿಟಿಯಾಗಿರುವ ಕಾರಣ ನಾನು ಬಿಹಾರ ಸೇರಿದಂತೆ ಅನೇಕ ಕಡೆ ತಿಂಗಳಲ್ಲಿ 10-15 ದಿನ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದೆ. ಪರಿಣಾಮ ನಾನು ಅಧ್ಯಯನ ಮಾಡುವುದನ್ನೇ ಬಿಟ್ಟುಬಿಟ್ಟೆ. ಸ್ಥಳೀಯವಾಗಿ ಪರಿಚಿತ ವ್ಯಕ್ತಿಯಾಗಿದ್ದರಿಂದ ಆ ದಿನಗಳಲ್ಲಿ ನಾನು ಮಾಧ್ಯಮಗಳನ್ನು ಗಂಭೀರವಾಗಿ ಪರಿಗಣಿಸಿದೆ. ನಾನು ಆಗಾಗ ಸಂದರ್ಶನ ನೀಡುತ್ತಿದ್ದೆ. ಈ ವೇಳೆ ನಾನು ಕೆಲವು ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಹೇಳಿಕೊಂಡಿದ್ದೆ.ಆದರೆ ಯಾವುದೇ ಬ್ಯುಸಿನೆಸ್ ನನ್ನ ಕೈಹಿಡಿಯಲಿಲ್ಲ’ ಅಂತಾ ಸುಶೀಲ್ ಕುಮಾರ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ‘ರೈಡರ್’ಗೆ ಡಬ್ಬಿಂಗ್ ಆರಂಭಿಸಿದ ನಿಖಿಲ್ ಕುಮಾರ್ ಸ್ವಾಮಿ..!
‘ಕೆಬಿಸಿ 5ರ ವಿನ್ನರ್(KBC 5 Winner) ಆದ ಬಳಿಕ ನಾನು ಒಂದು ರೀತಿಯ ಲೋಕೋಪಕಾರಿ ಆಗಿದ್ದೆ. ಸಾವಿರಾರು ಕಾರ್ಯಕ್ರಮಗಳಿಗೆ ಹಾಜರಾಗಿದ್ದ ನಾನು ‘ರಹಸ್ಯ ದೇಣಿಗೆ’ ನೀಡುತ್ತಿದ್ದೆ. ಈ ಕಾರಣದಿಂದ ಅನೇಕ ಬಾರಿ ಜನರು ನನಗೆ ಮೋಸ ಮಾಡಿದರು. ಹೀಗೆ ನಾನು ನನ್ನ ಬಳಿ ಇದ್ದ ಹಣವನ್ನೆಲ್ಲಾ ಪೋಲು ಮಾಡಿದೆ’ ಅಂತಾ ಸುಶೀಲ್ ಕುಮಾರ್ ಹೇಳಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ