KGF Chapter 2 : ‘ಕೆಜಿಎಫ್ 2’ ಬಿಡುಗಡೆ ದಿನಾಂಕ ರಿವೀಲ್ ಮಾಡಿದ ರಾಕಿಬಾಯ್..!

‘ಕೆಜಿಎಫ್ ಚಾಪ್ಟರ್ 2’ ಸಿನಿಮಾ ವಿಶ್ವದಾದ್ಯಂತ ಏಪ್ರಿಲ್ 22ರಂದು ಬಿಡುಗಡೆಯಾಗಲಿದೆ.

Written by - Puttaraj K Alur | Last Updated : Aug 22, 2021, 05:48 PM IST
  • ಕೊನೆಗೂ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ರಾಕಿಂಗ್ ಸ್ಟಾರ್ ಯಶ್
  • 2022ರ ಏಪ್ರಿಲ್ 22ಕ್ಕೆ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ‘ಕೆಜಿಎಫ್ ಚಾಪ್ಟರ್-2’
  • ಕೊರೊನಾ ಕಾರಣದಿಂದ 2 ಬಾರಿ ‘ಕೆಜಿಫ್ 2’ ಬಿಡುಗಡೆ ಮುಂದೂಡಿಕೆಯಾಗಿತ್ತು
 KGF Chapter 2 : ‘ಕೆಜಿಎಫ್ 2’ ಬಿಡುಗಡೆ ದಿನಾಂಕ ರಿವೀಲ್ ಮಾಡಿದ ರಾಕಿಬಾಯ್..! title=
‘ಕೆಜಿಎಫ್-2’ ಸಿನಿಮಾ ಬಿಡುಗಡೆ ದಿನಾಂಕ ರಿವೀಲ್ ಆಗಿದೆ (Photo Courtesy: Twitter/@TheNameIsYash)

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಕೆಜಿಎಫ್ ಚಾಪ್ಟರ್ 2’(KGF Chapter 2) ಚಿತ್ರದ ಬಿಡುಗಡೆ ದಿನಾಂಕವು ಕೊನೆಗೂ ರಿವೀಲ್ ಆಗಿದೆ. ಈ ಸಿನಿಮಾದ ರಿಲೀಸ್ ಗಾಗಿ ಇಡೀ ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿದೆ. ಕೋಟ್ಯಂತರ ಅಭಿಮಾನಿಗಳು ‘ಕೆಜಿಎಫ್ 2’ ವೀಕ್ಷಿಸಲು ತುದಿಗಾಲ ಮೇಲೆ ನಿಂತು ಕಾಯುತ್ತಿದ್ದಾರೆ. ರಾಕಿಬಾಯ್ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಡ್ ನೀಡಿದ್ದಾರೆ.

ಗಲ್ಲಾಪೆಟ್ಟಿಗೆ ಕೊಳ್ಳೆಹೊಡೆದು ಕೆಜಿಫ್ ಸಿನಿಮಾ ಸಖತ್ ಸದ್ದು ಮಾಡಿದೆ. ರಾಕಿಂಗ್ ಸ್ಟಾರ್ ಯಶ್(Rocking Star Yash)ಗೆ ನ್ಯಾಷನಲ್ ಸ್ಟಾರ್ ಪಟ್ಟ ತಂದುಕೊಟ್ಟಿರುವ ಈ ಸಿನಿಮಾದ ಮುಂದುವರಿದ ಭಾಗವು ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಫೋಸ್ಟರ್, ಟೀಸರ್ ಮತ್ತು ಟ್ರೈಲರ್ ಗಳ ಮೂಲಕ ಅಭಿಮಾನಿಗಳ ಮನಸೆಳೆದಿರುವ ‘ಕೆಜಿಎಫ್ 2’ ಸಿನಿಮಾ ಯಾವಾಗ ರಿಲೀಸ್ ಆಗುತ್ತೋ ಅಂತಾ ಸಿನಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಮಧ್ಯೆ ಇಂದು ರಾಕಿಬಾಯ್ ಯಶ್ ಚಿತ್ರದ ಬಿಡುಗಡೆ ದಿನಾಂಕವನ್ನು ರಿವೀಲ್ ಮಾಡಿದ್ದಾರೆ.

ಇದನ್ನೂ ಓದಿ: ರೈಡರ್’ಗೆ ಡಬ್ಬಿಂಗ್ ಆರಂಭಿಸಿದ ನಿಖಿಲ್ ಕುಮಾರ್ ಸ್ವಾಮಿ..!

2022ರ ಏಪ್ರಿಲ್ 22ಕ್ಕೆ ತೆರೆಮೇಲೆ ರಾಕಿಬಾಯ್ ಅಬ್ಬರ..!

ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ(Social Media) ಖಾತೆಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಯಶ್ ಮತ್ತು ಚಿತ್ರತಂಡವು ‘ಕೆಜಿಎಫ್ ಚಾಪ್ಟರ್ 2’ ಸಿನಿಮಾ ವಿಶ್ವದಾದ್ಯಂತ ಏಪ್ರಿಲ್ 22ರಂದು ಬಿಡುಗಡೆಯಾಗಲಿದೆ’ ಅಂತಾ ಹೇಳಿದ್ದಾರೆ. ‘ಕೆಜಿಎಫ್ 2’ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿವೆ. ಕಳೆದ ವರ್ಷವೇ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಕೋವಿಡ್-19 ಲಾಕ್ ಡೌನ್ ಇದ್ದಿದ್ದರಿಂದ ಚಿತ್ರಮಂದಿಗಳು ಸಂಪೂರ್ಣವಾಗಿ ಬಂದ್ ಆಗಿದ್ದವು. ಹೀಗಾಗಿ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿತ್ತು. 2021ರ ಜುಲೈನಲ್ಲಿ ಚಿತ್ರಬಿಡುಗಡೆ ಮಾಡುವುದಾಗಿ ಮತ್ತೆ ಚಿತ್ರತಂಡ ಘೋಷಿಸಿತ್ತು. ಕೊರೊನಾ 2ನೇ ಅಲೆಯಿಂದ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಹೇರಿದ್ದರಿಂದ ಚಿತ್ರದ ಬಿಡುಗಡೆ ದಿನಾಂಕವನ್ನುಮತ್ತೆ ಮುಂದೂಡಿಕೆ ಮಾಡಲಾಗಿತ್ತು.

ಬಹುಕೋಟಿ ಬಜೆಟ್ ನ ‘ಕೆಜಿಎಫ್-2’ ಚಿತ್ರದಲ್ಲಿ ರಾಕಿಭಾಯ್ ಜೊತೆ ಬಾಲಿವುಡ್ ಖ್ಯಾತ ನಟರಾದ ಸಂಜಯ್ ದತ್ (Sanjay Dutt) , ರವೀನಾ ಟಂಡನ್ ಕೂಡ ನಟಿಸಿದ್ದಾರೆ. ಅಲ್ಲದೆ, ಚಿತ್ರದ ಹಿಂದಿ ರೈಟ್ಸ್ ಬಹು ದೊಡ್ಡ ಮೊತ್ತಕ್ಕೆ ಮಾರಾಟವಾಗಿರುವ ಬಗ್ಗೆಯೂ ವರದಿಯಾಗಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಚಿತ್ರವು ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಪತ್ತೇದಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಪ್ರಿಯಾಂಕ ಉಪೇಂದ್ರ..!

ಸಾರ್ವಕಾಲಿಕ ದಾಖಲೆ ಬರೆದಿದ್ದ ಕೆಜಿಎಫ್

2018ರ ಡಿಸೆಂಬರ್ 21ರಂದು ಬಿಡುಗಡೆಯಾಗಿದ್ದ ಕೆಜಿಎಫ್ ಚಾಪ್ಟರ್ 1(KGF Chapter 1) ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು. ಕನ್ನಡ ಚಿತ್ರವೊಂದು 250 ಕೋಟಿ ರೂ. ಕ್ಲಬ್ ಸೇರಿದ ಸಾರ್ವಕಾಲಿಕ ದಾಖಲೆ ಬರೆದಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News