ಬೆಂಗಳೂರು: ಎಸ್‌ಜಿಎಸ್ ಕ್ರಿಯೇಶನ್ಸ್ ಅಡಿಯಲ್ಲಿ, ಎಸ್‌ಜಿ ಸತೀಶ್ ನಿರ್ಮಾಣ, ಗುರುಮೂರ್ತಿ ರಚನೆ ಮತ್ತು ನಿರ್ದೇಶನದ ’ಉಗ್ರಾವತಾರ’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಎಂಎಂಬಿ ಲೆಗೆಸಿಯಲ್ಲಿ ಅದ್ದೂರಿಯಾಗಿ ನಡೆಯಿತು. ರಿಯಲ್ ಸ್ಟಾರ್ ಉಪೇಂದ್ರ ತುಣುಕುಗಳನ್ನು ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮಧುಮೇಹಕ್ಕೆ ಮನೆ ಮದ್ದು: ಈ ಆರು ವಸ್ತುಗಳಿಂದ ಸಿಗಲಿದೆ ನಿಮ್ಮ ಕಾಯಿಲೆಗೆ ಮುಕ್ತಿ


ನಂತರ ಮಾತನಾಡಿ, ನಿರ್ದೇಶಕರ ಶ್ರಮ ಇದರಲ್ಲಿ ಕಾಣಿಸುತ್ತದೆ. ಆದರೂ ಅವರು ದುಗಡದಿಂದ ಇದ್ದಾರೆ. ಮೊದಲ ಬಾರಿ ನನಗೂ ಅದೇ ಆಗಿತ್ತು. ಭವಿಷ್ಯದಲ್ಲಿ ನೀವು ಸ್ಟಾರ್ ನಿರ್ದೇಶಕರಾಗುತ್ತಿರಾ. ಮನೆಯಲ್ಲಿ ಉಗ್ರಾವತಾರ ಅವತಾರವನ್ನು ನೋಡಿದ್ದೇನೆ. ಮುಂದೆ ನೀವುಗಳು ನೋಡುತ್ತಿರಾ. ಆದರೆ ಪೋಲೀಸ್‌ರು ಗ್ಲಾಮರಸ್ ಆಗಿ ಕಾಣಿಸಬಾರದು. ಅದೇ ನನ್ನ ಕಡೆಯಿಂದ ಆಕ್ಷೇಪಣೆ. ಗ್ಲಾಮರಸ್ ಆಗಿ ಕಂಡರೆ ರೌಡಿಗಳನ್ನು ಹೇಗೆ ಸದೆಬಡಿಯುತ್ತಿರೆಂದು ಸಭೆಯನ್ನು ನಗೆಯ ಲೋಕಕ್ಕೆ ಕರೆದುಕೊಂಡು ಹೋದರು.


ಮಾತು ಮುಂದುವರೆಸುತ್ತಾ, ನಿಮ್ಮಗಳ, ಜನರ ಆರ್ಶಿವಾದ ಇದ್ದರೆ ನೂರಾರು ಹೊಸ ಕಲಾವಿದರು ಹುಟ್ಟಿಕೊಳ್ಳುತ್ತಾರೆ. ಹತ್ತಾರು ಕುಟುಂಬಗಳ ದೀಪ ಬೆಳಗುತ್ತೆ. ಸಣ್ಣ ಪುಟ್ಟ ತಪ್ಪುಗಳು ಇರುತ್ತೆ. ಅದನ್ನು ಕ್ಷಮಿಸುವಂತ ದೊಡ್ಡ ಗುಣ ನಮ್ಮ ಕನ್ನಡಿಗರಲ್ಲಿ ಇದೆ. ಸಿನಿಮಾ ನೋಡದೆ ಅಭಿಪ್ರಾಯ ತಿಳಿಸಬೇಡಿರೆಂದು ಕೋರಿಕೊಂಡರು.


ನಾಯಕಿ ಪ್ರಿಯಾಂಕ ಉಪೇಂದ್ರ ಮಾತನಾಡಿ ಈ ಪಾತ್ರವನ್ನು ನನ್ನಿಂದ ಮಾಡಲು ಸಾಧ್ಯನಾ ಎಂಬ ಪ್ರಶ್ನೆ ಕಾಡಿತು. ಭಾರತದಲ್ಲಿ ಹೆಣ್ಣಮಕ್ಕಳ ಮೇಲೆ ಶೋಷಣೆ ನಡೆಯುತ್ತಲೆ ಇದೆ. ಸ್ವಯಂರಕ್ಷಣೆ, ಸುರಕ್ಷ ಆಪ್, ಪೋಲೀಸರಿಗೂ ಗೌರವ ಕೊಡಿ. ಅವರು ಸಮಾಜಕ್ಕೆ ರಕ್ಷಣೆ ಜತೆಗೆ ಸಹಾಯ ಮಾಡುತ್ತಾರೆ ಎಂಬುದನ್ನು ಹೇಳಲಾಗಿದೆ ಎಂದರು.


ಮೇಡಂ ಕಥೆ ಕೇಳಿ ನಾನು ಮಾಡುತ್ತೇನೆಂದು ಹೇಳಿದ ದಿನದಿಂದ ಇಲ್ಲಿಯವರೆಗೂ ಪ್ರೋತ್ಸಾಹ ಕೊಡುತ್ತಿದ್ದಾರೆ. ಸಾಮಾಜಿಕ ಕಳಕಳಿ, ಹೆಣ್ಣಿಗೆ ಹೇಗೆ ಗೌರವ ಕೊಡಬೇಕು. ಅಮ್ಮ, ಅಕ್ಕ, ತಂಗಿಯನ್ನು ನೋಡುವಂತೆ, ಹೊರಗಡೆ ಅದೇ ರೀತಿಯಲ್ಲಿ ಕಾಣಬೇಕು. ಸಮಾಜದಲ್ಲಿ ನಡೆಯತಕ್ಕಂತ ಒಂದಷ್ಟು ನೈಜ ಅಂಶಗಳನ್ನು ಚಿತ್ರರೂಪಕ್ಕೆ ಬಳಸಲಾಗಿದೆ. ಮೇಡಂಗೆ ಈ ಚಿತ್ರದಿಂದ ಆಕ್ಷನ್ ಕ್ವೀನ್ ಆಗಿದ್ದಾರೆ. ಐದು ಸಾಹಸಗಳು ವಿಭಿನ್ನವಾಗಿದೆ. ಇದಕ್ಕಾಗಿ ಅವರು ದೇಹಕ್ಕೆ ಕಸರತ್ತು ನೀಡಿ ಕ್ಯಾಮಾರ ಮುಂದೆ ನಿಂತಿದ್ದಾರೆ. ನಾಲ್ಕು ಭಾಷೆಯ ಡಬ್ಬಿಂಗ್ ಮುಗಿದಿದೆ. ಇನ್ನೆನಿದ್ದರೂ ಪ್ರಚಾರ ಶುರು ಮಾಡಬೇಕು. ದಯವಿಟ್ಟು ಟಾಕೀಸ್‌ಗೆ ಬನ್ನಿರೆಂದು ನಿರ್ದೇಶಕ ಗುರುಮೂರ್ತಿ ಅವಲತ್ತು ಮಾಡಿಕೊಂಡರು.


ಇದನ್ನೂ ಓದಿ: ಕ್ರಿಕೆಟ್‌ ಲೋಕದ ಸರದಾರ ಮುತ್ತಯ್ಯ ಮುರಳೀಧರನ್ 5 'ಅಮರ' ದಾಖಲೆಗಳು


ಕಲಾವಿದರುಗಳಾದ ರೋಬೋ ಗಣೇಶ್, ಲತಾ, ದರ್ಶನ್‌ ಸೂರ್ಯ, ಲಕ್ಷೀ ಶೆಟ್ಟಿ, ಚರಣ್, ಲೀಲಾ ಮೋಹನ್, ಕಾರ್ಯನ್, ಸಂಗೀತ ಸಂಯೋಜಕ ಕೃಷ್ಣಬಸ್ರೂರು, ಛಾಯಾಗ್ರಾಹಕ ನಂದಕುಮಾರ್ ಮುಂತಾದವರು ಸಂತಸ ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಉಪೇಂದ್ರ ಸಹೋದರನ ಪುತ್ರ ನಟ ನಿರಂಜನ್‌ ಸುದೀಂಧ್ರ, ನಿದರ್ಶನ್ ಉಪಸ್ತಿತರಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews