Director Rajamouli : ನಿರ್ದೇಶಕ ರಾಜಮೌಳಿ ಸಿನಿಮಾಗಳಲ್ಲಿ ನಟಿಸಲು ಬಾಲಿವುಡ್‌ ನಟರಾದ ಅಮಿರ್‌ ಖಾನ್‌, ಶಾರುಖ್‌ ಖಾನ್‌ ಸಹ ಜಕ್ಕಣ್ಣನ ಸಿನಿಮಾದಲ್ಲಿ ನಟಿಸಲು ಅವಕಾಶ ಕೇಳಿದ್ದರಂತೆ. ಇನ್ನು ಕೆಲವು ನಟರು ರಾಜಮೌಳಿ ನಿರ್ದೇಶನದಲ್ಲಿ ಮೂಡಿಬಂದ ಬಾಹುಬಲಿ ಸಿನಿಮಾದಲ್ಲಿ ನಟಿಸಲು ಬಂದಿದ್ದ ಆಫರನ್ನು ಕಡೆಗಣಿಸಿದ್ದಾರೆ. ಹಾಗಾದರೆ ಯಾರು ಆ ನಟ ನಟಿಯರು..? ಮುಂದೆ ಓದಿ..


COMMERCIAL BREAK
SCROLL TO CONTINUE READING

ಶ್ರೀದೇವಿ
ಬಾಹುಬಲಿ ಸಿನಿಮಾದಲ್ಲಿ ಪ್ರಭಾಸ್‌ ಮತ್ತು ರಾಣಾ ಅವರ ತಾಯಿ ಶಿವಗಾಮಿ ಪಾತ್ರಕ್ಕಾಗಿ ರಾಜಮೌಳಿ ಮೊದಲು ಶ್ರೀದೇವಿ ಅವರನ್ನು ಕೇಳಿದ್ದರಂತೆ ಆದರೆ ನಟಿ ಅಭಿನಯಿಸಲು ನಿರಾಕರಿಸಿದ್ದರು.


ಮೋಹನ್‌ ಲಾಲ್‌
ಕಟ್ಟಪ್ಪನ ಪಾತ್ರಕ್ಕೆ ಮಲಯಾಳಂ ಮೋಹನ್‌ಲಾಲ್‌ ಅವರನ್ನು ಸಂಪರ್ಕಿಸಲಾಗಿತ್ತಂತೆ. ಆದರೆ ಅವರು ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದರಿಂದ ಈ ಚಿತ್ರದಲ್ಲಿ ನಟಿಸಲು ಆಗಿರಲಿಲ್ಲ.


ಇದನ್ನೂ ಓದಿ-30 ರಿಂದ 40 ವರ್ಷ ವಯಸ್ಸಾದರೂ ಇನ್ನೂ ಸಿಂಗಲ್‌ ಈ 10 ಸುಂದರಿಯರು..! ಲಿಸ್ಟ್‌ ಇಲ್ಲಿದೆ ನೋಡಿ


ಅಮಿತಾಬ್‌ ಬಚ್ಚನ್‌ 
ಕಟ್ಟಪ್ಪನ ಪಾತ್ರಕ್ಕಾಗಿ ರಾಜಮೌಳಿ ಅವರು ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌ ಅವರನ್ನು ಸಹ ಕೇಳಿದ್ದರಂತೆ ಆದರೆ ಅಮಿತಾಬ್‌ ಬಚ್ಚನ್‌ ಅವರು ಈ ಪಾತ್ರ ಸ್ವಲ್ಪ ಡಿಫ್ರೆಂಟ್‌ ಆಗಿದೆ ಎಂದು ನಟಿಸಲು ತಿರಸ್ಕರಿಸಿದ್ದರಂತೆ. 


ಸೂರ್ಯ
ತಮಿಳು ನಟ ಸೂರ್ಯ ಅವರನ್ನು ಮೊದಲು ಬಾಹುಬಲಿ ಚಿತ್ರದಲ್ಲಿ ಪ್ರಮುಖ ಪಾತ್ರ ನೀಡಲಾಗಿತ್ತು. ಆದರೆ ನಟ ಸೂರ್ಯ ಪಾತ್ರ ಮಾಡಲು ಒಪ್ಪಿರಲಿಲ್ಲವಂತೆ ಈ ಕುರಿತು ಸಂದರ್ಶನಗಳಲ್ಲಿ ಸ್ವತಃ ಸೂರ್ಯ ಅವರೇ ಹೇಳಿಕೊಂಡಿದ್ದರು. 


ಜಾನ್‌ ಅಬ್ರಹಾಂ
ವಿವೇಕ್‌ ಒಬೆರಾಯ್‌ ನಂತರ ಭಲ್ಲಾಳ ದೇಹನ ಪಾತ್ರಕ್ಕಾಗಿ ರಾಜಮೌಳಿ ಅವರು ಜಾನ್‌ ಅಬ್ರಹಾಂ ಅವರನ್ನು ಕೇಳಿದ್ದರು. ಆಷರೆ ಅವರು ಆ ಪಾತ್ರದಲ್ಲಿ ನಟಿಸಲಿಲ್ಲ. 


ಇದನ್ನೂ ಓದಿ-ಲೇಡಿ ಪಾತ್ರದ ಮೂಲಕ ಗಮನ ಸೆಳೆದ ಸ್ಯಾಂಡಲ್‌ವುಡ್‌ ನಟರಿವರು..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.