Bollywood Top Actress : ಸ್ಟಾರ್‌ ಹೀರೋಗಳಷ್ಟೇ ಅಲ್ಲ, ಇತ್ತಿಚೆಗೆ ಅನೇಕ ನಟಿಯರು ಸಹ ಹಿಟ್‌ ಸಿನಿಮಾಗಳನ್ನು ನೀಡುತ್ತಿದ್ದಾರೆ. ದೊಡ್ಡ ಬಜೆಟ್ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಈ ನಟಿಯರು ಇನ್ನೆರಡು ವರ್ಷಗಳಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲಿದ್ದಾರೆ. ಅನೇಕ ಸ್ಟಾರ್‌ ನಟಿಯರ ಹಲವು ಚಿತ್ರಗಳು 2024 ಮತ್ತು 2025ರಲ್ಲಿ ಬರಲಿವೆ. ಇನ್ನು 2 ವರ್ಷಗಳಲ್ಲಿ ಈ ನಟಿಯರು ಬಾಕ್ಸ್ ಆಫೀಸ್ ನ್ನು ಆಳಲಿದ್ದಾರೆ. 


COMMERCIAL BREAK
SCROLL TO CONTINUE READING

ದೀಪಿಕಾ ಪಡುಕೋಣೆ: ದೀಪಿಕಾ ಪಡುಕೋಣೆ ಅದ್ಭುತ ಅಭಿನಯದ ಮೂಲಕ ತಮ್ಮ ಛಾಪು ಮೂಡಿಸಿದ್ದಾರೆ. ದೀಪಿಕಾ ನಟಿಸಿದ ಹಲವು ಚಿತ್ರಗಳು ಸಕ್ಸಸ್‌ ಕಂಡಿವೆ. ದೀಪಿಕಾ ನಿರ್ದೇಶಕರ ಮೊದಲ ಆಯ್ಕೆಯಂತಿದ್ದಾರೆ. ಈ ವರ್ಷ ದೀಪಿಕಾ ಪಡುಕೋಣೆ ಬಳಿ ಅನೇಕ ಯೋಜನೆಗಳಿವೆ. ದೀಪಿಕಾ ಪಡುಕೋಣೆ ಅವರ 'ಫೈಟರ್' 2024 ರ ಆರಂಭದಲ್ಲಿ ಬಿಡುಗಡೆಯಾಯಿತು. ಈಗ ಅವರ ವೃತ್ತಿ ಜೀವನದ ಅತಿ ದೊಡ್ಡ ಚಿತ್ರ ‘ಕಲ್ಕಿ 2898 ಕ್ರಿ.ಶ’ ಮೇಲೆ ಜನರ ನಿರೀಕ್ಷೆ ಹೆಚ್ಚಿದೆ. ಅದರ ನಂತರ ರೋಹಿತ್ ಶೆಟ್ಟಿಯವರ 'ಸಿಂಗಮ್ ಅಗೇನ್' ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ಅವರಿಗೆ ಮತ್ತೊಂದು ಬಿಗ್ ಬಜೆಟ್ ಸಿನಿಮಾ ಸಿಕ್ಕಿದೆ. ಇದು ಶಾರುಖ್ ಖಾನ್ ಜೊತೆ ಎನ್ನಲಾಗಿದೆ. 


ಇದನ್ನೂ ಓದಿ: ಬೆಂಗಳೂರಿನಲ್ಲಿ ಹೊಸ ರೆಸ್ಟೋರೆಂಟ್ ತೆರೆದ ಶಿಲ್ಪಾ ಶೆಟ್ಟಿ.!


ಜಾನ್ವಿ ಕಪೂರ್ : ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಸಹ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ದಕ್ಷಿಣ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ. ತೆಲುಗು ಇಂಡಸ್ಟ್ರಿಯ ಸೂಪರ್‌ಸ್ಟಾರ್‌ಗಳೊಂದಿಗೆ ಒಂದರ ನಂತರ ಒಂದರಂತೆ ಚಿತ್ರಗಳಿಗೆ ಸಹಿ ಹಾಕಿದ್ದಾರೆ ಎಂದು ಹೇಳಲಾಗಿದೆ. ಶೀಘ್ರದಲ್ಲೇ 'ದೇವರ' ಮೊದಲ ಭಾಗದಲ್ಲಿ ಜೂನಿಯರ್ ಎನ್‌ಟಿಆರ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ವರುಣ್ ಧವನ್ ಜೊತೆ ಮತ್ತೊಂದು ಸಿನಿಮಾ ಸಿಕ್ಕಿದೆ ಎನ್ನಲಾಗಿದೆ. ಅಲ್ಲದೇ ಜಾನ್ವಿ ಕಪೂರ್ ರಾಜ್‌ಕುಮಾರ್ ರಾವ್ ಅವರೊಂದಿಗೆ 'ಮಿಸ್ಟರ್ ಅಂಡ್ ಮಿಸೆಸ್ ಮಹಿ' ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಅವರು 'ಉಲ್ಜ್' ಮತ್ತು ಪ್ಯಾನ್ ಇಂಡಿಯಾ ಚಿತ್ರ 'ಕರ್ಣ' ಗೆ ಸಹಿ ಹಾಕಿದ್ದಾರೆ.‌ 


ಕಿಯಾರಾ ಅಡ್ವಾಣಿ : ಕಿಯಾರಾ ಅಡ್ವಾಣಿ ಕರಿಯರ್‌ ಸಹ ಸದ್ಯ ಉತ್ತುಂಗದಲ್ಲಿದೆ. ವರು ನಟಿಸಿದ ಹೆಚ್ಚಿನ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್‌ ಮಾಡಿವೆ. ಇತ್ತೀಚೆಗೆ ರಣವೀರ್ ಸಿಂಗ್ ಜೊತೆ 'ಡಾನ್ 3' ಸಿನಿಮಾಗೆ ಸಹಿ ಮಾಡಿದ್ದಾರೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿದೆ. ಕಿಯಾರಾ ಅಡ್ವಾಣಿ ಸೌತ್ ಸೂಪರ್‌ಸ್ಟಾರ್ ರಾಮಚರಣ್ ಜೊತೆ 'ಗೇಮ್ ಚೇಂಜರ್' ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೇ ಸಿದ್ಧಾರ್ಥ್ ಜೊತೆ 'ಅದಲ್-ಬದಲ್' ಸಿನಿಮಾ ಆಫರ್ ಕೂಡ ಬಂದಿದೆ. ಕೆಲವು ದಿನಗಳ ಹಿಂದೆ ಹೃತಿಕ್ ರೋಷನ್ ಅವರ 'ವಾರ್ 2' ಗೆ ಕಿಯಾರಾ ಎಂಟ್ರಿ ಕೊಟ್ಟಿದ್ದಾರೆ ಎಂಬ ವರದಿಗಳಿವೆ. ಆದರೆ ನಿರ್ಮಾಪಕರು ಇನ್ನೂ ಈ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ.


ಇದನ್ನೂ ಓದಿ: ಬಿಕಿನಿ ತೊಟ್ಟು ಪ್ರಕೃತಿ ಮಧ್ಯ ಒಂಟಿಯಾಗಿ ನಿಂತ ಸಮಂತಾ..! ವ್ಹಾವ್‌.. ಎಷ್ಟು ಕ್ಯೂಟ್‌


ಆಲಿಯಾ ಭಟ್ : ಒಂದೊಮ್ಮೆ 'ಗಂಗೂಬಾಯಿ'ಯಾಗಿ ಮತ್ತೊಮ್ಮೆ 'ಅನನ್ಯಾ' ಆಗಿ ಆಲಿಯಾ ಭಟ್ ತಮ್ಮ ನಟನೆಯಿಂದ ಎಲ್ಲರನ್ನೂ ಆಕರ್ಷಿಸಿದ್ದಾರೆ. ಆಲಿಯಾ ಭಟ್‌ ಸದಾ ಒಂದಿಲ್ಲೊಂದು ಸಿನಿಮಾದಲ್ಲಿ ಬ್ಯುಸಿಯಾಗಿರುತ್ತಾರೆ. ಕಳೆದ ಕೆಲವು ವರ್ಷಗಳಲ್ಲಿ ಅವರ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸಾಕಷ್ಟು ಸದ್ದು ಮಾಡಿವೆ. 


ಶ್ರದ್ಧಾ ಕಪೂರ್ : ನಟಿ ಶ್ರದ್ಧಾ ಕಪೂರ್ ನಟನೆಯ ಮೂಲಕ ತಮ್ಮ ಛಾಪು ಮೂಡಿಸಿದ್ದಾರೆ. ಶ್ರದ್ಧಾ ಕಪೂರ್ ಸಹ ತಮ್ಮ ಸಿನಿಮಾಗಳ ಮೂಲಕ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.