Elli AvrRam: ಎಲ್ಲೀ ಅವ್ರಾಮ್ ಸ್ವೀಡಿಷ್-ಗ್ರೀಕ್ ನಟಿ.  ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ಜನಿಸಿದರು.. ಆಕೆಯ ತಂದೆ ಗ್ರೀಕ್ ಸಂಗೀತಗಾರ ಮತ್ತು ತಾಯಿ ಸ್ವೀಡಿಷ್ ನಟಿ.. ಆದರೆ ತಂದೆಯ ಸಂಗೀತದಲ್ಲಿ ಭಾರತೀಯ ಮಾಧುರ್ಯಗಳಿರುವ ಕಾರಣ, ಎಲ್ಲೀ ಚಿಕ್ಕ ವಯಸ್ಸಿನಿಂದಲೇ ಭಾರತೀಯ ಸಂಸ್ಕೃತಿಯಲ್ಲಿ ಆಸಕ್ತಿ ಹೊಂದಿದ್ದಳು. ನಟಿ ತಾಯಿಯಾದ ಕಾರಣ ಕೆಲವು ಸಿನಿಮಾಗಳಲ್ಲಿ ನಟಿಸುವ ಅವಕಾಶ ಮಗಳಿಗೂ ಸಿಕ್ಕಿತು. ಆದರೆ ಬಾಲಿವುಡ್ ನಟಿಯಾಗುವ ಗುರಿ ಹೊಂದಿದ್ದ ಎಲ್ಲಿ ಭಾರತಕ್ಕೆ ಕಾಲಿಡುತ್ತಾರೆ..


COMMERCIAL BREAK
SCROLL TO CONTINUE READING

ಎಲ್ಲೀ ಒಂಟಿಯಾಗಿ ಬಂದಿದ್ದರಿಂದ ಮುಂಬೈನಲ್ಲಿ ಆಕೆಗೆ ಬಾಡಿಗೆ ಮನೆ ಕೊಡಲು ಹಲವರು ಹೆದರುತ್ತಿದ್ದರು. ಕೊನೆಗೆ ಜಿರಳೆಗಳು ಮತ್ತು ಹಲ್ಲಿಗಳು ಹೆಚ್ಚು ಓಡಾಡುವ ಅಪಾರ್ಟ್‌ಮೆಂಟ್‌ನಲ್ಲಿ ತಾನು ಉಳಿಯಬೇಕಾಯಿತು ಎಂದು ಅವರು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು... ಎಲ್ಲೀ ಸಿನಿಮಾ ಅವಕಾಶಗಳಿಗಾಗಿ ಪ್ರಯತ್ನಿಸುತ್ತಿದ್ದ ದಿನಗಳಲ್ಲಿ ಆಭರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರಂತೆ..  ‌


ಇದನ್ನೂ ಓದಿ-ಬಿಗ್‌ಬಾಸ್‌ಗೆ ಇಬ್ಬರು ಹಾಟ್‌ ಬ್ಯೂಟೀಸ್‌ ಎಂಟ್ರಿ..! ಇವಾಗ್ಲೇ ಮೈ ಮೇಲೆ ಬಟ್ಟೆ ನಿಲ್ಲಲ್ಲ, ಇನ್ನು ದೊಡ್ಮನೆ ಒಳಗೆ.?.


ಸ್ವೀಡನ್‌ನಲ್ಲಿ ನೃತ್ಯ, ನಟನೆ ಮತ್ತು ಸೌಂದರ್ಯ ಸ್ಪರ್ಧೆಗಳಲ್ಲಿ ಮನ್ನಣೆ ಗಳಿಸಿದ ಎಲ್ಲೀ, ಮುಂಬೈನಲ್ಲಿ ಮಾಡೆಲ್ ಆಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮಾಡೆಲಿಂಗ್ ಏಜೆನ್ಸಿಗೆ ಸೈನ್ ಅಪ್ ಮಾಡಿ ಕೆಲಸದ ವೀಸಾ ಪಡೆದರು. ಆಕೆಗೆ ಚಲನಚಿತ್ರ ಆಡಿಷನ್ ಪಡೆಯಲು ಸಂಸ್ಥೆ ಸಹಾಯ ಮಾಡಿತು. ನಂತರ, ಬಾಲಿವುಡ್ ಹೀರೋ ಅಕ್ಷಯ್ ಕುಮಾರ್ ಜೊತೆ ಎವ್ವೆರಿಡೇ ಇಂಡಸ್ಟ್ರೀಸ್ ಇಂಡಿಯಾ ಕಂಪನಿಯ ಟಿವಿ ಜಾಹೀರಾತಿನಲ್ಲಿ ಎಲ್ಲೀ ನಟಿಸಿದರು. ಇದು ಭಾರತದಲ್ಲಿ ಆಕೆಯ ಮೊದಲ ಪ್ರಮುಖ ಪ್ರಾಜೆಕ್ಟ್‌ ಆಗಿತ್ತು.. 


2013ರಲ್ಲಿ 'ಮಿಕ್ಕಿ ವೈರಸ್' ಚಿತ್ರದ ಮೂಲಕ ನಾಯಕಿಯಾಗಿ ಎಲ್ಲೀ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದರು. ಈ ಚಿತ್ರದಲ್ಲಿ ಮನೀಶ್ ಪಾಲ್ ಜೊತೆ ನಟಿಸಿದ್ದಾರೆ. ಅದೇ ವರ್ಷ ಹಿಂದಿ ಬಿಗ್ ಬಾಸ್-7 ಶೋನಲ್ಲಿ ಅವಕಾಶ ಬಂದಿತ್ತು. ಈ ಶೋನಿಂದ ಆಕೆಗೆ ಒಳ್ಳೆಯ ಮನ್ನಣೆ ಸಿಕ್ಕಿತು. ಆ ನಂತರ ಆಕೆಗೆ ಸಿನಿಮಾ ಆಫರ್‌ಗಳು ಬರಲಾರಂಭಿಸಿದವು.  


2014 ರಲ್ಲಿ, ಬಾಲಿವುಡ್‌ನ 'ಕ್ವೀನ್' ತಮಿಳು ಮತ್ತು ಕನ್ನಡ ರಿಮೇಕ್‌ನಲ್ಲಿ ಎಲ್ಲೀ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಆದರೆ ಈ ಸಿನಿಮಾ ಬಿಡುಗಡೆಯಾಗಲಿಲ್ಲ. 2015 ರಲ್ಲಿ, ಕಪಿಲ್ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ 'ಕಿಸ್ ಕಿಸ್ಕೋ ಪ್ಯಾರ್ ಕರುಣ್' ಚಿತ್ರದಲ್ಲಿ ಎಲ್ಲೀ ನಟಿಸಿದ್ದರು. ಇದು ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಿತ್ತು.. 


ಆ ನಂತರ ಮಲಂಗ್, ಗುಡ್ ಬೈ, ಗಣಪತ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅವೆಲ್ಲವೂ ಬಾಕ್ಸ್ ಆಫೀಸ್‌ನಲ್ಲಿ ಸೋತು ಸುಣ್ಣವಾದವು.. 2021 ರಲ್ಲಿ ಕೋಯಿ ಜಾನೆ ನಾ ಚಿತ್ರದಲ್ಲಿ, ಅಮೀರ್ ಖಾನ್ ಮತ್ತು ಎಲ್ಲಿ 'ಹರ್ ಫನ್ ಮೌಲಾ' ಹಾಡಿನಲ್ಲಿ ಒಟ್ಟಿಗೆ ಸ್ಟೆಪ್‌ ಹಾಕಿದ್ದರು... ಈ ಹಾಡು ಹಿಟ್ ಆಯಿತು.  


ನಟಿ ಎಲ್ಲಿ ಬ್ಯುಸಿಯಾಗಿರುವಾಗ ಸ್ಟಾರ್ ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಡೇಟ್ ಮಾಡಿದರು... ಇಬ್ಬರೂ ಒಟ್ಟಿಗೆ ಇರುವ ಫೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದ್ದವು.. ಹಾರ್ದಿಕ್ ಸಹೋದರ ಕೃನಾಲ್ ಪಾಂಡ್ಯ ಅವರ ಮದುವೆಗೂ ನಟಿ ಹೋಗಿದ್ದರು. ಈ ಮದುವೆ ಸಮಾರಂಭದಲ್ಲಿ ಹಾರ್ದಿಕ್ ಮತ್ತು ಎಲ್ಲಿ ಜೋಡಿಯು ಎಲ್ಲರನ್ನು ಆಕರ್ಷಿಸಿತ್ತು... ಆದಾಗ್ಯೂ, ಕೆಲವು ವರ್ಷಗಳ ನಂತರ ಇಬ್ಬರೂ ಬೇರ್ಪಟ್ಟರು. ಅದರ ನಂತರ ಹಾರ್ದಿಕ್ ನತಾಸಾ ಸ್ಟಾಂಕೋವಿಕ್ ಅವರನ್ನು ವಿವಾಹವಾದರು.  


ಇದನ್ನೂ ಓದಿ-ವಿಚ್ಛೇದನದ ಹಾದಿಯಲ್ಲಿ ಟಾಪ್ ಕಾಮಿಡಿಯನ್?.. ಸೋಷಿಯಲ್‌ ಮಿಡಿಯಾದಲ್ಲಿ ಶಾಕಿಂಗ್‌ ಪೋಸ್ಟ್!!


ಎಲ್ಲೀ ಅವ್ರಾಮ್ ಬಾಲಿವುಡ್‌ಗೆ ಎಂಟ್ರಿ ಕೊಟ್ಟರೂ ಆಕೆಗೆ ಯಶಸ್ಸು ಸಿಗಲಿಲ್ಲ... ಅಲ್ಲದೇ ಕಳೆದ ಏಳು ವರ್ಷಗಳಿಂದ ಆಕೆಗೆ ಒಂದೇ ಒಂದು ಹಿಟ್ ಸಿನಿಮಾ ಇಲ್ಲ. ಅವರು ಕೊನೆಯದಾಗಿ 2023 ರಲ್ಲಿ ಬಿಡುಗಡೆಯಾದ ತಮಿಳು ಚಲನಚಿತ್ರ 'ಕಂಜೂರಿಂಗ್ ಕಣ್ಣಪ್ಪನ್' ನಲ್ಲಿ ಕಾಣಿಸಿಕೊಂಡರು. ನಂತರ ಅವರು ಬೇರೆ ಯಾವುದೇ ಪ್ರಾಜೆಕ್ಟ್‌ಗಳಿಗೆ ಸಹಿ ಹಾಕಲಿಲ್ಲ.


ಆದರೆ ಎಲ್ಲೀ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು Instagram ನಲ್ಲಿ 8.4 ದಶಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.