ವಿಚ್ಛೇದನದ ಹಾದಿಯಲ್ಲಿ ಟಾಪ್ ಕಾಮಿಡಿಯನ್?.. ಸೋಷಿಯಲ್‌ ಮಿಡಿಯಾದಲ್ಲಿ ಶಾಕಿಂಗ್‌ ಪೋಸ್ಟ್!!

Famous comedian: ಏನಾಯಿತೋ ಗೊತ್ತಿಲ್ಲ ಆದರೆ ಸೆಲೆಬ್ರಿಟಿಗಳ ವಿಚ್ಛೇದನ ಹೆಚ್ಚಾಗುತ್ತಿದೆ. ಕಿರುತೆರೆ, ಹಿರಿತೆರೆ, ಟಾಲಿವುಡ್ ಅಥವಾ ಬಾಲಿವುಡ್ ಯಾವುದೇ ಆಗಿರಲಿ, ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ತಕ್ಷಣವೇ ವಿಚ್ಛೇದನವನ್ನು ಘೋಷಿಸುವುದು ರೂಢಿಯಾದಂತಿದೆ...

Written by - Savita M B | Last Updated : Aug 2, 2024, 02:46 PM IST
  • ಬಾಲಿವುಡ್‌ನಲ್ಲಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನದತ್ತ ಹೆಜ್ಜೆ ಹಾಕುತ್ತಿದ್ದಾರೆ
  • ಕೆಲವರು ನಿಷ್ಪ್ರಯೋಜಕ ನನ್ನ ಜೀವನದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಹರ್ಷ ಪೋಸ್ಟ್‌ ಹಂಚಿಕೊಂಡಿದ್ದರು..
ವಿಚ್ಛೇದನದ ಹಾದಿಯಲ್ಲಿ ಟಾಪ್ ಕಾಮಿಡಿಯನ್?.. ಸೋಷಿಯಲ್‌ ಮಿಡಿಯಾದಲ್ಲಿ ಶಾಕಿಂಗ್‌ ಪೋಸ್ಟ್!! title=

viva Harsha: ಬಾಲಿವುಡ್‌ನಲ್ಲಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನದತ್ತ ಹೆಜ್ಜೆ ಹಾಕುತ್ತಿದ್ದಾರೆ ಎಂಬ ವರದಿಗಳಿವೆ.. ಅಲ್ಲದೇ ಇತ್ತೀಚೆಗೆ ಕ್ರಿಕೆಟ್ ಜೋಡಿ ಹಾರ್ದಿಕ್ ಪಾಂಡ್ಯ-ನತಾಶಾ ಬೇರ್ಪಟ್ಟಿದ್ದಾರೆ. ಈ ಪಟ್ಟಿಯಲ್ಲಿ ಇನ್ನೂ ಕೆಲವು ಸೆಲೆಬ್ರಿಟಿಗಳೂ ಇದ್ದಾರೆ ಎಂಬ ವರದಿಗಳಿವೆ. ಇದರೊಂದಿಗೆ ಯಾರು ಯಾವ ಸುದ್ದಿ ಹೇಳುತ್ತಾರೋ, ಯಾವ ರೀತಿಯ ಪೋಸ್ಟ್ ಹಾಕುತ್ತಾರೋ ಎಂಬ ಚಿಂತೆ ಅಭಿಮಾನಿಗಳಲ್ಲಿ ಮೂಡಿದೆ.

ವಿವಾ ಹರ್ಷ ಶಾರ್ಟ್‌ ಮೂವಿಗಳು ಮತ್ತು ಕಾಮಿಡಿ ಕಂಟೆಂಟ್ ಹೊಂದಿರುವ ವೀಡಿಯೊಗಳಿಂದ ಫೇಮಸ್‌ ಆದವರು.. ಅಲ್ಲದೇ ಸಿನಿಮಾಳಲ್ಲಿಯೂ ಚಾನ್ಸ್‌ ಗಿಟ್ಟಿಸಿಕೊಂಡವರು.. ಹರ್ಷಾ ಕಾಮಿಡಿಯನ್ ಆಗಿ ದೊಡ್ಡ ಹೆಸರು ಮಾಡಿದ್ದಾರೆ ಎಂದರೇ ಅತಿಶಯೋಕ್ತಿಯಲ್ಲ.. 

ಟಾಲಿವುಡ್ ನಲ್ಲಿ ಹಾಸ್ಯ ನಟರು ಹೀರೋ ಆಗುವ ಅವಕಾಶ ಹರ್ಷಗೂ ಸಿಕ್ಕಿದೆ. ಸುಂದರಂ ಮಾಸ್ಟರ್ ಚಿತ್ರದ ಮೂಲಕ ಹರ್ಷ ನಾಯಕನಾಗಿ ಪರಿಚಯವಾದರು. ಮಾಸ್ ಮಹಾರಾಜ ರವಿತೇಜ ನಿರ್ಮಿಸಿದ ಈ ಚಿತ್ರವು ಸರಾಸರಿ ಹಿಡ್‌ ಪಡೆದರೂ ಹರ್ಷ ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ತನ್ನ ವೃತ್ತಿಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಿರುವ ಹರ್ಷ, ತನ್ನ ಸ್ನೇಹಿತೆ ಅಕ್ಷರ ಎಂಬುವರನ್ನು ಪ್ರೀತಿಸಿ ಮದುವೆಯಾದರು.. 

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ವೈವಾ ಹರ್ಷಾ ತಮ್ಮ ವೈಯಕ್ತಿಕ ವಿವರಗಳು ಮತ್ತು ಚಲನಚಿತ್ರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಆದರೆ ಅವರ ಇತ್ತೀಚಿನ ಪೋಸ್ಟ್ ಸಂಚಲನ ಮೂಡಿಸುತ್ತಿದೆ. ಜೀವನವು ರೋಲರ್ ಕೋಸ್ಟರ್ ರೈಡ್ ಇದ್ದಂತೆ. ಹಲವು ಏರಿಳಿತಗಳಿವೆ ಕಿರಿಕಿರಿ, ಭಯ, ಥ್ರಿಲ್ ಇತ್ಯಾದಿ. ಆದರೆ, ನಮ್ಮ ಕೈಯಲ್ಲಿ ಏನು ಇಲ್ಲ.. ಜೀವನದಲ್ಲಿ ಯಾವುದಕ್ಕೂ ಆಶಿಸಬಾರದು, ನಂತರ ದುಃಖಿಸಬಾರದು, ಜೀವನ ಎಲ್ಲಿಗೆ ಕೊಂಡೊಯ್ಯುತ್ತದೆ ಅಲ್ಲಿಗೆ ಹೋಗಬೇಕು ಎಂದು ಹರ್ಷ ಬರೆದಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ವೈವಾ ಹರ್ಷಗೆ ಏನಾಯ್ತು ಎಂದು ನಾನಾ ರೀತಿಯ ಕಮೆಂಟ್ ಗಳನ್ನು ಹಾಕುತ್ತಿದ್ದಾರೆ.. ಪರ್ಸನಲ್ ಲೈಫ್ ನಲ್ಲಿ ಡಿಸ್ಟರ್ಬ್ ಆಗಿದ್ದಾರಾ, ಪತ್ನಿಯಿಂದ ಬೇರ್ಪಟ್ಟಿದ್ದಾರಾ? ಎನ್ನುವ ಊಹಾಪೋಹಗಳು ಸೋಷಿಯಲ್‌ ಮಿಡಿಯಾಲದಲ್ಲಿ ಕೇಳಿಬರುತ್ತಿವೆ.. 

 ಈ ಊಹಾಪೋಹಗಳಿಗೆ ತೆರೆ ಎಳೆಯಲು ಹರ್ಷ ಮತ್ತೊಂದು ಪೋಸ್ಟ್ ಹಾಕಿದ್ದು, ನನ್ನ ಯೋಗಕ್ಷೇಮ ವಿಚಾರಿಸುವವರು ತುಂಬಾ ಜನ ಇದ್ದಾರೆ.. ನನಗೆ ತುಂಬಾ ಖುಷಿಯಾಗಿದೆ. ಆದರೆ ಪ್ರಸ್ತುತ ನಾನು ನನ್ನ ವೈಯಕ್ತಿಕ ಜೀವನದಲ್ಲಿ ತುಂಬಾ ಖುಷಿಯಾಗಿದ್ದೇನೆ.. ಕೆಲವರು ನಿಷ್ಪ್ರಯೋಜಕ ನನ್ನ ಜೀವನದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಹರ್ಷ ಪೋಸ್ಟ್‌ ಹಂಚಿಕೊಂಡಿದ್ದರು.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News