Famous Actress boyfriend: ಜೂಲಿಯಾ ಎಂದೂ ಕರೆಯಲ್ಪಡುವ ಲಾನಾ ಟರ್ನರ್ ಒಬ್ಬ ಅಮೇರಿಕನ್ ನಟಿ. ಲಾನಾ ಟರ್ನರ್ 1937 ರಲ್ಲಿ 15 ನೇ ವಯಸ್ಸಿನಲ್ಲಿ ಚಲನಚಿತ್ರಗಳಲ್ಲಿ ನಟಿಸುವ ಮೂಲಕ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. ದೇ ವಿಲ್ ನಾಟ್ ಫರ್ಗೆಟ್ ಚಿತ್ರದ ಮೂಲಕ ಸಿನಿರಂಗಕ್ಕೆ ಜೂಲಿಯಾ ಹೆಜ್ಜೆಯಿಟ್ಟರು. ಲಾನಾ ಟರ್ನರ್, ಮೊದಲ ಚಿತ್ರದಲ್ಲಿನ ಅಭಿನಯಕ್ಕಾಗಿ ಪ್ರಶಂಸೆ ಪಡೆದರು. ಅದರ ನಂತರ ಅವಳು ಹಿಂತಿರುಗಿ ನೋಡಲಿಲ್ಲ. ಬ್ಯಾಕ್ ಟು ಬ್ಯಾಕ್ ಆಫರ್‌ಗಳು ಬಂದವು. ಆದರೆ ಆಕೆಯ ವೈಯಕ್ತಿಕ ಜೀವನದಲ್ಲಿ ಹಲವು ವಿವಾದಗಳಿವೆ. ಒಂದಲ್ಲ ಎರಡಲ್ಲ ಏಳು ಬಾರಿ ಮದುವೆಯಾಗಿ ವಿಚ್ಛೇದನ ಪಡೆದಿದ್ದಾರೆ.  


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವಸಿಷ್ಠ ಸಿಂಹ ನಟನೆಯ ʻವಿಐಪಿʼ ಸಿನಿಮಾದ ಫಸ್ಟ್ ಲುಕ್ ರಿಲೀಸ್‌ 


1940 ರ ಹೊತ್ತಿಗೆ ಜೂಲಿಯಾ ತನ್ನನ್ನು ತಾನು ಫೇಮಸ್ ನಾಯಕಿಯಾಗಿ ರೂಪಿಸಿಕೊಂಡಳು. 35 ನೇ ವಯಸ್ಸಿನಲ್ಲಿ, ಲಾನಾ ಟರ್ನರ್ ನಾಲ್ಕು ಬಾರಿ ವಿವಾಹವಾದರು. ನಾಲ್ಕು ಗಂಡಂದಿರಿಂದ ವಿಚ್ಛೇದನ ಪಡೆದರು. 1957 ರಲ್ಲಿ ತನ್ನ ನಾಲ್ಕನೇ ಪತಿಯಿಂದ ವಿಚ್ಛೇದನದ ನಂತರ, ಗ್ಯಾಂಗಗ್‌ಸ್ಟರ್‌ ಜಾನಿ ಸ್ಟೊಂಪನಾಟೊ ಅವರ ಜೀವನವನ್ನು ಪ್ರವೇಶಿಸಿದರು. 1958 ರಲ್ಲಿ ಗ್ಯಾಂಗಗ್‌ಸ್ಟರ್‌ ಜಾನಿ ಸ್ಟೊಂಪನಾಟೊ ಅವರನ್ನು ಲಾರಾ ಟರ್ನರ್ ಅವರ 14 ವರ್ಷದ (ಆಗ) ಮಗಳಾದ ಚೆರಿಲ್ ಸಾಯಿಸಿದರು, ಇದು ಪ್ರಪಂಚದಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಲಾರಾ ಟರ್ನರ್ ಕೂಡ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು.


ಇದರ ನಂತರ, ಲಾನಾ ಟರ್ನರ್ ನಟಿಸಿದ ಇಮಿಟೇಶನ್ ಆಫ್ ಲೈಫ್ ಚಲನಚಿತ್ರವು 1959 ರಲ್ಲಿ ಬಿಡುಗಡೆಯಾಯಿತು. ಈ ಚಿತ್ರಕ್ಕಾಗಿ ಸಂಭಾವನೆ ತೆಗೆದುಕೊಳ್ಳದೆ ಚಿತ್ರದ ಆದಾಯದ 50% ತೆಗೆದುಕೊಳ್ಳಲು ಲಾನಾ ನಿರ್ಧರಿಸಿದರು. ಚಿತ್ರವು ವಿಶ್ವಾದ್ಯಂತ ದೊಡ್ಡ ಕಲೆಕ್ಷನ್ ಮಾಡಿತು. ಲಾನಾ ಟರ್ನರ್ ನಂತರ ಯಶಸ್ವಿ ಚಿತ್ರಗಳಲ್ಲಿ ನಟಿಸುವುದನ್ನು ಮುಂದುವರೆಸಿದರು.  


ಇದನ್ನೂ ಓದಿ: ಮಾಧುರಿ ದೀಕ್ಷಿತ್‌ ಕೂದಲಿಗೆ ಇದೇ ಎಣ್ಣೆ ಹಾಕೋದಂತೆ.. ಕಪ್ಪಾದ ಹೊಳೆಯುವ ಕೇಶರಾಶಿಯ ರಹಸ್ಯ ಇಲ್ಲಿದೆ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.