ಇದಲ್ವಾ ಮಿತ್ರದ್ರೋಹ ಅಂದ್ರೆ ..!? ಜೀವದ ಗೆಳತಿಯ ಗಂಡನಿಗೆ ಅಣ್ಣಾ ಎಂದು ರಾಖಿ ಕಟ್ಟಿ... ಕೊನೆಗೆ ಆತನಿಂದಲೇ ಮದುವೆಗೂ ಮುನ್ನ ಗರ್ಭಿಣಿಯಾದ್ಳು ಈ ಪ್ರಖ್ಯಾತ ನಟಿ!
Actress Affairs: ನಾವಿಂದು ಅಂತಹದ್ದೇ ಒಂದು ಘಟನೆಯ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ. ಅಂದಹಾಗೆ ಬಾಲಿವುಡ್ ನಟಿ ಶ್ರೀದೇವಿ ಈಗ ಬದುಕಿಲ್ಲ. ನಟನೆ, ನೃತ್ಯ, ವಿಶೇಷ ರೀತಿ ಹಾವಭಾವದಿಂದ ಜನಮನ ಗೆದ್ದಿದ್ದ ನಟಿಸಿ ಹಿರಿತೆರೆಯಲ್ಲಿ ನಾನಾರೀತಿಯ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು.
Sridevi-Boney Kapoor: ಬಾಲಿವುಡ್ ರಂಗದಲ್ಲಿ ಮದುವೆ, ಸಂಭ್ರಮಗಳು ಎಷ್ಟು ಸುದ್ದಿಯಾಗುತ್ತವೋ.. ಅದಕ್ಕಿಂತ 10 ಪಟ್ಟು ಹೆಚ್ಚು ಸುದ್ದಿಯಾಗೋದು ಡಿವೋರ್ಸ್ ಮತ್ತು ಅಕ್ರಮ ಸಂಬಂಧಗಳ ವಿಚಾರ. ಈ ಸಂಗತಿಗಳು ಇಂದು ಮೊನ್ನೆ ಬೆಳಕಿಗೆ ಬಂದಿರುವುದಲ್ಲ. ಬದಲಾಗಿ ಹಿರಿಯ ನಟ-ನಟಿಯರಿಂದಲೂ ಮುನ್ನೆಲೆಗೆ ಬಂದ ವಿಷಯ.
ನಾವಿಂದು ಅಂತಹದ್ದೇ ಒಂದು ಘಟನೆಯ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ. ಅಂದಹಾಗೆ ಬಾಲಿವುಡ್ ನಟಿ ಶ್ರೀದೇವಿ ಈಗ ಬದುಕಿಲ್ಲ. ನಟನೆ, ನೃತ್ಯ, ವಿಶೇಷ ರೀತಿ ಹಾವಭಾವದಿಂದ ಜನಮನ ಗೆದ್ದಿದ್ದ ನಟಿಸಿ ಹಿರಿತೆರೆಯಲ್ಲಿ ನಾನಾರೀತಿಯ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಆದರೆ ಇವರು ಸಾವಿನ ಕದ ತಟ್ಟುವವರೆಗೆ ಭಾರೀ ಸದ್ದು ಮಾಡುತ್ತಿದ್ದದ್ದು ಅವರ ಪ್ರೇಮಜೀವನಕ್ಕೆ ಸಂಬಂಧಿಸಿದಂತೆ.
ಇದನ್ನೂ ಓದಿ: ಬಿಗ್ ಬಾಸ್ ವೇದಿಕೆ ಮೇಲೆ ನಿಂತು ಸುದೀಪ್ ಕುಡಿಯೋ ಆ ಕಪ್ಪು ಡ್ರಿಂಕ್ ಏನು ಗೊತ್ತಾ?
ಬೋನಿ ಕಪೂರ್ ಅವರನ್ನು ಮದುವೆಯಾಗುವ ಮೊದಲು ಶ್ರೀದೇವಿ, ನಟ ಮಿಥುನ್ ಚಕ್ರವರ್ತಿ ಅವರನ್ನು ಪ್ರೀತಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಆದರೆ ಆ ನಂತರ ಮಿಥುನ್ ಚಕ್ರವರ್ತಿಯನ್ನು ಬಿಟ್ಟು ಬೋನಿ ಕಪೂರ್ ಅವರ ಕೈ ಹಿಡಿದಿದ್ದರು ಶ್ರೀದೇವಿಯವರು. ಇನ್ನು ಮಿಥುನ್ ಚಕ್ರವರ್ತಿ ಜೊತೆ ಪ್ರೀತಿಯಲ್ಲಿದ್ದಾಗ, ಬೋನಿ ಕಪೂರ್ ಅವರನ್ನು ತಮ್ಮ ಸಹೋದರ ಎಂದು ಪರಿಗಣಿಸಿದ್ದರಂತೆ ಈ ನಟಿ. ಅಷ್ಟೇ ಅಲ್ಲದೆ, ಅವರ ಪತ್ನಿ ಮೋನಾ ಕಪೂರ್‌ಗೆ ಶ್ರೀದೇವಿ ಉತ್ತಮ ಸ್ನೇಹಿತೆಯಾಗಿದ್ದು, ಅದೇ ಕಾರಣದಿಂದ ಶ್ರೀದೇವಿಗೆ ತಮ್ಮ ಮನೆಯಲ್ಲೇ ಆಶ್ರಯ ನೀಡಿದ್ದರು.
ಆದರೆ ಮಿಥುನ್ ಚಕ್ರವರ್ತಿಗೆ ಶ್ರೀದೇವಿಯ ಮೇಲೆ ಅನುಮಾನ. ಶ್ರೀದೇವಿ ಬೋನಿ ಕಪೂರ್ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಮಿಥುನ್ ಭಾವಿಸಿದ್ದರು. ಇದೇ ಕಾರಣಕ್ಕೆ ನಿಷ್ಠೆಯನ್ನು ಸಾಬೀತುಪಡಿಸಲು ಶ್ರೀದೇವಿ ಬೋನಿ ಕಪೂರ್‌ಗೆ ರಾಖಿ ಕಟ್ಟಿಸಿದ್ದರೆ. ಹೀಗಂತ ಮೋನಾ ಕಪೂರ್ ಸಂದರ್ಶನವೊಂದರಲ್ಲಿ ಹೇಳಿದ್ದರೆಂದು ಕೆಲ ಮಾಧ್ಯಮ ವರದಿಗಳು ಹೇಳುತ್ತವೆ.
ಮಿಥುನ್ ಹಾಗೂ ಶ್ರೀದೇವಿ ಜೊತೆಗಿನ ಅನೈತಿಕ ಸಂಬಂಧ ಅವರ ಪತ್ನಿ ಗೀತಾ ಬಾಲಿ ಅವರಿಗೆ ತಿಳಿದಾಗ ಅವರ ನಡುವೆ ಗಲಾಟೆ ನಡೆದಿತ್ತು. ಆ ನಂತರವೇ ಮಿಥುನ್ ಮತ್ತು ಶ್ರೀದೇವಿ ಅಂತರ ಪಡೆದುಕೊಂಡಿದ್ದರು. ಇನ್ನು ಒಂದೇ ಮನೆಯಲ್ಲಿ ವಾಸವಿದ್ದ ಕಾರಣ ಶ್ರೀದೇವಿ ಮತ್ತು ಬೋನಿ ಕಪೂರ್ ನಡುವೆ ಪ್ರೀತಿ ಅರಳಲು ಆರಂಭಿಸಿತ್ತು. ಇನ್ನು ಬೋನಿ ಕಪೂರ್ ಅವರ ಮೊದಲ ಪತ್ನಿ ಮೋನಾ, ಇವರಿಬ್ಬರ ಸಂಬಂಧವನ್ನು ಎಂದಿಗೂ ಅನುಮಾನಿಸಿರಲಿಲ್ಲ. ಬದಲಾಗಿ ಸಹೋದರ-ಸಹೋದರಿ ಎಂದೇ ಪರಿಗಣಿಸುತ್ತಿದ್ದರು.
ಇದನ್ನೂ ಓದಿ: ಇದು ಮನೆಯೋ… ಅರಮನೆಯೋ! ಸಾವಿರ ಕೋಟಿ ಸಾಮ್ರಾಜ್ಯದ ಒಡೆಯ ವಿರಾಟ್ ಕೊಹ್ಲಿ ಭವ್ಯ ಬಂಗಲೆ ಎಷ್ಟೊಂದು ಅದ್ಭುತವಾಗಿದೆ ನೋಡಿ
ಆದರೆ ಅಂತಿಮವಾಗಿ ಸತ್ಯ ತಿಳಿದಾಗ, ಆಕಾಶವೇ ಕಳಚಿ ತಲೆಮೇಲೆ ಬಿದ್ದಂತಾಗಿತ್ತು. ಅಷ್ಟೇ ಅಲ್ಲದೆ, ಶ್ರೀದೇವಿ ಮದುವೆಗೂ ಮುನ್ನ ಗರ್ಭಿಣಿಯಾಗಿದ್ದಳು. ಇದಾದ ನಂತರ ಬೋನಿ ಕಪೂರ್ ಅವರಿಂದ ಮೋನಾ ದೂರವಾದರು. ಈ ಸಂದರ್ಭದಲ್ಲಿ ಶ್ರೀದೇವಿ ವಿರುದ್ಧ ಭಾರೀ ವ್ಯಂಗ್ಯ-ಅಪವಾದಗಳು ಕೇಳಿಬಂದಿತ್ತು. ಸ್ವತಃ ಬೋನಿ ಅವರ ತಾಯಿಯೇ ʼಮನೆ ಒಡೆದವಳುʼ ಎಂದು ಆರೋಪ ಹೊರಿಸಿದ್ದರೆಂದು ಕೆಲ ಮೂಲಗಳು ಹೇಳುತ್ತವೆ. ಆದರೆ ಇಷ್ಟೆಲ್ಲಾ ಮಾತುಗಳು ಕೇಳಿಬಂದರೂ ಸಹ, 1996 ರಲ್ಲಿ ಶ್ರೀದೇವಿಯನ್ನು ಬೋನಿ ಕಪೂರ್ ವಿವಾಹವಾದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ