ನವದೆಹಲಿ: ಜಾಗತಿಕ ಕೊರೊನಾವೈರಸ್ ಹಿನ್ನಲೆಯಲ್ಲಿ ಜನರು ಮನೆಯೊಳಗೆ ಇರಲು ಮತ್ತು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಲ್ಮಾನ್ ಖಾನ್ ತಮ್ಮ ಸಾಮಾಜಿಕ ಮಾಧ್ಯಮದ ಮೂಲಕ ಮನವಿ ಮಾಡಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಭಾರತದಲ್ಲಿ ಸಾಂಕ್ರಾಮಿಕ ವೈರಸ್ ಹರಡುವುದನ್ನು ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ಜನತಾ ಕರ್ಫ್ಯೂ ಗೆ ಕರೆ ನೀಡಿದ ಹಿನ್ನಲೆಯಲ್ಲಿ ಸಲ್ಮಾನ್ ಖಾನ್ ಅವರ ಹೇಳಿಕೆ ಬಂದಿದೆ.


 

 

 

 



 

 

 

 

 

 

 

 

 

@cmomaharashtra_ @My_bmc @adityathackeray @rahulnarainkanal


A post shared by Salman Khan (@beingsalmankhan) on


ಸಲ್ಮಾನ್ ಖಾನ್ ತಮ್ಮ ವಿಡಿಯೋ ಸಂದೇಶದಲ್ಲಿ, 'ಇದು ಸಾರ್ವಜನಿಕ ರಜಾದಿನವಲ್ಲ, ಇದು ತುಂಬಾ ಗಂಭೀರ ವಿಷಯವಾಗಿದೆ" ಎಂದು ಹೇಳಿದ್ದಾರೆ.ಇದೆಲ್ಲವನ್ನೂ ಮಾಡುವುದರಿಂದಾಗಿ ಅಸಂಖ್ಯಾತ ಜೀವಗಳನ್ನು ಉಳಿಸಿದ ಹಾಗೆ ಆಗುತ್ತದೆ, ನೀವು ಅದನ್ನು ಏಕೆ ಮಾಡುತ್ತಿಲ್ಲ. ದಯವಿಟ್ಟು ಇದು ಜೀವನ ಮತ್ತು ಸಾವಿನ ವಿಷಯವಾಗಿರುವುದರಿಂದ ಇದನ್ನು ಮಾಡಿ. ಇದು ನಿಮ್ಮೆಲ್ಲರಿಗೂ ನನ್ನ ವಿನಂತಿ, ಎಂದು ಜನತಾ ಕರ್ಪ್ಯೂ ಹಿನ್ನಲೆಯಲ್ಲಿ ಸಲ್ಮಾನ್ ಹೇಳಿದರು. 


54 ವರ್ಷದ ನಟ ಕೂಡ, ಸರ್ಕಾರ ಏನನ್ನೋ ಕೇಳುತ್ತಿದೆ ಆದ್ದರಿಂದ ನಾನು ದಯವಿಟ್ಟು ಅದನ್ನು ಗಂಭೀರವಾಗಿ ಪರಿಗಣಿಸಿ ವದಂತಿಗಳನ್ನು ಹರಡಬೇಡಿ ಎಂದು ಮನವಿ ಮಾಡುತ್ತೇನೆ. ಇದು ದೀರ್ಘಕಾಲದವರೆಗೆ ಎಲ್ಲರಿಗೂ ಸಮಸ್ಯೆಯಾಗಿದೆ. ಯಾರಾದರೂ ಕರೋನವೈರಸ್ ಸೋಂಕಿಗೆ ಒಳಗಾಗಬಹುದು, ಅದು ಬಸ್, ರೈಲು ಅಥವಾ ಮಾರುಕಟ್ಟೆ ಸ್ಥಳದಲ್ಲಿರಬಹುದು. ಆದ್ದರಿಂದ ನೀವು ಯಾಕೆ ಆ ಅಪಾಯವನ್ನು ತೆಗೆದುಕೊಳ್ಳಲು ಬಯಸುತ್ತೀರಿ' ಎಂದು ಸಲ್ಮಾನ್ ಖಾನ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.