Jawan : ಶಾರುಕ್‌ ನಟನೆಯ ಜವಾನ್‌ ಸಿನಿಮಾ ರಿಲೀಸ್‌ಗೂ ಮುನ್ನವೇ ಭರ್ಜರಿ ಸೌಂಡ್‌ ಮಾಡುತ್ತಿದೆ. ಹೌದು ಟ್ರೇಡ್ ಇನ್ಸೈಡರ್ ಪ್ರಕಾರ, ಚಿತ್ರವು ಬಿಡುಗಡೆಗೆ 15 ದಿನಗಳ ಮೊದಲು ಯುಎಸ್ ಪ್ರೀ-ಬುಕಿಂಗ್ ಮೂಲಕ ಬಾಕ್ಸ್ ಆಫೀಸ್‌ನಲ್ಲಿ 1 ಕೋಟಿ ರೂಪಾಯಿಗಿಂತ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ಈ ದಾಖಲೆಯ ಕಲೆಕ್ಷನ್ ಚಿತ್ರಕ್ಕೆ ಜಾಗತಿಕ ಮಟ್ಟದಲ್ಲಿ ಸಿಕ್ಕಿರುವ ಮನ್ನಣೆಗೆ ಹಿಡಿದ ಕನ್ನಡಿಯಾಗಿದೆ.


COMMERCIAL BREAK
SCROLL TO CONTINUE READING

ಟ್ರೇಡ್ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಬುಧವಾರ ಟ್ವೀಟ್ ಮಾಡಿದ್ದು, ಚಿತ್ರವು ಸೆಪ್ಟೆಂಬರ್ 7 ರಂದು ಬಿಡುಗಡೆಯಾಗುವ ಎರಡು ವಾರಗಳ ಮೊದಲು US ನಲ್ಲಿ ಜವಾನ್ ಮುಂಗಡ ಬುಕಿಂಗ್ $150,000 (ರೂ. 1.25 ಕೋಟಿಗೂ ಹೆಚ್ಚು) ದಾಟಿದೆ. ಜವಾನ್ ಮುಂಗಡ ಬುಕಿಂಗ್ USA ನಲ್ಲಿ ಅತ್ಯುತ್ತಮ ಕಲೆಕ್ಷನ್‌ ಮಾಡುತ್ತಿದೆ.


ವಿದೇಶಗಳಲ್ಲಿ ಜವಾನ್‌ಗಾಗಿ ಮುಂಗಡ ಬುಕಿಂಗ್‌ಗಳು ಕಳೆದ ವಾರ ಪ್ರಾರಂಭವಾಗಿವೆ. ಭಾರತೀಯ ಚಿತ್ರವೊಂದು ಬಿಡುಗಡೆಗೆ ಸುಮಾರು ಮೂರು ವಾರಗಳ ಮುಂಚೆಯೇ ಇಷ್ಟೊಂದು ಕಲೆಕ್ಷನ್ ಮಾಡಿರುವುದು ಹೊಸ ದಾಖಲೆಯಾಗಿದೆ. ಆದರೆ ಯುಎಸ್, ಯುಕೆದಂತಹ ಪ್ರದೇಶಗಳಲ್ಲಿ ಶಾರುಖ್ ಖಾನ್ ಅವರ ಜನಪ್ರಿಯತೆಯನ್ನು ಗಮನಿಸಿದರೆ, ಅದರಲ್ಲಿ ಆಶ್ಚರ್ಯವೇನಿಲ್ಲ ಎಂಬುದು ಸಿನಿರಂಗದವರ ಅಭಿಪ್ರಾಯ. 


ಇದನ್ನೂ ಓದಿ-ಕಾಸು ಕೊಟ್ಟೋರಿಗೆ ಜಿಎಸ್‌ಟಿ ವಾಪಸ್‌ ಬಂದ ಹಾಗೆ


ಅಟ್ಲಿ ನಿರ್ದೇಶನದ ಜವಾನ್ ಚಿತ್ರವು ನಯನತಾರಾ ಅವರ ಬಾಲಿವುಡ್ ಚೊಚ್ಚಲ ಚಿತ್ರವಾಗಿದೆ. ಈ ಚಿತ್ರದಲ್ಲಿ ವಿಜಯ್ ಸೇತುಪತಿ ವಿಲನ್ ಆಗಿ ನಟಿಸುತ್ತಿದ್ದಾರೆ. ಚಿತ್ರದ ಸಂಗೀತವನ್ನು ಅನಿರುದ್ಧ್ ರವಿಚಂದರ್ ಸಂಯೋಜಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಅದರಲ್ಲೂ ತಮಿಳುನಾಡಿನಲ್ಲಿ ಈ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಮೊದಲ ದಿನವೇ ಚಿತ್ರ 100 ಕೋಟಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.


ಪಠಾಣ್ ನಂತರ ಎರಡು 100 ಕೋಟಿ ಆರಂಭಿಕ ದಿನದ ಕಲೆಕ್ಷನ್ ಮಾಡಿದ ಮೊದಲ ನಟ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಮೂಲಕ ಶಾರುಖ್ ಖಾನ್ ಬಾಲಿವುಡ್ ನಲ್ಲಿ ಇತಿಹಾಸ ಸೃಷ್ಟಿಸಲು ಸಜ್ಜಾಗಿದ್ದಾರೆ ಎಂದು ಮನೋಬಾಲಾ ಟ್ವೀಟ್ ಮಾಡಿದ್ದಾರೆ. 


ಶಾರುಖ್ ಅವರ ಹಿಂದಿನ ಚಿತ್ರ ಪಠಾಣ್ ಮೊದಲ ದಿನದಲ್ಲಿ ಜಾಗತಿಕವಾಗಿ 107 ಕೋಟಿ ರೂ. ಐದು ದಿನಗಳ ನಂತರ ವಾರಾಂತ್ಯದಲ್ಲಿ 500 ಕೋಟಿ ದಾಟಿತ್ತು. ಸದ್ಯ ಈ ಆಕ್ಷನ್ ಥ್ರಿಲ್ಲರ್ ಜವಾನ್ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಭಾರತದಲ್ಲಿ ಮುಂಗಡ ಬುಕ್ಕಿಂಗ್ ಮಾರಾಟ ಇನ್ನೂ ಪ್ರಾರಂಭವಾಗಿಲ್ಲ. ಬಿಡುಗಡೆಗೆ ಒಂದು ವಾರ ಮುಂಚಿತವಾಗಿ ಈ ತಿಂಗಳ ಅಂತ್ಯದ ವೇಳೆಗೆ ಮುಂಗಡ ಬುಕಿಂಗ್ ಪ್ರಾರಂಭವಾಗುವ ನಿರೀಕ್ಷೆಯಿದೆ.


ಇದನ್ನೂ ಓದಿ-Amala Poul : ಸಖತ್‌ ಪೋಟೋಶೂಟ್‌ನಲ್ಲಿ ಮಿಂಚಿದ ಹೆಬ್ಬುಲಿ ನಟಿ..ಪೋಟೋಸ್‌ ನೋಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.