Antarapata Serial Savitri: ಅಂತರಪಟ ಧಾರಾವಾಹಿ ಸದ್ಯ ಜನರ ಮೆಚ್ಚುಗೆ ಗಳಿಸಿದೆ. ಕಲರ್ಸ್‌ಕನ್ನಡದಲ್ಲಿ ಪ್ರಸಾರವಾಗುವ ಈ ಸೀರಿಯಲ್‌ ಸದ್ಯ ಜನಪ್ರಿಯವಾಗಿದೆ. ಈ ಧಾರಾವಾಹಿಯ ಪಾತ್ರಗಳು ಸಹ ನೋಡುಗರ ಮನಸೆಳೆದಿವೆ. ಅದರಲ್ಲೂ ಸಾವಿತ್ರಿ ಪಾತ್ರವಂತೂ ಸಿಕ್ಕಾಪಟ್ಟೆ ಹಿಟ್‌ ಆಗಿದೆ. ಸದಾ ಸೀರೆಯುಟ್ಟು, ತಲೆ ತುಂಬ ಹೂವು ಮುಡಿದು, ಅಪ್ಪಟ ಗೃಹಿಣಿಯಾಗಿರುವ ಸಾವಿತ್ರಿ ಪಾತ್ರ ಜನರ ಮೆಚ್ಚುಗೆ ಗಳಿಸಿದೆ.


COMMERCIAL BREAK
SCROLL TO CONTINUE READING

ಅಂತರಪಟ ಧಾರಾವಾಹಿಯ ಧರ್ಮೇಂದ್ರ ಪ್ರಧಾನ್ ಪತ್ನಿಯಾದ ಆರಾಧನಾ ಅತ್ತೆ ಮತ್ತು ಸುಶಾಂತ್ ಅಮ್ಮ ಸಾವಿತ್ರಿ ಪಾತ್ರಧಾರಿ ನಟಿಯ ನಿಜವಾದ ಹೆಸರು ಅಕ್ಷತಾ ಗಣೇಶ್. ರಿಯಲ್‌ ಲೈಫ್‌ನಲ್ಲಿ ಅಕ್ಷತಾ ಇಷ್ಟೊಂದು ಸಿಂಪಲ್‌ ಅಲ್ಲ. ಸಖತ್ ಮಾಡರ್ನ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಅಕ್ಷತಾ ಅವರಿಗೆ ಎರಡೂವರೆ ವರ್ಷದ ಮುದ್ದಾದ ಮಗು ಇದೆ. 


ಇದನ್ನೂ ಓದಿ: ಮೈಮರೆತು ಆತನೊಂದಿಗೆ ಸೆಕ್ಸ್​​ ಮಾಡಿ ಗರ್ಭಿಣಿಯಾದೆ... ಕರಾಳ ಕಥೆ ಬಿಚ್ಚಿಟ್ಟ ಖ್ಯಾತ ನಟಿ ​


ಕಳೆದ 20 ವರ್ಷಗಳಿಂದ ಅಕ್ಷತಾ ಶಿಕ್ಷಣ ವಲಯದಲ್ಲಿ ಗುರುತಿಸಿಕೊಂಡವರು. ಟೀಚರ್ ಮತ್ತು ಸ್ಕಾಲರ್ ಆಗಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷಿನಲ್ಲಿ MA  ಪಡೆದಿರುವ ಅಕ್ಷತಾ ಯುರೋಪಿಯನ್ ಕ್ಲಾಸಿಕ್ ಡ್ಯಾನ್ಸರ್‌ ಕೂಡ ಹೌದು.


ಅಕ್ಷತಾ ನವದೆಹಲಿಯ ಪಾಥ್ ವೇಸ್ ವರ್ಲ್ಡ್ ಸ್ಕೂಲ್, ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು ದಿ ಜರ್ಮನ್ ಸ್ಕೂಲ್ ಆಫ್ ಬಾಂಬೆ ಸೇರಿ ಅನೇಕ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.  


ಸಿಲ್ಲಿಲಲ್ಲಿ ಸೀಸನ್ 2 ಸೀರಿಯಲ್‌ನಲ್ಲಿ ಲಲಿತಾಂಬ ಪಾತ್ರದ ಮೂಲಕ ಜನರನ್ನು ರಂಜಿಸಿದ ನಟಿ ಅಕ್ಷತಾ ಬಾಲಿವುಡ್ ಸ್ಟಾರ್ ಕಿಡ್‌ಗಳಿಗೂ ಪಾಠ ಹೇಳಿಕೊಟ್ಟವರು. ಬಾಲಿವುಡ್ ನ ಹಲವು ನಟ-ನಟಿಯರ ಮಕ್ಕಳು, ಸಚಿನ್ ತೆಂಡೂಲ್ಕರ್ ಮಕ್ಕಳಿಗೂ ಅಕ್ಷತಾ ಇಂಗ್ಲೀಷ್‌ ಹೇಳಿಕೊಟ್ಟಿದ್ದಾರೆ. 


ಇದನ್ನೂ ಓದಿ: ಯಾವ ಸ್ಟಾರ್‌ ನಟಿಗೂ ಕಮ್ಮಿಯಿಲ್ಲ ರವಿತೇಜ ಮಗಳು! ಸೌಂದರ್ಯಕ್ಕೆ ಅರಸಿ ಈಕೆ 


ಬಾಲಿವುಡ್‌ ಸೂಪರ್ ಸ್ಟಾರ್ ಶಾರುಖ್ ಖಾನ್, ನಟ ಸೈಫ್ ಅಲಿ ಖಾನ್, ನಟಿ ಜೂಹಿ ಚಾವ್ಲಾ ಹೀಗೆ ಅನೇಕ ತಾರೆಯರ ಮಕ್ಕಳಿಗೆ ಅಕ್ಷತಾ ಗಣೇಶ್ ಆಂಗ್ಲ ಭಾಷೆ ಕಲಿಸಿದ್ದಾರೆ. ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಸುಮಾರು 10 ವರ್ಷಗಳ ಕಾಲ ಇಂಗ್ಲೀಷ್ ಟೀಚರ್ ಆಗಿ ಕೆಲಸ ಮಾಡಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.