ಮೈಮರೆತು ಆತನೊಂದಿಗೆ ಸೆಕ್ಸ್​​ ಮಾಡಿ ಗರ್ಭಿಣಿಯಾದೆ... ಕರಾಳ ಕಥೆ ಬಿಚ್ಚಿಟ್ಟ ಖ್ಯಾತ ನಟಿ ​

Kubbra Sait Life story: 'ಸೆಕ್ರೆಡ್ ಗೇಮ್ಸ್' ವೆಬ್​ ಸೀರಿಸ್‌ನಲ್ಲಿ ತೃತೀಯ ಲಿಂಗಿ ಪಾತ್ರದ ಮೂಲಕ ಜನರ ಮನಗೆದ್ದ ನಟಿ ತನಗಾದ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ. 

Written by - Chetana Devarmani | Last Updated : Jul 28, 2024, 08:50 AM IST
  • 'ಸೆಕ್ರೆಡ್ ಗೇಮ್ಸ್' ವೆಬ್​ ಸೀರಿಸ್‌ ನಟಿ
  • ತೃತೀಯ ಲಿಂಗಿ ಪಾತ್ರದ ಮೂಲಕ ಜನರ ಮನಗೆದ್ದ ನಟಿ
  • ತನಗಾದ ಕರಾಳ ಅನುಭವವನ್ನು ಬಿಚ್ಚಿಟ್ಟ ಖ್ಯಾತ ತಾರೆ
ಮೈಮರೆತು ಆತನೊಂದಿಗೆ ಸೆಕ್ಸ್​​ ಮಾಡಿ ಗರ್ಭಿಣಿಯಾದೆ... ಕರಾಳ ಕಥೆ ಬಿಚ್ಚಿಟ್ಟ ಖ್ಯಾತ ನಟಿ ​ title=

Actress Kubbra Sait : 'ಸೆಕ್ರೆಡ್ ಗೇಮ್ಸ್' ನಲ್ಲಿನ ಪಾತ್ರದ ಮೂಲಕ ಸಿಕ್ಕಾಪಟ್ಟೆ​ ಫೇಮಸ್​ ಆದ ನಟಿ ಕುಬ್ರಾ ಸೇಠ್​ ಕಹಿ ಘಟನೆಯೊಂದರ ಬಗ್ಗೆ ಮಾತನಾಡಿದ್ದಾರೆ. ಇಂಟಿಮೇಟ್​ ದೃಶ್ಯಗಳು, ಹಾಟ್​ ಸೀನ್‌ಗಳಿಂದಲೇ ಕುಬ್ರಾ ಸೇಠ್ ಜನಪ್ರಿಯತೆ ಪಡೆದಿದ್ದಾರೆ. 

ನಟಿ ಕುಬ್ರಾ ಸೇಠ್​ ಜೀವನ ಆಧರಿತ  'ಓಪನ್ ಬುಕ್: ನಾಟ್ ಕ್ವಿಟ್ ಎ ಮೆಮೊಯಿರ್' ಎಂಬ ಪುಸ್ತಕ ಎರಡು ವರ್ಷಗಳ ಹಿಂದೆ ಬಿಡುಗಡೆಯಾಗಿತ್ತು. ಈ ಪುಸ್ತಕದಲ್ಲಿ ಕುಬ್ರಾ ಜೀವನದಲ್ಲಿ ನಡೆದ ಅನೇಕ ಘಟನೆಗಳ ಬಗ್ಗೆ ತಿಳಿಸಲಾಗಿತ್ತು. 

ಬಾಲ್ಯದಲ್ಲಿ ಅಂಕಲ್‌ನಿಂದಲೇ ಕುಬ್ರಾ ಲೈಂಗಿಕ ಕಿರುಕುಳ ಅನುಭವಿಸಿದ್ದರು. ಆ ಬಳಿಕ ಬಾಡಿ ಶೇಮಿಂಗ್​, ನಂತರ ವ್ಯಕ್ತಿಯೊಬ್ಬನ ಜೊತೆ ಮೈಮರೆತು​ ಆಗಿ ಸೆಕ್ಸ್​ ಮಾಡಿದ್ದು ಎಲ್ಲವನ್ನೂ ಈ ಪುಸ್ತಕದಲ್ಲಿ ಕುಬ್ರಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್‌ ವಿಚ್ಛೇದನ ಶೀಘ್ರದಲ್ಲೇ ? : ಖ್ಯಾತ ಜ್ಯೋತಿಷಿ ಶಾಕಿಂಗ್‌ ಭವಿಷ್ಯ

ಸಂದರ್ಶನವೊಂದರಲ್ಲಿಯೂ ಕುಬ್ರಾ ಈ ಬಗ್ಗೆ ಮಾತನಾಡಿದ ವಿಡಿಯೋ ವೈರಲ್​ ಆಗುತ್ತಿದೆ. 30 ನೇ ವಯಸ್ಸಿನಲ್ಲಿ ಅಂಡಮಾನ್​ ಸಮುದ್ರದಲ್ಲಿ ಡೈವಿಂಗ್​ ಮಾಡಲು ಸ್ನೇಹಿತನ ಜೊತೆ ಹೋದಾಗ ನಡೆದ ಕರಾಳ ಘಟನೆಯನ್ನು ಕುಬ್ರಾ ಬಿಚ್ಚಿಟ್ಟಿದ್ದಾರೆ.

ಆ ಸ್ನೇಹಿತನ ಜೊತೆ ಸೇರಿದಾಗ ಮೈಮರೆತು ಬಿಟ್ಟೆ. ಆತನ ಜೊತೆ ತುಂಬಾ ಕಂಫರ್ಟಬಲ್​ ಅನಿಸಲು ಆರಂಭಿಸಿತು. ಆತನೊಂದಿಗೆ ಸೆಕ್ಸ್​ ಮಾಡಿಬಿಟ್ಟೆ. ನಂತರ ಶೂಟಿಂಗ್‌ನಲ್ಲಿ ಬ್ಯುಸಿ ಆಗಿ ಆ ವಿಚಾರವನ್ನು ಮರೆತು ಬಿಟ್ಟೆ. 

ಆದರೆ ಮೂರು ತಿಂಗಳು ಪಿರಿಯಡ್​ ಆಗಿರಲಿಲ್ಲ. ಆ ನಂತರ ಗರ್ಭಿಣಿ ಎಂಬುದು ಅರಿವಾಗಿ ಶಾಕ್‌ ಆದೆ. ಆದರೆ ಆ ಗೆಳೆಯ ನನ್ನ ಕಡೆ ತಿರುಗಿಯೂ ನೋಡಲಿಲ್ಲ. ಇದರಿಂದ ಅನಿವಾರ್ಯವಾಗಿ ಅಬಾಷನ್​ ಮಾಡಿಕೊಳ್ಳಬೇಕಾಯಿತು ಎಂದು ನಟಿ ನೋವು ತೋಡಿಕೊಂಡಿದ್ದಾರೆ. 

ಬಾಲ್ಯದಲ್ಲಿ ಅಂಕಲ್​ ನಿಂದಲೇ ಲೈಂಗಿಕ ಕಿರುಕುಳಕ್ಕೆ ಒಳಗಾದ ಬಗ್ಗೆಯೂ ಸಂದರ್ಶನದಲ್ಲಿ ನಟಿ ಹೇಳಿಕೊಂಡಿದ್ದಾರೆ. ನನಗೆ ನನ್ನ ಅಂಕಲ್​ ಲೈಂಗಿಕ ಕಿರುಕುಳ ಕೊಡುತ್ತಿದ್ದರು.  ನಾನು ಬೇಡ ಎಂದು ಎಷ್ಟು ಸಲ ಹೇಳಿದರೂ ಲೈಂಗಿಕವಾಗಿ ಬಳಸಿಕೊಂಡರು ಎಂದು ತಿಳಿಸಿದ್ದಾರೆ.  

ಇದನ್ನೂ ಓದಿ: 2011ರಲ್ಲಿ ಜೈಲಿನಿಂದ ಹೊರಬರುವಾಗ ದರ್ಶನ್‌ ಹೇಳಿದ್ದ ʼಆʼ ಮಾತು ಈಗ ನಿಜವಾಯ್ತು! ಅಷ್ಟಕ್ಕೂ ಏನದು?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News