Suvarna Dasara Darbar: ದಸರಾ ಹಬ್ಬದ ವಿಶೇಷವಾಗಿ ವೀಕ್ಷಕರಿಗೆ ಇನ್ನಷ್ಟು ಮನರಂಜನೆಯನ್ನು ನೀಡುವ ಉದ್ದೇಶದಿಂದ ಸ್ಟಾರ್ ಸುವರ್ಣ ವಾಹಿನಿಯು ಕಿರುತೆರೆಯ ಅತೀ ದೊಡ್ಡ ದಸರಾ ಸಂಭ್ರಮವನ್ನೊಳಗೊಂಡ "ಸುವರ್ಣ ದಸರಾ ದರ್ಬಾರ್" ಎಂಬ ವಿಶೇಷ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಸಜ್ಜಾಗಿದೆ. ನವರಾತ್ರಿಯ ಈ ಸಂಭ್ರಮದಲ್ಲಿ ಸಡಗರವನ್ನು ಇನ್ನಷ್ಟು ಹೆಚ್ಚಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 


COMMERCIAL BREAK
SCROLL TO CONTINUE READING

ನಾಡಹಬ್ಬದ ಪ್ರಯುಕ್ತ ʼಸುವರ್ಣ ದಸರಾ ದರ್ಬಾರ್ʼ ವೇದಿಕೆಯಲ್ಲಿ ಅಂಬಾರಿಯಲ್ಲಿರುವ ಚಾಮುಂಡೇಶ್ವರಿ ದೇವಿಗೆ ಪೂಜೆ ಪುನಸ್ಕಾರಗಳನ್ನು ಮಾಡಲಾಗಿದೆ. ನವಶಕ್ತಿಯರ ಮಹತ್ವವನ್ನು ಸಾರುವ ಈ ನವರಾತ್ರಿಯಂದು ಇದೇ ಮೊದಲ ಬಾರಿಗೆ ತಾಯಂದಿರ ಮಹತ್ವವನ್ನು ಸಾರಲು ಕಿರುತೆರೆ ಕಲಾವಿದರು ತಮ್ಮ ತಾಯಂದಿರೊಂದಿಗೆ ವೇದಿಕೆಯಲ್ಲಿ ಭಾಗಿಯಾಗಿದ್ದು, ತಾಯಂದಿರ ಬಗ್ಗೆ ಹಿತನುಡಿಗಳನ್ನಾಡಿ, ತಾಯಂದಿರ ಪಾದ ಪೂಜೆಯನ್ನು ಮಾಡಿ  ಉಡುಗೊರೆಯನ್ನು ನೀಡಿದ್ದಾರೆ. ಇನ್ನು ಈ ಕಾರ್ಯಕ್ರಮದ ಮತ್ತೊಂದು ವಿಶೇಷ ಅಂದ್ರೆ ನಟ ರೋರಿಂಗ್ ಸ್ಟಾರ್ ಶ್ರೀಮುರಳಿಯವರು ಆಗಮಿಸಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ತಂದು ಕೊಟ್ಟಿದ್ದಾರೆ. ಜೊತೆಗೆ ತಮ್ಮ ತಾಯಿಯ ಬಗ್ಗೆ ಮಾತನಾಡಿ ಭಾವುಕರಾದರು.


ಇದನ್ನೂ ಓದಿ: 3 ವರ್ಷಗಳ ಶ್ರಮ-ಪರಿಶ್ರಮ... ಕೊನೆಗೂ ರಿಲೀಸ್‌ಗೆ ರೆಡಿಯಾಗಿದೆ ʼಮಾರ್ಟಿನ್‌ʼ! ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೈಬಜೆಟ್ ಸಿನಿಮಾ ಅಬ್ಬರಿಸಲು ಕೆಲವೇ ಗಂಟೆಗಳು ಬಾಕಿ


'ನೀನಾದೆನಾ' ಖ್ಯಾತಿಯ ವಿಕ್ರಂ-ವೇದಾ, ನಟಿ ತನಿಷಾ ಕುಪ್ಪಂಡ, ವರ್ತೂರ್ ಸಂತೋಷ್, ಕಿರಿಕ್ ಕೀರ್ತಿ, ರೆಮೋ, ಸ್ನೇಹಿತ್, ಅನನ್ಯ, ನಟಿ ಪ್ರಿಯಾಂಕ ಉಪೇಂದ್ರ, ಗಾಯಕ ಚಿನ್ಮಯ್ ಆತ್ರೇಯಸ್ ಎಲ್ಲರೂ ಒಂದಾಗಿ ವೇದಿಕೆಯಲ್ಲಿ ಭರ್ಜರಿ ಮನರಂಜನೆಯ ಮಹಾ ಮಳೆಯನ್ನೇ ಸುರಿಸಿದ್ದಾರೆ. ನಟಿ ಮಾನ್ವಿತಾ ಹರೀಶ್ ಹಾಗೂ ರಕ್ಷಕ್ ಬುಲೆಟ್ ಅದ್ಭುತ ಡಾನ್ಸ್ ಪರ್ಫಾರ್ಮೆನ್ಸ್ ನೀಡಿದ್ದು, ಕಾರ್ತಿಕ್ ಹಾಗೂ ನಮ್ರತಾ ಜೋಡಿಯಾಗಿ ಮಾಡಿರೋ ರೇನ್ ಡಾನ್ಸ್‌ಗೆ ವೀಕ್ಷಕರು ಮನಸೋಲೋದಂತೂ ಖಚಿತ.


'ಸುವರ್ಣ ಸೂಪರ್ ಸ್ಟಾರ್' ಖ್ಯಾತಿಯ ನಟಿ, ನಿರೂಪಕಿ ಶಾಲಿನಿಯವರು 'ದಸರಾ ದರ್ಬಾರ್' ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಜೊತೆಗೆ ಭರ್ಜರಿ ಡಾನ್ಸ್, ಹಾಡು ಹರಟೆ, ಆಟ ತುಂಟಾಟಗಳಿಂದ ವೀಕ್ಷಕರಿಗೆ ಮನರಂಜನೆಯ ಹೂರಣವನ್ನು ನೀಡಲಿದೆ ಸ್ಟಾರ್ ಸುವರ್ಣ. ಜಬರ್ದಸ್ತ್ ಮೋಜು ಮಸ್ತಿಯನ್ನು ಹೊತ್ತು ಬರ್ತಿದೆ "ಸುವರ್ಣ ದಸರಾ ದರ್ಬಾರ್" ಇದೇ ಭಾನುವಾರ ರಾತ್ರಿ 8 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ.. ತಪ್ಪದೇ ವೀಕ್ಷಿಸಿ...


ಇದನ್ನೂ ಓದಿ: ಅವನ 3 ಮದುವೆ ವಿಚಾರ ಮುಚ್ಚಿಟ್ಟು ನನ್ನನ್ನು ಗರ್ಭಿಣಿ ಮಾಡಿದ್ದ! ಕನ್ನಡದ ದಿಗ್ಗಜ ನಟ ಟೈಗರ್ ಪ್ರಭಾಕರ್ ಬಗ್ಗೆ ಖ್ಯಾತ ನಟಿ ಶಾಕಿಂಗ್‌ ಹೇಳಿಕೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.