Nayanatara: ಕಾಲಿವುಡ್ ಮತ್ತು ಟಾಲಿವುಡ್‌ನಲ್ಲಿ ಲೇಡಿ ಓರಿಯೆಂಟೆಡ್ ಚಿತ್ರಗಳನ್ನು ಮಾಡಲು ನಿರ್ದೇಶಕರ ಮೊದಲ ಆದ್ಯತೆ ನಯನತಾರಾ. ಲೇಡಿ ಸೂಪರ್ ಸ್ಟಾರ್ ನಯನತಾರಾ ಸಂಭಾವನೆ ಕೂಡ ಒಂದು ರೇಂಜ್ ನಲ್ಲಿ ಇರುತ್ತೆ ಅಂದ್ರೆ ನೀವು ನಂಬಲೇ ಬೇಕು. ಇತ್ತೀಚೆಗೆ ನಯನತಾರಾ ಸಂಭಾವನೆ 10 ಕೋಟಿ ದಾಟಿದ್ದು ಗೊತ್ತೇ ಇದೆ. ಇತ್ತೀಚೆಗೆ ಶಾರುಖ್ ಖಾನ್ ಅವರ ಜೊತೆ ನಟಿಸಿ ಬಾಲಿವುಡ್ ಪ್ರವೇಶಿಸಿದರು. 


COMMERCIAL BREAK
SCROLL TO CONTINUE READING

ಸದ್ಯ, ಬಾಕ್ಸ್ ಆಫೀಸ್ ನಲ್ಲಿ ದಾಖಲೆಗಳನ್ನು ಮುರಿಯುತ್ತಿರುವ , ಬಾಲಿವುಡ್ ಸ್ಟಾರ್ ಹೀರೋ ಶಾರುಖ್ ಖಾನ್ ಅಭಿನಯದ ಜವಾನ್‌ ಸಿನಿಮಾದಲ್ಲಿ ಲೇಡಿ ಸೂಪರ್ ಸ್ಟಾರ್ ನಯನತಾರಾ  ನಟನೆಗೆ ನಿರ್ದೇಶಕರು ಫಿದಾ ಆಗಿದ್ದಾರೆ. ಇನ್ನು ಈ ಚಿತ್ರದ  ಮತ್ತೊಂದು ವಿಶೇಷತೆಯೆಂದರೇ ಇದು ನಯನತಾರಾ ಅವರ ಬಾಲಿವುಡ್‌ನ ಚೊಚ್ಚಲ ಚಿತ್ರ.


ಇದನ್ನೂ ಓದಿ-ಅತಿಲೋಕ ಸುಂದರಿಯ ಅಚ್ಚು..! ಮೋಡಿ ಮಾಡುತ್ತಿವೆ ಜಾನ್ವಿ ಫೋಟೋಸ್‌


ಆದರೆ ನಯನತಾರಾ ಅವರ ಮೊದಲ ಚಿತ್ರವೇ ಬಾಲಿವುಡ್ ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದರಿಂದ ಇದೀಗ ಬಾಲಿವುಡ್ ನಲ್ಲಿ ಈ ನಟಿಗೆ ನಿರ್ದೇಶಕರು ಪೈಪೋಟಿ ನೀಡುತ್ತಿದ್ದಾರೆ. ತಮ್ಮ ಮುಂಬರುವ ಪ್ರಾಜೆಕ್ಟ್‌ಗಳಲ್ಲಿ ನಟಿಸಲು ಹಲವು ನಿರ್ಮಾಪಕರು ಈಗಾಗಲೇ ಲೇಡಿ ಸೂಪರ್‌ಸ್ಟಾರ್ ನಯನತಾರಾ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. 


ನಯನತಾರಾ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿರುವಾಗಲೇ ಬಾಲಿವುಡ್ ನಲ್ಲಿ ಸಿನಿಮಾ ಆಫರ್ ಗಳು ರೆಡಿಯಾಗಿದ್ದು, ನಯನತಾರಾ ಮೊದಲು ಬಾಲಿವುಡ್ ನಲ್ಲಿ ಯಾವ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ? ಯಾರ ಜೊತೆ ನಟಿಸಲಿದ್ದಾರೆ? ಎಂಬುದನ್ನು ಕಾದುನೋಡಬೇಕಿದೆ. 


ಇದನ್ನೂ ಓದಿ-SIIMA 2023 ದಲ್ಲೂ ʼಕಾಂತಾರʼ ಅಬ್ಬರ..! ದಿ ಡಿವೈನ್‌ ಚಿತ್ರಕ್ಕೆ ಸಾಲು ಸಾಲು ಅವಾರ್ಡ್‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.