ಬೆಂಗಳೂರು : ಜನವರಿ 8 ರಾಕಿಂಗ್ ಸ್ಟಾರ್ ಯಶ್ (Rocking Star Yash) ಜನ್ಮದಿನ. ಯಶ್ (Yash) ಅಭಿಮಾನಿಗಳು ಈ ದಿನಕ್ಕಾಗಿ ಕಾತುರದಿಂದ ಕಾಯುತ್ತಿರುತ್ತಾರೆ. ಪ್ರತಿ ವರ್ಷ ಜನವರಿ 8ರಂದು ಯಶ್ ಮನೆ ಮುಂದೆ ಜನಸಾಗರವೇ ಸೇರಿರುತ್ತದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಗೆ ಶುಭಾಶಯ ತಿಳಿಸಲು ದೂರುದೂರುಗಳಿಂದಲೂ ಬರುತ್ತಾರೆ.  ಇದೀಗ ಯಶ್ ತಮ್ಮ ಅಭಿಮಾನಿಗಳಲ್ಲಿ ಒಂದು ಮನವಿ ಮಾಡಿಕೊಂಡಿದ್ದಾರೆ. ಇದಕ್ಕಾಗಿ ವಿಡಿಯೋವೊಂದನ್ನು ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಒಬ್ಬಕಲಾವಿದ ಜೀವನದಲ್ಲಿ ಏನೇ ಆಗಬೆಕಾದರೂ ಅದಕ್ಕೆ ಕಾರಣ ಅಭಿಮಾನಿಗಳು(Fans). ನನ್ನ ಅಭಿಮಾನಿಗಳು ನನಗೆ  ಬಹಳ ಪ್ರೀತಿ ಕೊಟ್ಟಿದ್ದೀರಿ. ನನ್ನನ್ನು ವಿಶೇಷ ಸ್ಥಾನದಲ್ಲಿ  ಕೂರಿಸಿದ್ದೀರಿ.  ಜನವರಿ 8ಕ್ಕೆ ನೀವು ಎಷ್ಟು ಖುಷಿಯಿಂದ ಕಾಯುತ್ತಿರುತ್ತೀರೋ ನಾನು ಅದಕ್ಕಿಂತ ಹೆಚ್ಚು ಖುಷಿಯಿಂದ ಕಾಯುತ್ತಿರುತ್ತೇನೆ. ಯಾಕಂದರೆ ಆ ದಿನ ನನ್ನ ಎಲ್ಲಾಅಭಿಮಾನಿಗಳನ್ನು ತುಂಬಾ ಹತ್ತಿರದಿಂದ ನೋಡಬಹುದು, ಮಾತನಾಡಿಸಬಹುದು ಅನ್ನುವ ಉದ್ದೇಶದಿಂದ ಎಂದಿದ್ದಾರೆ ಯಶ್ (Yash).


ಇದನ್ನೂ ಓದಿ : Rocking Star Yash: ರಫ್ ಎಂಡ್ ಟಫ್ ಲುಕ್ ನಲ್ಲಿ ರಾಕಿಂಗ್ ಸ್ಟಾರ್, ಕೆಜಿಎಫ್ ಚಾಪ್ಟರ್ 2 ಚಿತ್ರದ ಫೋಟೋ ರಿಲೀಸ್


ಜೀವನದಲ್ಲಿ ಹುಟ್ಟುಹಬ್ಬಕ್ಕೆ(Birthday) ಅಷ್ಟು ಪ್ರಾಮುಖ್ಯತೆ ಕೊಟ್ಟವನಲ್ಲ ನಾನು. ಆದರೆ ಯಾವಾಗ ನೀವು ಇಷ್ಟು ಖುಷಿಯಿಂದ ನನ್ನ ಹುಟ್ಟುಹಬ್ಬವನ್ನು ಆಚರಿಸಲು ಶುರುಮಾಡಿದಿರೋ ನಾನು ಕೂಡಾ ಆಚರಿಸಲು ಆರಂಭಿಸಿದೆ. ಆದರೆ ಈ ವರ್ಷ ಕರೋನಾ (Coronavirus) ಹಿನ್ನೆಲೆಯಲ್ಲಿ ಜನ ಸೇರುವುದು ಸೂಕ್ತವಲ್ಲ. ಆರೋಗ್ಯದ ದೃಷ್ಟಿಯಿಂದ ಇದು ಸರಿಯಲ್ಲ. ಹಾಗಾಗಿ ಈ ಬಾರಿ ನೀವೆಲ್ಲಿದ್ದೀರೋ ಅಲ್ಲಿಂದಲೇ ಹರಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇನ್ನು ಜನ ಸೇರುವ ಬದಲು ಈ ವರ್ಷ ಸೊಶಿಯಲ್ ಮೀಡಿಯಾದಲ್ಲಿ ಶುಭಕೋರುವಂತೆಯೂ ಅಭಿಮಾನಿಗಳಲ್ಲಿ ಹೇಳಿದ್ದಾರೆ.


ಇನ್ನು ಈ ಬಾರಿ ಹೊರ ರಾಜ್ಯಗಳಿಂದಲೂ ಅಭಿಮಾನಿಗಳು ಬಂದಿದ್ದು, ಪ್ರತಿ ವರ್ಷದಂತೆ ಹುಟ್ಟುಹಬ್ಬದ ಮಾಡಿಕೊಳ್ಳಲು ಈ ಬಾರಿ ಆಗ್ತಿಲ್ಲ, ಕೊರೊನಾ (COVID 19)ಇರೋ ಕಾರಣಗಳಿಂದ ನಿಮ್ಮ ಹಾಗೂ ನಿಮ್ಮ ಕುಟುಂಬದ ಸುರಕ್ಷತೆ ಮುಖ್ಯ. ಆದ್ದರಿಂದ ನೀವು ಎಲ್ಲಿ ಇರುತ್ತೀರೋ  ಅಲ್ಲಿಂದಲೇ ಶುಭ ಹಾರೈಸಿ ಎಂದು ಮನವಿ ಮಾಡಿದ್ದಾರೆ. 


ಇದೇ ವೇಳೆ, ಜನವರಿ 8ರಂದು ಬೆಳಿಗ್ಗೆ 10.18ಕ್ಕೆ ಕೆಜಿಎಫ್ 2ನ (KGF 2)ಟೀಸರ್ ಬಿಡುಗಡೆ ಬಗ್ಗೆಯೂ ರಾಕಿಂಗ್ಸ್ಟಾರ್ ಮಾಹಿತಿ ನೀಡಿದರು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.