Rocking Star Yash: ರಫ್ ಎಂಡ್ ಟಫ್ ಲುಕ್ ನಲ್ಲಿ ರಾಕಿಂಗ್ ಸ್ಟಾರ್, ಕೆಜಿಎಫ್ ಚಾಪ್ಟರ್ 2 ಚಿತ್ರದ ಫೋಟೋ ರಿಲೀಸ್

ಸೋಶಿಯಲ್ ಮೀಡಿಯಾದಲ್ಲಿ KGF Chapter 2 ಚಿತ್ರದ ಹೊಸ ಪೋಟೋ ಒಂದನ್ನು ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಶೇರ್ ಮಾಡಿದ್ದಾರೆ . ಈ ಫೋಟೋ ಇನ್ನಿಲ್ಲದಷ್ಟು ವೈರಲ್ ಆಗಿದ್ದು, ಚಿತ್ರದ ಮೇಲಿನ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ. 

Written by - Zee Kannada News Desk | Last Updated : Jan 4, 2021, 02:01 PM IST
  • ಅಭಿಮಾನಿಗಳಿಗೆ ಖುಷಿ ಸುದ್ದಿ ಕೊಟ್ಟ ನಿರ್ದೇಶಕ ಪ್ರಶಾಂತ್ ನೀಲ್
    ಕೆಜಿಎಫ್:ಚಾಪ್ಟರ್ 2 ಚಿತ್ರದ ಪೋಸ್ಟರ್ ರಿಲೀಸ್
    ಜ. 8 ರಂದು ಚಿತ್ರದ ಟೀಸರ್ ಬಿಡುಗಡೆ
Rocking Star Yash: ರಫ್ ಎಂಡ್ ಟಫ್ ಲುಕ್ ನಲ್ಲಿ ರಾಕಿಂಗ್ ಸ್ಟಾರ್, ಕೆಜಿಎಫ್ ಚಾಪ್ಟರ್ 2 ಚಿತ್ರದ ಫೋಟೋ ರಿಲೀಸ್ title=
ಕೆಜಿಎಫ್ ಚಾಪ್ಟರ್ 2 ಚಿತ್ರದ ಪೋಸ್ಟರ್ ರಿಲೀಸ್

ಬೆಂಗಳೂರು : ಕೆಜಿಎಫ್  ಚಾಪ್ಟರ್ 2 ಈಗಾಗಲೇ ಕುತೂಹಲ ಕೆರಳಿಸುತ್ತಿದೆ.  ಜನವರಿ 8 ರಂದು ರಾಕಿಂಗ್ ಸ್ಟಾರ್ ಯಶ್ ಜನುಮದಿನ.   ಅಂದೇ ಕೆಜಿಎಫ್  ಚಾಪ್ಟರ್ 2 ಟೀಸರ್ ಕೂಡಾ ರಿಲೀಸ್ ಆಗಲಿದೆ. ರಾಕಿಂಗ್ ಸ್ಟಾರ್ ಅಭಿಮಾನಿಗಳಂತೂ ಆ ಕ್ಷಣಗಳಿಗಾಗಿ ಕಾಯುತ್ತಿದ್ದಾರೆ. 

ಈ ನಡುವೆ, ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel)ಅಭಿಮಾನಿಗಳಿಗೆ ಖುಷಿಯ ಸುದ್ದಿ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಚಿತ್ರದ ಹೊಸ ಪೋಟೋ ಒಂದನ್ನು ಶೇರ್ ಮಾಡಿದ್ದಾರೆ ಪ್ರಶಾಂತ್ ನೀಲ್. ಈ ಫೋಟೋ ಇನ್ನಿಲ್ಲದಷ್ಟು ವೈರಲ್ ಆಗಿದ್ದು, ಚಿತ್ರದ ಮೇಲಿನ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.  
‘ಈ ಸಾಮ್ರಾಜ್ಯದ ಬಾಗಿಲು ತೆರೆಯಲು ಈಗ ಕ್ಷಣ ಗಣನೆ ಆರಂಭವಾಗುತ್ತಿದೆ’ ಎಂಬ ಶೀರ್ಷಿಕೆಯೊಂದಿಗೆ  ಫೋಟೋ ರಿಲೀಸ್ ಆಗಿದೆ. ಜನವರಿ 8, ಬೆಳಗ್ಗೆ 10.18ಕ್ಕೆ ಕೆಜಿಎಫ್ ಚಾಪ್ಟರ್ 2 (KGF Chapter 2) ಟೀಸರ್ ಕೂಡಾ ಬಿಡುಗಡೆಯಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ ಪ್ರಶಾಂತ್ ನೀಲ್. 

 

ALSO READ : KGF chapter 2 ಟೀಸರ್ ಬಿಡುಗಡೆ ಬಗ್ಗೆ ಸಿಹಿ ಸುದ್ದಿ ಹಂಚಿಕೊಂಡ ಪ್ರಶಾಂತ್ ನೀಲ್

ಕೆಜಿಎಫ್ ಚಾಪ್ಟರ್ 2 (KGF Chapter 2) ಚಿತ್ರದ ಫೋಟೋ ಕೂಡಾ ಕುತೂಹಲ ಹೆಚ್ಚಿಸಿದೆ. ತುಂಬಾ ಡಾರ್ಕ್ ರೂಮ್ ನಲ್ಲಿ ಯಶ್ ಕುಳಿತಿದ್ದಾರೆ.  ರಫ್ & ಟಫ್ ಆಗಿ ಕಾಣಿಸುತ್ತಿದ್ದಾರೆ. ಕೈಯಲ್ಲೊಂದು ದೊಣ್ಣೆ ಇದೆ. ಆವೇಶದಿಂದ ಯಾರಿಗೋ ಕಾಯುವಂತೆ ಅವರ ಪೋಸ್ ಇದೆ.  ಅವರ ಮುಖದ ಮೇಲೆ ಬೆಂಕಿಯ ಕೆಂಪು ಬೆಳಕು ರಾಚುತಿದೆ. ಕಡುಗಪ್ಪು ಮತ್ತು ದಟ್ಟಕೆಂಪು ಬಣ್ಣದ ಕಾಂಬಿನೇಷನ್ ನಡುವೆ ಕಾಣಿಸುತ್ತಿದ್ದಾರೆ ಯಶ್(Yash). ಟೀಸರ್ ನಷ್ಟೇ ಸ್ಟ್ರಾಂಗ್ ಆಗಿ ಮೂಡಿ ಬಂದಿದೆ ಈ ಪೋಸ್ಟರ್.  ಅಭಿಮಾನಿಗಳು ಫಿದಾ ಆಗಲು ಬೇರೇನೂ ಕಾರಣಗಳು ಬೇಕಾಗಿಲ್ಲ. 

ಲಾಕ್ ಡೌನ್ (Lock Down) ಕಾರಣದಿಂದ ಸಿನಿಮಾ ಕೆಲಸಗಳು ವಿಳಂಬವಾಗಿದ್ದವು. ಈಗಅದಕ್ಕೊಂದು ಬಿರುಸು ಸಿಕ್ಕಿದೆ. ಸಂಜಯ್ ದತ್ (Sanjay Dutt)ನಟಿಸಿರುವ  ಕೆಲವು ಕ್ಲೈಮಾಕ್ಸ್ ಸೀನ್ ಗಳನ್ನು ಹೈದರಾಬಾದಿನಲ್ಲಿ ಚಿತ್ರಿಸಲಾಗಿದೆ.  ರಿಲೀಸ್ ಯಾವಾಗ ಅನ್ನೋದೇ ಈಗ ಅಭಿಮಾನಿಗಳ ಪ್ರಶ್ನೆಯಾಗಿದೆ. ಅದಕ್ಕೆ ಉತ್ತರ ಜನವರಿ 8ಕ್ಕೆ ಸಿಗುತ್ತಾ..? ಕಾಯಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News