ಬೆಂಗಳೂರು : ಬಾಗ್ಲು ತೆಗಿ ಮೇರಿ ಜಾನ್' ಈ ಹಾಡು ಇದೀಗ ಎಲ್ಲರ ಮನೆಮನಗಳಲ್ಲಿ ಕೇಳಿ ಬರುತ್ತಿರೋ ಸೂಪರ್ ಸಾಂಗ್. ನವರಸ ನಾಯಕ ಜಗ್ಗೇಶ್ ನಟನೆಯ ಬಹುನಿರೀಕ್ಷೆಯ ಸಿನಿಮಾವಿದು. ತೋತಾಪುರಿ ಸಿನಿಮಾ ಇದೇ ಸೆಪ್ಟೆಂಬರ್ 30ಕ್ಕೆ ಅದ್ದೂರಿಯಾಗಿ ತೆರೆಯ ಮೇಲೆ ಮಿಂಚಲು ಸಿದ್ಧವಾಗಿದೆ. ಸೆಪ್ಟೆಂಬರ್ ತಿಂಗಳ ಕೊನೆಯ ದಿನದಿಂದ ನಗುವಿನ ಹಬ್ಬ ಶುರುವಾಗುತ್ತೆ.ಯಾಕಂದ್ರೆ ತೋತಾಪುರಿ ಸಿನಿಮಾ ನಿಮ್ಮನ್ನ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವುದರಲ್ಲಿ ಡೌಟೇ ಇಲ್ಲ ಬಿಡಿ.


COMMERCIAL BREAK
SCROLL TO CONTINUE READING

ನವರಸ ನಾಯಕ ಜಗ್ಗೇಶ್ ಮತ್ತು ನಿರ್ದೇಶಕ ವಿಜಯ್​ ಪ್ರಸಾದ್​ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರ ತೋತಾಪುರಿ ರಿಲೀಸ್​ ಡೇಟ್​ ಅನೌನ್ಸ್ ಆಗಿದೆ. ಈ ಡೇಟ್ ಅನೌನ್ಸ್ ಆಗಿರುವ ಕಾರಣ, ಅಭಿಮಾನಿಗಳು ಕುಣಿದಾಡಿದ್ದಾರೆ. ವಿಜಯ್ ಪ್ರಸಾದ್ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಚಾಪು ಮೂಡಿಸಿದ್ದಾರೆ. 'ಸಿದ್ಲಿಂಗು'  'ನೀರ್​ ದೋಸೆ'ಯಂತಹ ಡಿಫ್ರೆಂಟ್​ ಜಾನರ್​ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇದಾದ ಬಳಿಕ ತೋತಾಪುರಿ ಸಿನಿಮಾ ಮಾಡಿದ್ದು, ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಈಗಾಗಲೇ ಬಿಡುಗಡೆ ಆಗಿರುವ ಚಿತ್ರದ ಟ್ರೈಲರ್ ಸಖತ್ ಸದ್ದು ಮಾಡುತ್ತಿದೆ.


ಇದನ್ನೂ ಓದಿ : ಇಂಡಿಯಾ ಟಾಪ್‌ 10 ಹೀರೋಗಳ ಪಟ್ಟಿ ಬಿಡುಗಡೆ : ರಾಕಿ ಭಾಯ್‌ಗೆ 5ನೇ ಸ್ಥಾನ


ನವರಸ ನಾಯಕ ಜಗ್ಗೇಶ್​ ಸಿನಿಮಾಗಳಲ್ಲಿ ತುಸು ಹೆಚ್ಚು ಡಬಲ್​ ಮಿನಿಂಗ್​ ಡೈಲಾಗ್​ಗಳು ಇರುವುದು ಸಹಜ. ಇವರ ಜೊತೆ ವಿಜಯ್​ ಪ್ರಸಾದ್​ ಜೊತೆಯಾಗುತ್ತಿದ್ದಾರೆ ಅಂದರೆ ಕೇಳಬೇಕಾ? ತೋತಾಪುರಿ ಸಿನಿಮಾದಲ್ಲಿ ಬರೀ ಕಾಮಿಡಿ ಮಾತ್ರವಲ್ಲ ಒಂದೊಳ್ಳೆ ಸಂದೇಶ ಕೂಡ ಇದೆ.


ಇನ್ನೇನು ತೋತಾಪುರಿ ಸಿನಿಮಾ ರಿಲೀಸ್ ಗೆ ಕೆಲವೇ ದಿನಗಳು ಬಾಕಿಯಿದ್ದು ತೆರೆ ಮೇಲೆ ಸಿನಿಮಾನ ಯಾವಾಗಪ್ಪ ನೋಡೋದು ಅಂತ ಜಗ್ಗೇಶ್ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾದಿದ್ದಾರೆ. ಸೋ ವೇಟ್ ಮಾಡಿ ಸಿನಿಮಾ ನೋಡೋದೇ ಒಂಥರಾ ಮಜಾ ಬಿಡಿ.


ಇದನ್ನೂ ಓದಿ : ಬಿಗ್ ಬಾಸ್ ಸೀಸನ್ 9 ಗೆ ಕ್ಷಣಗಣನೆ : ಡೊಡ್ಮನೆ ಹೇಗಿರುತ್ತೆ ಗೊತ್ತಾ..!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.