ಬಿಗ್ ಬಾಸ್ ಸೀಸನ್ 9 ಗೆ ಕ್ಷಣಗಣನೆ : ಡೊಡ್ಮನೆ ಹೇಗಿರುತ್ತೆ ಗೊತ್ತಾ..!

ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 9 ಪ್ರಸಾರವಾಗಲಿದ್ದು, ಸ್ಪರ್ಧಿಗಳ ಎಂಟ್ರಿಗೆ ದೊಡ್ಮನೆ ತಯಾರಾಗುತ್ತಿದೆ. ಈ ಬಾರಿ ಬಿಗ್‌ ಹೌಸ್‌ ಲುಕ್‌ ಯಾವ ರೀತಿಯ ಇರತ್ತೇ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದ್ದು, ಈ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.  

Written by - Krishna N K | Last Updated : Sep 22, 2022, 05:51 PM IST
  • ಬಿಗ್ ಬಾಸ್ ಕನ್ನಡ ಸೀಸನ್ 9 ಪ್ರಸಾರವಾಗಲಿದ್ದು, ಸ್ಪರ್ಧಿಗಳ ಎಂಟ್ರಿಗೆ ದೊಡ್ಮನೆ ತಯಾರಾಗುತ್ತಿದೆ.
  • ಬಿಗ್ ಬಾಸ್ ಕನ್ನಡ ಸೀಸನ್ 9 ಸೆಪ್ಟೆಂಬರ್ 24 ರಂದು ಆರಂಭವಾಗಲಿದೆ.
  • ಹಳೆಯ ಸೀಸನ್‌ಗಳಲ್ಲಿ ಭಾಗವಹಿಸಿದ್ದ 4 ಸ್ಪರ್ಧಿಗಳು ಬಿಗ್ ಬಾಸ್ ಮನೆ ಪ್ರವೇಶ ಮಾಡಲಿದ್ದಾರೆ.
ಬಿಗ್ ಬಾಸ್ ಸೀಸನ್ 9 ಗೆ ಕ್ಷಣಗಣನೆ : ಡೊಡ್ಮನೆ ಹೇಗಿರುತ್ತೆ ಗೊತ್ತಾ..! title=

ಬೆಂಗಳೂರು : ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 9 ಪ್ರಸಾರವಾಗಲಿದ್ದು, ಸ್ಪರ್ಧಿಗಳ ಎಂಟ್ರಿಗೆ ದೊಡ್ಮನೆ ತಯಾರಾಗುತ್ತಿದೆ. ಈ ಬಾರಿ ಬಿಗ್‌ ಹೌಸ್‌ ಲುಕ್‌ ಯಾವ ರೀತಿಯ ಇರತ್ತೇ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದ್ದು, ಈ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಹೌದು, ಬಿಗ್‌ಬಾಸ್‌ ಕನ್ನಡ ಓಟಿಟಿ ಮುಕ್ತಾಯಗೊಂಡಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ನಿಮ್ಮ ಮನೆಯ ಟಿವಿ ಪರದೆ ಮೇಲೆ ಬಿಗ್ ಬಾಸ್ ಕನ್ನಡ ಸೀಸನ್ 9 ಬರಲಿದೆ. ಈಗಾಗಲೇ ಕಿಚ್ಚ ಸುದೀಪ್‌ ಅವರು ಶೋಗೆ ಗ್ರಾಂಡ್ಯ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಬಿಗ್‌ ಹೌಸ್‌ ಬಗ್ಗೆ ಕುತೂಹಲ ಮೂಡಿದೆ. ಈ ಕುರಿತು ಕಲರ್ಸ್ ಕನ್ನಡ ಬಿಸ್ನೆಸ್​ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಬಿಗ್ ಬಾಸ್ ಮನೆಯ ಹೊಸ ಫೋಟೋ ಒಂದನ್ನು ತಮ್ಮ‌ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ʼಬಹುತೇಕ ಸಿದ್ಧತೆ ನಡೆದಿದೆʼ ಎಂದು ಕ್ಯಾಪ್ಷನ್‌ ನೀಡಿದ್ದಾರೆ. 

ಇದನ್ನೂ ಓದಿ: ಮುಂದಿನ ವರ್ಷದಿಂದ ಬದಲಾಗಲಿದೆ IPL ಸ್ವರೂಪ : ಖಚಿತಪಡಿಸಿದ ಗಂಗೂಲಿ 

ಆದ್ರೆ ಮನೆಯಲ್ಲಿ ಹೆಚ್ಚಿನ ಬದಲಾವಣೆ ಏನೂ ಮಾಡಿಲ್ಲ ಎನ್ನಲಾಗಿದೆ. ಶೋ ಪ್ರಾರಂಭವಾಗಲು ಕೇವಲ ಎರಡು ದಿನ ಬಾಕಿ ಇರುವ ಕಾರಣ ಇನ್ನೋವೇಷನ್ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ. ಇದು ಅಭಿಮಾನಿಗಳಲ್ಲಿ ನಿರಾಸೆ ಹುಟ್ಟಿಸಿದೆ. ಬಿಗ್ ಬಾಸ್ ಕನ್ನಡ ಸೀಸನ್ 9 ಸೆಪ್ಟೆಂಬರ್ 24 ರಂದು ಆರಂಭವಾಗಲಿದೆ. ಹಳೆಯ ಸೀಸನ್‌ಗಳಲ್ಲಿ ಭಾಗವಹಿಸಿದ್ದವರು ಬಿಗ್ ಬಾಸ್ ಮನೆ ಪ್ರವೇಶ ಮಾಡಲಿದ್ದಾರೆ.

ಬಿಗ್ ಬಾಸ್ ಕನ್ನಡ ಓಟಿಟಿಯಿಂದ ಸೆಲೆಕ್ಟ್‌ ಆದ ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಸಾನ್ಯಾ ಅಯ್ಯರ್ ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಇರಲಿದ್ದಾರೆ. ಒಟ್ಟು 18 ಸ್ಪರ್ಧಿಗಳ ಪೈಕಿ ಸದ್ಯ 4 ಜನರು ಮಾತ್ರ ಆಯ್ಕೆಯಾಗಿದ್ದು, ಇನ್ನೂ ಯಾರ‍್ಯಾರು ಬಿಗ್‌ ಹೌಸ್‌ನಲ್ಲಿ ಲಾಕ್‌ ಆಗ್ತಾರೆ ಅಂತ ಕಾಯ್ದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News