ಗಣಪತ್ ಚಿತ್ರೀಕರಣದ ವೇಳೆ ಟೈಗರ್ ಶ್ರಾಫ್ ಕಣ್ಣಿಗೆ ಗಾಯ!
ಟೈಗರ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಟೋವನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಅವರ ಕಣ್ಣುಗಳ ಸುತ್ತಲೂ ಕಪ್ಪು ಮತ್ತು ನೀಲಿ ಗುರುತುಗಳನ್ನು ಕಾಣಬಹುದು.
ನವದೆಹಲಿ : 2019 ರ ಬ್ಲಾಕ್‌ಬಸ್ಟರ್ ಚಿತ್ರ 'ವಾರ್' ನಲ್ಲಿ ಹೃತಿಕ್ ರೋಷನ್ (Hrithik Roshan) ಜೊತೆಗೆ ಅದ್ಭುತ ಆಕ್ಶನ್ ನಲ್ಲಿ ಕಾಣಿಸಿಕೊಂಡಿರುವ ಟೈಗರ್ ಶ್ರಾಫ್ (Tiger Shroff), ಚಿತ್ರದಲ್ಲಿ ತನ್ನ ಛಾಪು ಮೂಡಿಸಲು ಸರ್ವ ಪ್ರಯತ್ನವನ್ನೂ ಮಾಡುತ್ತಾರೆ. ಅವರು ಶೀಘ್ರದಲ್ಲೇ ಮತ್ತೊಂದು ಆಕ್ಷನ್-ಥ್ರಿಲ್ಲರ್ 'ಗಣಪತ್: ಪಾರ್ಟ್ 1' (Ganapat Part-1)ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಚಿತ್ರದ ಶೂಟಿಂಗ್ ವೇಳೆ, ಟೈಗರ್ ಶ್ರಾಫ್ ಕಣ್ಣಿಗೆ ಗಾಯವಾಗಿರುವ ಬಗ್ಗೆ ವರದಿಯಾಗಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಟೈಗರ್ :
ಟೈಗರ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ (Instagram) ಪೋಟೋವನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಅವರ ಕಣ್ಣುಗಳ ಸುತ್ತಲೂ ಕಪ್ಪು ಮತ್ತು ನೀಲಿ ಗುರುತುಗಳನ್ನು ಕಾಣಬಹುದು. ಈ ಪೋಸ್ಟ್ ನೊಂದಿಗೆ ಟೈಗರ್ ಶ್ರಾಫ್ (Tiger Shroff), ಸುಸ್ತಾಗಿರುವ ಮತ್ತು ಒಂದು ನಿಂಜಾ ಇಮೋಜಿಯನ್ನು ಕೂಡಾ ಹಂಚಿಕೊಂಡಿದ್ದಾರೆ.
Video Viral: ರಿಯಾಲಿಟಿ ಶೋನಲ್ಲಿ ಕೆಟ್ಟದಾಗಿ ಹಾಡಿದ ಸಾರಾ ಅಲಿ ಖಾನ್..!
ಸ್ಟಂಟ್ ಮಾಸ್ಟರ್ಸ್ :
'ಬಾಘಿ' ನಟ ಟೈಗರ್ ಶ್ರಾಫ್ ತಮ್ಮದೇ ಆದ ಸಾಹಸ ದೃಶ್ಯಗಳನ್ನು ಮಾಡುವಲ್ಲಿ ಹೆಸರುವಾಸಿಯಾಗಿದ್ದಾರೆ. ತಮ್ಮ ಮುಂಬರುವ ಚಿತ್ರದಲ್ಲಿಯೂ ಸಹ, ಅವರು ಎಲ್ಲಾ ಸಾಹಸ ದೃಶ್ಯಗಳನ್ನು ಗಳನ್ನು ಅತ್ಯುತ್ಸಾಹದಲ್ಲಿಯೇ ಮಾಡಿದ್ದಾರೆ. ಚಿತ್ರದ ಬಿಡುಗಡೆಗೂ ಮುನ್ನವೇ ಟೈಗರ್ ತನ್ನ ಅಭಿಮಾನಿಗಳಿಗೆ ಆಕ್ಷನ್ (Tiger Shroff Action) ರಿಹರ್ಸಲ್‌ಗಳ ಕೆಲವು ಝಲಕ್ ಗಳನ್ನು ತೋರಿಸಿದ್ದಾರೆ.
ಕುತೂಹಲ ಹೆಚ್ಚಿಸಿದ ಪೋಸ್ಟರ್ :
'ಗಣಪತ್ ಭಾಗ 1' ಚಿತ್ರದ ಮೋಷನ್ ಪೋಸ್ಟರ್ ಮತ್ತು ಯುಕೆ ವೇಳಾಪಟ್ಟಿಯು ಈಗಾಗಲೇ ಚಿತ್ರದ ಬಗ್ಗೆ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಈ ಚಿತ್ರ 2022 ರಲ್ಲಿ ಬಿಡುಗಡೆಯಾಗಲಿರುವ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ.
ಇದನ್ನೂ ಓದಿ : "ಮೋಹಕವಾಗಿ ಕಾಣುವುದು ಸವಾಲಿನ ಕೆಲಸ": ಐಟಂ ಸಾಂಗ್ ಬಗ್ಗೆ ಮಾತನಾಡಿದವರಿಗೆ ಸಮಂತಾ ಉತ್ತರ.!
'ಗಣಪಥ್ ಭಾಗ 1' ಆಕ್ಷನ್-ಥ್ರಿಲ್ಲರ್ ಫ್ರಾಂಚೈಸ್ ಆಗಿದ್ದು, ಟೈಗರ್ ಶ್ರಾಫ್, ಕೃತಿ ಸನೋನ್ (Kriti Sanon) ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು ವಿಕಾಸ್ ಬಹ್ಲ್ ನಿರ್ದೇಶಿಸಿದ್ದು, ಜಾಕಿ ಭಗ್ನಾನಿ, ವಶು ಭಗ್ನಾನಿ ಮತ್ತು ದೀಪ್ಶಿಕಾ ದೇಶಮುಖ್ ಚಿತ್ರವನ್ನು ನಿರ್ಮಿಸಿದ್ದಾರೆ. 'ಗಣಪತ್' ಜೊತೆಗೆ ಟೈಗರ್ 2022 ರ ಈದ್‌ನಲ್ಲಿ 'ಹೀರೋಪಂತಿ 2' ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ