"ಮೋಹಕವಾಗಿ ಕಾಣುವುದು ಸವಾಲಿನ ಕೆಲಸ": ಐಟಂ ಸಾಂಗ್‌ ಬಗ್ಗೆ ಮಾತನಾಡಿದವರಿಗೆ ಸಮಂತಾ ಉತ್ತರ.!

Samantha Ruth Prabhu: ಐಟಂ ಸಾಂಗ್​ನಲ್ಲಿ ಹೆಜ್ಜೆ ಹಾಕಿದ್ದಕ್ಕೆ ಸಮಂತಾ ಅವರನ್ನು ಕೆಲವರು ವಿರೋಧಿಸುತ್ತಿದ್ದಾರೆ. ಈ ಕುರಿತಂತೆ ನಟಿ ಮಾತನಾಡಿದ್ದು, ವಿರೋಧಿಗಳಿಗೆ ಉತ್ತರ ನೀಡಿದ್ದಾರೆ. 

Edited by - Zee Kannada News Desk | Last Updated : Dec 21, 2021, 04:09 PM IST
  • ಐಟಂ ಸಾಂಗ್​ನಲ್ಲಿ ಹೆಜ್ಜೆ ಹಾಕಿದ ಸಮಂತಾ
  • ಅಲ್ಲು ಅರ್ಜುನ್ ಅಭಿನಯದ ಪುಷ್ಪ: ದಿ ರೈಸ್‌ ಸಿನಿಮಾದ ಐಟಂ ಸಾಂಗ್
  • ಮೋಹಕವಾಗಿ ಕಾಣಿಸಿಕೊಳ್ಳುವುದು ಮತ್ತೊಂದು ಹಂತದ ಶ್ರಮವನ್ನು ಬೇಡುತ್ತದೆ
  • Instagram ನಲ್ಲಿ ಈ ಬಗ್ಗೆ ಪೋಸ್ಟ್ ಹಾಕಿದ ನಟಿ ಸಮಂತಾ ರುತ್ ಪ್ರಭು
"ಮೋಹಕವಾಗಿ ಕಾಣುವುದು ಸವಾಲಿನ ಕೆಲಸ": ಐಟಂ ಸಾಂಗ್‌ ಬಗ್ಗೆ ಮಾತನಾಡಿದವರಿಗೆ ಸಮಂತಾ ಉತ್ತರ.! title=
ಸಮಂತಾ

ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಅಲ್ಲು ಅರ್ಜುನ್ ಅಭಿನಯದ ಪುಷ್ಪ: ದಿ ರೈಸ್‌ನ (Pushpa: The Rise) ಸಿನಿಮಾದಲ್ಲಿ ಐಟಂ ಸಾಂಗ್ (item song) 'ಊ ಅಂತಾವಾ'  ಗೆ ಮಾತನಾಡಿದ್ದಾರೆ. ಸಮಂತಾ Instagram ನಲ್ಲಿ ಈ ಬಗ್ಗೆ ಪೋಸ್ಟ್ ಹಾಕಿದ್ದಾರೆ.

"ನಾನು ಒಳ್ಳೆಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ನೆಗೆಟಿವ್ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದೇನೆ. ಹಾಸ್ಯ, ಗಂಭೀರವಾದ ಪಾತ್ರಗಳಲ್ಲಿಯೂ ಅಭಿನಯಿಸಿದ್ದೇನೆ. ಶೋ ಕೂಡ ಹೋಸ್ಟ್ ಕೂಡ ಮಾಡಿದ್ದೇನೆ. ಈ ಎಲ್ಲ ಕೆಲಸಗಳನ್ನು ಉತ್ತಮವಾಗಿ ನಿರ್ವಹಿಸಲು ಬಹಳ ಶ್ರಮವಹಿಸಿದ್ದೇನೆ. ಆದರೆ, ಮೋಹಕವಾಗಿ ಕಾಣಿಸಿಕೊಳ್ಳುವುದು ಮತ್ತೊಂದು ಹಂತದ ಶ್ರಮವನ್ನು ಬೇಡುತ್ತದೆ. ಅದು ಅತ್ಯಂತ ಕಠಿಣ ಕೆಲಸ.. ಎಲ್ಲರ ಪ್ರೀತಿಗೆ ಧನ್ಯವಾದಗಳು" ಎಂದು ಸಮಂತಾ Instagram ನಲ್ಲಿ ಬರೆದುಕೊಂಡಿದ್ದಾರೆ. 

 

 

'ಪುಷ್ಪ' ಚಿತ್ರವನ್ನು ಖ್ಯಾತ ನಿರ್ದೇಶಕ ಸುಕುಮಾರ್ ನಿರ್ದೇಶಿಸಿದ್ದಾರೆ. ಇದರಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರವು ಡಿಸೆಂಬರ್ 17, 2021 ರಂದು ಬಿಡುಗಡೆಯಾಯಿತು.

ಇತ್ತೀಚೆಗಷ್ಟೇ ಸಮಂತಾ ಅವರ ಸ್ಪೆಷಲ್ ಡ್ಯಾನ್ಸ್ ನಂಬರ್ 'ಊ ಅಂತಾವಾ' ವಿರುದ್ಧ ಪುರುಷರ ಸಂಘವೊಂದು ಕೇಸ್ ಹಾಕಿತ್ತು. ವರದಿಯ ಪ್ರಕಾರ, ಹಾಡಿನ ಸಾಹಿತ್ಯ ಮತ್ತು ದೃಶ್ಯಗಳ ವಿರುದ್ಧ ಮೊಕದ್ದಮೆ ಹೂಡಲಾಗಿದೆ. 

ಇದನ್ನೂ ಓದಿ: ಮುಂಬೈನಲ್ಲಿ ವಿಜಯ್​ ದೇವರಕೊಂಡ ಜತೆ ರಶ್ಮಿಕಾ ಡಿನ್ನರ್​ ಪಾರ್ಟಿ.. ಶುರುವಾಯ್ತು ಹೊಸ ಗಾಸಿಪ್​.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News