Qatar papa : ಸೋಷಿಯಲ್‌ ಮೀಡಿಯಾದಲ್ಲಿ ಚಿತ್ರ ವಿಚಿತ್ರ ಟಿಕ್‌ಟಾಕ್‌, ರೀಲ್ಸ್‌ ಮಾಡಿ ಸ್ಟಾರ್‌ ಆಗಿರುವ ತೆಲಂಗಾಣದ ಕತಾರ್ ಪಾಪಾ ಅಲಿಯಾಸ್ ಶಾಲಿನಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾಳೆ. ಯುವಕನೊಬ್ಬ ಗರ್ಭಿಣಿಮಾಡಿ ಮೋಸ ಮಾಡಿದ್ದಾನೆ ಎಂದು ಕತಾರ್‌ ಪಾಪಾ ದೂರು ನೀಡಿದ್ದಾಳೆ. ಟಿಕ್‌ಟಾಕ್‌ ಬ್ಯಾನ್‌ ಆದ ನಂತರ ಈಕೆ ಕೆಲವು ಯುಟ್ಯೂಬ್‌ ವಿಡಿಯೋಗಳಲ್ಲಿ ನಟಿಸುತ್ತಿದ್ದಳು.


COMMERCIAL BREAK
SCROLL TO CONTINUE READING

ಕತಾರ್‌ ಪಾಪಾ ಮಾಡುತ್ತಿದ್ದ ಚಿತ್ರ ವಿಚಿತ್ರ ವಿಡಿಯೋಗಳಿಗೆ ನೆಟ್ಟಿಗರು ಟ್ರೋಲ್‌ ಮಾಡುತ್ತಿದ್ದರು. ನೆಗಟಿವ್‌ ಪಬ್ಲಿಸಿಟಿ ಮೂಲಕ ಶಾಲಿನಿ ಕತಾರ್‌ ಪಾಪಾ ಎಂದು ಪ್ರಖ್ಯಾತಿಗಳಿಸಿದ್ದಳು. ಕತಾರಿ ಬೇಬಿಗೆ ಇಂದಿಗೂ ಬಹಳಷ್ಟು ಕ್ರೇಜ್ ಇದೆ. ಹೈದರಾಬಾದ್‌ನಲ್ಲಿ ಯುವಕನೊಬ್ಬ ತನಗೆ ಮೋಸ ಮಾಡಿದ್ದಾನೆ ಎಂದು ಶಾಲಿನಿ ಎಸ್ ಆರ್ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ತನ್ನನ್ನು ಗರ್ಭಿಣಿಯನ್ನಾಗಿಸಿ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ. 


ಇದನ್ನೂ ಓದಿ: Nora Fatehi : ಜಸ್ಟ್‌ ಸ್ವರ್ಗದಿಂದ ಧರೆಗೆ ಬಂದ ಊರ್ವಶಿಯಂತಿದ್ದಾಳೆ ಸುಂದರಿ ನೋರಾ..!


ಆಕೆಯ ದೂರಿನ ಮೇರೆಗೆ ಎಸ್ ಆರ್ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಯುವಕರ ವಿರುದ್ಧ 376 ಅತ್ಯಾಚಾರ ಮತ್ತು 420 ವಂಚನೆ ಪ್ರಕರಣಗಳನ್ನು ದಾಖಲಿಸಿದ್ದಾರೆ. ಸದ್ಯ ಶಾಲಿನಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ರೋಹಿತ್ ಪಠಾಣ್ ಖಾನ್ ಎಂಬ ಯುವಕ 6 ತಿಂಗಳಿಂದ ಶಾಲಿನಿ ಜೊತೆ ವಾಸವಾಗಿದ್ದನಂತೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಂಪೂರ್ಣ ಮಾಹಿತಿ ಸಂಗ್ರಹಿಸುತ್ತಿದ್ದಾರೆ.


ಶಾಲಿನಿ ತನ್ನ 22ನೇ ವಯಸ್ಸಿನಲ್ಲಿ ವಿವಾಹವಾಗಿದ್ದರು. ಆದರೆ ಪತಿ ಕೆಟ್ಟ ಚಟಗಳಿಗೆ ದಾಸನಾಗಿದ್ದರಿಂದ ಮೂರು ವರ್ಷದ ಮಗನನ್ನು ಪೋಷಕರ ಬಳಿ ಬಿಟ್ಟು ಕತಾರ್‌ ಗೆ ಹೋಗಿ ಜೀವನ ಸಾಗಿಸುತ್ತಿದ್ದಳು. ಅಲ್ಲಿನ ಮನೆಯೊಂದರಲ್ಲಿ ಹೌಸ್‌ ಕೀಪಿಂಗ್‌ ಕೆಲಸಕ್ಕೆ ಸೇರಿದ್ದಳು. ಅಲ್ಲಿಯೇ ಅವಳು ಟಿಕ್‌ಟಾಕ್‌ನಲ್ಲಿ ವೀಡಿಯೊಗಳನ್ನು ಮಾಡುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಫೇಮಸ್‌ ಆಗಿದ್ದಳು. ನಂತರ ಭಾರತಕ್ಕೆ ಹಿಂತಿರುಗಿ ಪತಿಗೆ ವಿಚ್ಛೇದನ ನೀಡಿದ್ದಳು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.