Kiccha Sudeep : ಕಿಚ್ಚನ ʼಮೈ ಆಟೋಗ್ರಾಫ್‌ʼ ಸವಿನೆನಪಿಗೆ 17 ವರ್ಷ

"ಮೈ ಆಟೋಗ್ರಾಫ್‌" ಕಿಚ್ಚ ಸುದೀಪ್‌ ಅಭಿನಯಿಸಿ ನಿರ್ದೇಶಿಸಿದ ಸಿನಿಮಾ. ಕಿಚ್ಚನ ಸಿನಿ ಕೆರೆಯರ್‌ ಅಲ್ಲಿ ಹೊಸ ಮೈಲುಗಲ್ಲು ನೀಡಿದ ಸಿನಿಮಾ. ಸವಿ ನೆನಪಿನೊಂದಿಗೆ ಎಲ್ಲರ ಕಂಣ್ಣಂಚಲ್ಲಿ ಅಚ್ಚಳಿಯದೆ ಇಂದಿಗೂ ಕನ್ನಡಿಗರ ಮನದಾಳದಲ್ಲಿದೆ. ಇದೀಗ ಮೈ ಆಟೋಗ್ರಾಫ್‌ ಸಿನಿಮಾ ತೆರೆಕಂಡು 17 ವರ್ಷ ಪೂರೈಸಿದೆ. ಈ ಸಿನಿಮಾವನ್ನ ಕಿಚ್ಚನ ಕನಸಿನ ಕೂಸು ಅಂತಾನೆ ಹೇಳಬಹುದು, ಕಿಚ್ಚ ನಟನೆಯಲ್ಲಷ್ಟೇ ಅಲ್ಲದೆ ನಿರ್ದೇಶನದಲ್ಲೂ ಸೈ ಎನಿಸಿಕೊಂಡ ಸಿನಿಮಾ ಇದು. ಪ್ರತಿ ಯೊಬ್ಬರು ತಮ್ಮ ಜೀವನದ ನೆನಪುಗಳನ್ನ ಮೆಲುಕು ಹಾಕುವಾಗ ಒಂದು ಕ್ಷಣ "ಮೈ ಆಟೋಗ್ರಾಫ್‌" ನೆನಪಾಗದೆ ಇರದು ಅಷ್ಟರ ಮಟ್ಟಿಗೆ ಪ್ರೇಕ್ಷಕರ ಮನದಲ್ಲಿ ಮನೆಮಾಡಿದೆ "ಮೈ ಆಟೋಗ್ರಾಫ್‌".

Written by - K Karthik Rao | Edited by - Krishna N K | Last Updated : Feb 17, 2023, 06:35 PM IST
  • "ಮೈ ಆಟೋಗ್ರಾಫ್‌" ಕಿಚ್ಚ ಸುದೀಪ್‌ ಅಭಿನಯಿಸಿ ನಿರ್ದೇಶಿಸಿದ ಸಿನಿಮಾ.
  • ಕಿಚ್ಚನ ಸಿನಿ ಕೆರೆಯರ್‌ ಅಲ್ಲಿ ಹೊಸ ಮೈಲುಗಲ್ಲು ನೀಡಿದ ಸಿನಿಮಾ.
  • ಇದೀಗ ಮೈ ಆಟೋಗ್ರಾಫ್‌ ಸಿನಿಮಾ ತೆರೆಕಂಡು 17 ವರ್ಷ ಪೂರೈಸಿದೆ.
Kiccha Sudeep : ಕಿಚ್ಚನ ʼಮೈ ಆಟೋಗ್ರಾಫ್‌ʼ ಸವಿನೆನಪಿಗೆ 17 ವರ್ಷ title=

Kiccha Sudeep : "ಮೈ ಆಟೋಗ್ರಾಫ್‌" ಕಿಚ್ಚ ಸುದೀಪ್‌ ಅಭಿನಯಿಸಿ ನಿರ್ದೇಶಿಸಿದ ಸಿನಿಮಾ. ಕಿಚ್ಚನ ಸಿನಿ ಕೆರೆಯರ್‌ ಅಲ್ಲಿ ಹೊಸ ಮೈಲುಗಲ್ಲು ನೀಡಿದ ಸಿನಿಮಾ. ಸವಿ ನೆನಪಿನೊಂದಿಗೆ ಎಲ್ಲರ ಕಂಣ್ಣಂಚಲ್ಲಿ ಅಚ್ಚಳಿಯದೆ ಇಂದಿಗೂ ಕನ್ನಡಿಗರ ಮನದಾಳದಲ್ಲಿದೆ. ಇದೀಗ ಮೈ ಆಟೋಗ್ರಾಫ್‌ ಸಿನಿಮಾ ತೆರೆಕಂಡು 17 ವರ್ಷ ಪೂರೈಸಿದೆ. ಈ ಸಿನಿಮಾವನ್ನ ಕಿಚ್ಚನ ಕನಸಿನ ಕೂಸು ಅಂತಾನೆ ಹೇಳಬಹುದು, ಕಿಚ್ಚ ನಟನೆಯಲ್ಲಷ್ಟೇ ಅಲ್ಲದೆ ನಿರ್ದೇಶನದಲ್ಲೂ ಸೈ ಎನಿಸಿಕೊಂಡ ಸಿನಿಮಾ ಇದು. ಪ್ರತಿ ಯೊಬ್ಬರು ತಮ್ಮ ಜೀವನದ ನೆನಪುಗಳನ್ನ ಮೆಲುಕು ಹಾಕುವಾಗ ಒಂದು ಕ್ಷಣ "ಮೈ ಆಟೋಗ್ರಾಫ್‌" ನೆನಪಾಗದೆ ಇರದು ಅಷ್ಟರ ಮಟ್ಟಿಗೆ ಪ್ರೇಕ್ಷಕರ ಮನದಲ್ಲಿ ಮನೆಮಾಡಿದೆ "ಮೈ ಆಟೋಗ್ರಾಫ್‌".

ಕಿಚ್ಚ ಸುದೀಪ್‌ ತಮ್ಮ "ಮೈ ಆಟೋಗ್ರಾಫ್‌" ಸಿನಿಮಾ 17 ವರ್ಷ ಪೂರೈಸಿದ ಸಂತಸವನ್ನ ತಮ್ಮ ಟ್ವೀಟ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಉತ್ತಮ ಅನುಭವದೊಂದಿಗೆ ನಿರ್ದೇಶಿಸಿದ ಸಿನಿಮಾಗೆ ಇದೀಗ 17 ವರ್ಷ, ಸಿನಿಮಾದ ನಟರು, ತಂತ್ರಜ್ಞರು, ಪ್ರೊಡಕ್ಷನ್‌ ತಂಡ ಹಾಗೂ ನನ್ನನ್ನು ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಎಂದು ತಮ್ಮ ಮನದಾಳದ ಮಾತನ್ನ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Swara Bhaska̧r :ಸ್ವರಾ ಭಾಸ್ಕರ್ ವಿವಾಹಕ್ಕೆ ಶುಭ ಕೋರಿದ ಕಂಗನಾ ರನೌತ್

ನಟಿ ಮೀನಾ, ಶ್ರೀ ದೇವಿಕ, ಶ್ರೀನಿವಾಸ ಮೂರ್ತಿ, ದೀಪಾ ಭಾಸ್ಕರ್‌, ಯಥಿರಾಜ್‌, ವಿಶ್ವನಾಥ್‌, ಹರಿಶ್‌, ಲಕ್ಷ್ಮಿ ಕುಲಕರ್ಣಿ, ಲಕ್ಷ್ಮಿ ನಾರಾಯಣ್‌ ಹೀಗೆ ಹಲವು ತಾರಾ ಬಣದ ಪ್ರತೀ ಪಾತ್ರವು ಎಲ್ಲರ ಕಣ್ಣಂಚಲ್ಲಿ ಕಣ್ಣೀರನ್ನ ತರಿಸುತ್ತೆ. ಇಂದಿಗೂ ಈ ಸಿನಿಮಾ ವೀಕ್ಷಿಸುವಾಗ ಅದೇನೋ ಖುಷಿ, ಮನದಲ್ಲಿ ಮಧುರ ಭಾವನೆ ಮೂಡಿಬರುತ್ತೆ ನೋಡ ನೋಡುತ್ತಿದ್ದಂತೆ ಕಣ್ಣಲ್ಲಿ ಕಣ್ಣೀರಿನ ಜೊತೆ ಸವೆಯದ ನೆನಪನ್ನ ಮೆಲುಕು ಹಾಕುತ್ತೇವೆ. ಇದೇ ಕಾರಣಕ್ಕೆ ಇಂದಿಗೂ ಕೂಡ "ಮೈ ಆಟೋಗ್ರಾಫ್‌" ಎವರ್‌ ಗ್ರೀನ್‌ ಸಿನಿಮಾವಾಗಿ ಉಳಿದಿದೆ. 

ಸಿನಿಮಾದ ಕಥೆ ಒಂದುರೀತೆ ಗಮನ ಸೆಳೆದರೆ, ಇದರ ಹಾಡುಗಳು ಎಲ್ಲರ ಮನಗೆದ್ದಿದೆ. ಇಂದಿಗೂ ಸವಿ ಸವಿ ನೆನಪು ಹಾಡು ಕೇಳುತ್ತಾ ಕೂತರೆ ಬದುಕಿನ ಹಳೆ ನೆನಪುಗಳೆಲ್ಲ ಒಂದುಕ್ಷಣ ಕಣ್ಣಮುಂದೆ ಬಂದು ಹೋಗುತ್ತೆ. ಅರಳುವ ಹೂವುಗಳೇ ಹಾಡಂತೂ ಅದೇಷ್ಟೋ ಜನರಿಗೆ ಸ್ಪೂರ್ತಿಯಾಗಿದೆ. ಇಂತಹ ಸಿನಿಮಾಗೀಗ 17 ವರ್ಷ ಪೂರೈಸಿದ ಸಡಗರ ಒಂದು ಕಡೆಯಾದ್ರೆ ಇದೇ ರೀತಿಯ ಮತ್ತೊಂದು ಸಿನಿಮಾ ಹೊತ್ತು ಕಿಚ್ಚ ಬರಲಿ ಎಂದು ಕೆಲ ಅಭಿಮಾನಿಗಳು ಕಾಯುತ್ತಿರುವುದಂತೂ ಸುಳ್ಳಳ್ಳ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News