ಚುನಾವಣೆ ಬೆನ್ನಲ್ಲೆ ʼಟಿಪ್ಪುʼ ಸಿನಿಮಾ, ಮತ್ತೆ ಶುರುವಾಗುತ್ತಾ ಉರಿ ನಂಜು ವಾರ್?
Tippu Film : ಕೆಲವು ದಿನಗಳ ಹಿಂದೆ ಬಿಜೆಪಿ ಮುಖಂಡ ಹಾಗೂ ನಿರ್ಮಾಪಕ ಮುನಿರತ್ನ ಅವರು ಉರಿಗೌಡ ನಂಜೇಗೌಡ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದರು. ಅವರು ಸಿನಿಮಾ ಬಗ್ಗೆ ಮಾತನಾಡಿದಾಗಿಂದಲೂ ಅದು ಸಾಕಷ್ಟು ವಿವಾದಗಳಿಗೆ ಎಡೆಮಾಡಿಕೊಟ್ಟಿತ್ತು. ಇದೀಗ ಮತ್ತೊಂದು ಸಿನಿಮಾ ಹೆಸರು ಸಾಕಷ್ಟು ಸದ್ದು ಮಾಡುತ್ತಿದೆ.
Tippu Sultan : ಈ ಉರಿಗೌಡ ನಂಜೇಗೌಡ ಸಿನಿಮಾ ಮಾಡುವುದಾಗಿ ಮುನಿರತ್ನ ಘೋಷಿಸಿದಾಗ ಮಾಜಿ ಸಿಎಂ ಹೆಚ್‌ಡಿ ಕುಮಾರ್ ಸ್ವಾಮಿ ಅವರು ಸರಣಿ ಟ್ವೀಟ್‌ಗಳ ಮೂಲಕ ಅದನ್ನು ವಿರೋಧಿಸಿದ್ದರು. ಬಿಜೆಪಿ ಮುಖಂಡನ ವಿರುದ್ಧ ಕಿಡಿ ಕಾರಿದ್ದರು. ತದನಂತರ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಈ ಸಿನಿಮಾ ಮಾಡದಂತೆ ಸಲಹೆ ನೀಡಿದ್ದರು ಆದ್ದರಿಂದ ಆ ಸಿನಿಮಾ ಮಾಡುವ ವಿಚಾರವನ್ನು ಕೈ ಬಿಟ್ಟರು.
ಈ ಉರಿಗೌಡ ನಂಜೇಗೌಡ ವಾರ್‌ಗೆ ಬ್ರೇಕ್ ಹಾಕಿರುವ ಬೆನ್ನಲ್ಲೆ ʼಟಿಪ್ಪುʼ ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ. ಈ ಸಿನಿಮಾಗೆ ಬಾಲಿವುಡ್ ನಿರ್ಮಾಪಕರು ಮುಂದಾಳತ್ವವನ್ನು ವಹಿಸಿದ್ದು, ಸಿನಿಮಾವನ್ನು ಡೈರೆಕ್ಟ್ ಟಿಪ್ಪು ಹೆಸರಿನಿಂದಲೇ ಶುರು ಮಾಡಿದ್ದಾರೆ. ಇದೀಗ ಈ ಟಿಪ್ಪು ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ಚುನಾವಣೆ ಬೆನ್ನಲ್ಲೆ ಈ ಸಿನಿಮಾದ ಪೋಸ್ಟರ್ ಬಿಡಯಗಡೆಯಾಗಿದ್ದು ಸಾಕಷ್ಟು ಗೊಂದಲಗಳನ್ನು ಸೃಷ್ಟಿಸುತ್ತಿದೆ.
ʼಇಲಿಯಾನʼದಿಂದ ಹಿಡಿದು ಮದುವೆಯಾಗದೇ ತಾಯಂದಿರಾದ ಸ್ಟಾರ್ ನಟಿಯರು ಇವರು..!
ಕರುನಾಡ ಕುರುಕ್ಷೇತ್ರಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಕದನ ಕಲಿಗಳು ಭರ್ಜರಿ ಸಿದ್ದತೆಯಲ್ಲಿದ್ದಾರೆ. ಇದರ ಮದ್ಯವೇ ಈ ಹಿಂದೆ ಸಾಕಷ್ಟು ವಿವಾದಗಳಿಗೆ ಎಡೆಮಾಡಿಕೊಟ್ಟಿದ್ದ ಟಿಪ್ಪು ಸುಲ್ತಾನ್ ಹೆಸರು ಮತ್ತೆ ಹರಿದಾಡುತ್ತಿದೆ. ಇದಲ್ಲದೇ ಚಿತ್ರದ ಮೋಷನ್ ಪೋಸ್ಟರ್‌ನ್ನು ಸಹ ನಿರ್ಮಾಪಕ ರಿಲೀಸ್ ಮಾಡಿದ್ದಾರೆ.
ಈ ಸಿನಿಮಾ ಟಿಪ್ಪು ಸುಲ್ತಾನ್ ಅವರ ಇನ್ನೊಂದು ಮುಖವನ್ನು ತೋರಿಸಲು ಸಜ್ಜಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದ್ದು, ರಾಜ್ಯದಲ್ಲಿ ಬಿಜೆಪಿ ಟಿಪ್ಪು ಸುಲ್ತಾನ್ ಜೀವನವನ್ನು ವಿರೋಧಿಸಿಕೊಂಡು ಬಂದಿದೆ. ಜೊತೆಗೆ ಅನೇಕ ಬಿಜೆಪಿ ಹೇಳಿಕೆಗಳು ವಿವಾದಕ್ಕೂ ಕಾರಣವಾಗಿದ್ದವು. ಇದೆಲ್ಲದರ ಮದ್ಯವೇ ಬಾಲಿವುಡ್ ನಿರ್ಮಾಪಕ ತಮ್ಮ ಸಿನಿಮಾದ ಪೋಸ್ಟರ್‌ನ್ನು ರಿಲೀಸ್ ಮಾಡಿದ್ದಾರೆ.
ಇದನ್ನೂ ಓದಿ-Mrunal Thakur : ಅಯ್ಯೋ ದೇವಾ..! ಇವಳಾ ನಮ್ಮ ʼಸೀತಾ ಮಹಾಲಕ್ಷ್ಮಿʼ.. ಏನ್ ಇದು ಅವತಾರ..?
ಬಿಡುಗಡೆಗೊಂಡಿರುವ ʼಟಿಪ್ಪುʼ ಸಿನಿಮಾದ ಪೋಸ್ಟರ್ ವಿವಾದಗಳನ್ನು ಸೃಷ್ಟಿಸುವಂತಿದೆ. ಹೌದು ಮೋಷನ್ ಪೋಸ್ಟರ್‌ನಲ್ಲಿ ʼಮತಾಂಧ ಸುಲ್ತಾನನ ಕಥೆʼ ಎಂದು ಬರೆಯಲಾಗಿದೆ. ಅಲ್ಲದೇ 8 ಸಾವಿರ ದೇವಸ್ಥಾನಗಳು, 27 ಚರ್ಚ್ ನಾಶ, 4 ಮಿಲಿಯನ್ ಹಿಂದೂಗಳ ಮತಾಂತರ, ಗೋಮಾಂಸ ತಿನ್ನುವಂತೆ ಒತ್ತಾಯ, 1 ಲಕ್ಷ ಹಿಂದೂಗಳಿಗೆ ಜೈಲು ವಾಸ, ಎಂದು ಹಲವಾರು ಆರೋಪಗಳನ್ನು ಮಾಡಲಾಗಿದೆ. ಈ ಸಿನಿಮಾ ಕನ್ನಡ, ತಮಿಳು, ತೆಲುಗು, ಹಿಂದಿ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.