Toby Review: ಟೋಬಿ... ನಿಜಕ್ಕೂ ಇದು ಸಿನಿಮಾನಾ..? ನೋ...ನೋ.. ಇದು ದೊಡ್ಡ ಮ್ಯಾಜಿಕ್.. ಏನ್ರೀ ಒಂದು ಸಿನಿಮಾನ ಹೀಗೂ ಕಟ್ಟಿಕೊಡಬಹುದು ಅನ್ನೋದನ್ನ ಮತ್ತೊಮ್ಮೆ ರಾಜ್ ಬಿ ಶೆಟ್ಟಿ ತಮ್ಮ ಕನಸಿನ ಕೂಸು 'ಟೋಬಿ' ಮೂಲಕ  ಪ್ರೊವ್ ಮಾಡಿದ್ದಾರೆ. ಪ್ರತಿಯೊಬ್ಬ ಆರ್ಟಿಸ್ಟ್ ಕೂಡ ಇಲ್ಲಿ ರಾಕ್ಷಸರಂತೆ ನಟಿಸಿದ್ದಾರೆ.


COMMERCIAL BREAK
SCROLL TO CONTINUE READING

ಟೋಬಿ ಒಬ್ಬ ಅಪ್ಪಟ ಮನುಷ್ಯ. ಅಕ್ಕಪಕ್ಕದಲ್ಲಿ ಇದ್ದಿರಬಹುದಾದ ಸಾಮಾನ್ಯ ಮನುಷ್ಯ. ಅದಕ್ಕೆ ಅವನು ತುಂಬಾ ಹತ್ತಿರ ಆಗುತ್ತಾನೆ. ಸಮಾಜ ಅವನನ್ನು ಹೇಗೆ ನಡೆಸಿಕೊಳ್ಳುತ್ತದೆ, ಆಮೇಲೆ ಅವನು ಏನಾಗುತ್ತಾನೆ ಅನ್ನುವುದೇ ಈ ಸಿನಿಮಾ.


ಇದನ್ನೂ ಓದಿ- ವರಮಹಾಲಕ್ಷ್ಮಿ ಹಬ್ಬದ ಶುಭ ಕೋರಿ, ಮಾಧ್ಯಮದವರ ಕ್ಷಮೆ ಕೇಳಿದ DBoss..! 


ನಟಿ ಚೈತ್ರಾ ಆಚಾರ್ ಮಾತ್ರ ಈ ಸಿನಿಮಾಗೆ ಕೇಂದ್ರಬಿಂದು ಅಂದ್ರೆ ತಪ್ಪಿಲ್ಲ.. ಬಾಲ್ಯದಿಂದಲೇ ಯಾರಿಗೂ ಬೇಡವಾದ ಹುಡುಗ ಹೇಗೆ ಟೋಬಿಯಾಗ್ತಾನೆ. ಟೋಬಿ ಅನ್ನೋ ನಾಮಕರಣ ಯಾರು, ಹೇಗೆ ಮಾಡ್ತಾರೆ ಅನ್ನೋದನ್ನ ನೀವು ತೆರೆ ಮೇಲೆ ನೋಡಿದ್ರೆನೇ ಚಂದ.. 


ಅಮಾಯಕ ಟೋಬಿ ನೆತ್ತರ ಪ್ರಪಂಚಕ್ಕೆ ಹೇಗೆ ಮತ್ತು ಯಾಕೆ ಎಂಟ್ರಿ ಆಗ್ತಾನೆ..? ಎಲ್ಲೋ ಸಿಗೋ ಪುಟ್ಟ ಮಗುವನ್ನ ಸಾಕಿ, ದೊಡ್ಡವಳನ್ನಾಗಿ ಮಾಡಿ ಆಕೆಗಾಗಿ ಒಂದು ಮನೆ ಕಟ್ಟಲು  ಒದ್ದಾಡುತ್ತಿರೋ ಸನ್ನಿವೇಶದಲ್ಲಿ ಆಮಿಷಕ್ಕೆ ಬಲಿಯಾಗೋ ಟೋಬಿ    ಗೆ ಅದೊಂದು ಶಾಪವೇ ಆಗೋಯ್ತು ಅನ್ನಬಹುದು. ಆ ಜಾಗದಲ್ಲಿ ಏನೇ ಕ್ರೈಂ ಆದರೂ ಅದಕ್ಕೆ ಟೋಬಿಯೇ ಕಾರಣ ಅನ್ನೋ ರೀತಿ ಬಿಂಬಿಸದಲಾಯಿತು. ಟೋಬಿ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಯಾಕೆ ಮೂಗಿಗೆ ದೊಡ್ಡ ರಿಂಗ್ ಹಾಕುತ್ತಾರೆ, ಅದರ ಹಿಂದಿನ ರಹಸ್ಯ ಏನು ಅನ್ನೋದನ್ನ ಬಿಗ್ ಸ್ಕ್ರೀನ್ ಮೇಲೆ ನೋಡಿ ಥ್ರಿಲ್ ಆಗಿ. ಈ ಸಿನಿಮಾ ನೋಡಿದ್ರೆ ನೀವು, ನಗ್ತೀರಾ, ಅಳ್ತಿರಾ, ಹ್ಯಾಂಗ್ ಓವರ್ ನಿಂದ ಹೊರ ಹೋಗ್ತೀರಾ..


ಇದನ್ನೂ ಓದಿ- ಈ ಬಾರಿ ಬಾಲಿವುಡ್ ಗೆ ಪಾದಾರ್ಪಣೆ ಮಾಡುತ್ತಿರುವ ಸ್ಟಾರ್ ಕಿಡ್ಸ್ ಇವರು !


ಲೈಟರ್ ಬುದ್ಧ ಫಿಲಂಸ್, ಅಗಸ್ತ್ಯ ಫಿಲಂಸ್ ಹಾಗೂ ಕಾಫಿ ಗ್ಯಾಂಗ್ ಸ್ಟುಡಿಯೋಸ್ ಮತ್ತು ಸ್ಮೂತ್ ಸೈಲರ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ರವಿ ರೈ ಕಳಸ ಈ ಚಿತ್ರದ ನಿರ್ಮಾಪಕರು. ಶಾಮಿಲ್ ಬಂಗೇರ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.