ಕೆಜಿಎಫ್ 3ಗೆ ತಮಿಳು ನಟ ಅಜಿತ್ ಹೀರೋ..!? ಕನ್ನಡಿಗ ಯಶ್ ಗತಿ..? ಈ ಸುದ್ದಿ ನಿಜವೇ..?
Ajith Kumar in KGF 3 : ನಟ ಅಜಿತ್ಕುಮಾರ್ ಅವರು ಸಧ್ಯ ವಿಡಾ ಮುಯರ್ಚಿ ಸಿನಿಮಾದ ಚಿತ್ರೀಕರಣದ ಮೂಲಕ ಸುದ್ದಿಯಲ್ಲಿದ್ದಾರೆ.. ಇದರ ನಡುವೆ ಹೊಸ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ನಟ ಅಜಿತ್ ಕುಮಾರ್ ನಟಿಸಲಿದ್ದಾರೆ ಮತ್ತು ಅಜಿತ್ ಕೆಜಿಎಫ್ ಟೀಂಗೆ ಸೇರಲಿದ್ದಾರೆ ಎಂದು ಸಾಕಷ್ಟು ಸುದ್ದಿಗಳಿವೆ.
KFG 3 Latest updates : ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸೂಪರ್ ಹಿಟ್ ಆಗಿದ್ದ ಕೆಜಿಎಫ್ ಸಿನಿಮಾದಲ್ಲಿ ಅಜಿತ್ ನಟಿಸಲಿದ್ದಾರೆ ಎಂಬ ಸುದ್ದಿ ಸಿನಿಮಾ ವಲಯದಲ್ಲಿ ಬಿರುಸಿನಿಂದ ಹರಿದಾಡುತ್ತಿದೆ. ದಕ್ಷಿಣ ಭಾರತದ ಅತಿ ದೊಡ್ಡ ಹಿಟ್ ಚಿತ್ರಗಳಲ್ಲಿ ಕೆಜಿಎಫ್ ಕೂಡ ಒಂದು.
2018 ರಲ್ಲಿ, ಕೆಜಿಎಫ್-ಅಧ್ಯಾಯ 1 ಚಿತ್ರದ ಮೊದಲ ಭಾಗ ಬಿಡುಗಡೆಯಾಯಿತು. ಇದರಲ್ಲಿ ಯಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸ್ಮಗ್ಲಿಂಗ್ ಕಿಂಗ್‌ಪಿನ್ ರಾಖಿಯ ಶಕ್ತಿ ಮತ್ತು ಅವನ ಜೀವನಶೈಲಿಯನ್ನು ವಿವರಿಸುವ ಕಥೆಯನ್ನು ಫಸ್ಟ್ ಪಾರ್ಟ್ ಹೊಂದಿತ್ತು. ಈ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. ನಂತರ, ಚಿತ್ರದ ಎರಡನೇ ಭಾಗ ಕೆಜಿಎಫ್ 2022 ರಲ್ಲಿ ಬಿಡುಗಡೆಯಾಯಿತು, ಇದರಲ್ಲಿ ರಾಖಿ ಸಾಮ್ರಾಜ್ಯದ ಪತನವನ್ನು ತೋರಿಸಲಾಗಿತ್ತು..
ಇದನ್ನೂ ಓದಿ:ಈ ಬಿಗ್ ಬಾಸ್ ಬೆಡಗಿ ಯಾರು ಅಂತ ಗೊತ್ತಾಯ್ತಾ..? ನಿಮ್ಮ ಫೇವರಿಟ್ ಇರಬಹುದು.. ಗೆಸ್ ಮಾಡಿ..
ಸಧ್ಯ ನಟ ಅಜಿತ್ ವಿಡಾ ಮುಯರ್ಜಿ ಚಿತ್ರಕ್ಕೆ ಕಮಿಟ್ ಆಗಿದ್ದಾರೆ. ಬನಿಯಾರ ಥಕ, ಮೀಕಮನ್, ಥಡಂ, ಕಲಕಟ್ ತಲೈವನ್ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದ ಮೀಜಿತಿರುಮೇನಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಲೈಕಾ ನಿರ್ಮಿಸಿದೆ. ಅನಿರುದ್ಧ್ ಸಂಗೀತ ಸಂಯೋಜಿಸಿರುವ ಈ ಚಿತ್ರದಲ್ಲಿ ತ್ರಿಷಾ, ಅರ್ಜುನ್, ರೆಜಿನಾ, ಆರವ್ ಮುಂತಾದವರು ನಟಿಸಿದ್ದಾರೆ. ಈ ಚಿತ್ರವು ತಮಿಳು, ಮಲಯಾಳಂ, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಪ್ಯಾನ್-ಇಂಡಿಯನ್ ಚಿತ್ರವಾಗಿ ಬಿಡುಗಡೆಯಾಗಲಿದೆ.
ಇದರ ಬೆನ್ನಲ್ಲೇ ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ನಟ ಅಜಿತ್ ಕುಮಾರ್ ನಟಿಸಲಿದ್ದು, ಕೆಜಿಎಫ್ ಯೂನಿವರ್ಸ್ ಗೆ ಅಜಿತ್ ಸೇರಲಿದ್ದಾರೆ ಎಂಬ ಸುದ್ದಿ ಸೌತ್ ಸಿನಿವಲಯದಲ್ಲಿ ಜೋರಾಗಿ ಕೇಳಿ ಬರುತ್ತಿದೆ.. ಅಲ್ಲದೆ, ನೀಲ್ ಅಜಿತ್ ಮಾತುಕತೆ ನಡೆಯುತ್ತಿದೆ ಎಂಬ ಸುದ್ದಿ ಇದ್ದು, ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ ಎಂಬುದು ಗಮನಾರ್ಹ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.