ಆಸ್ತಿ ಒತ್ತೆಯಿಟ್ಟು 21 ಕೋಟಿ ಸಾಲ ಪಡೆದ ಪ್ರಭಾಸ್: ಸ್ಟಾರ್ ನಟನಿಗೇಕೆ ಈ ಸ್ಥಿತಿ..?
ಬಾಹುಬಲಿ ಚಿತ್ರದ ಮೂಲಕ ಫ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಖ್ಯಾತಿ ಪಡೆದಿರುವ ಡಾರ್ಲಿಂಗ್ ಪ್ರಭಾಸ್ ಕುರಿತ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಒಂದು ಸಿನಿಮಾಗೆ ಕೋಟ್ಯಾಂತರ ರೂ. ಸಂಭಾವನೆ ಪಡೆಯುವ ನಟ ಕೇವಲ 21 ಕೋಟಿ ರೂ. ಸಾಲ ಮಾಡಲು ಆಸ್ತಿ ಒತ್ತೆಯಿಟ್ಟಿರುವುದಾಗಿ ಸುದ್ದಿಯಾಗುತ್ತಿದೆ. ಈ ವಿಚಾರ ಭಾರತೀಯ ಸಿನಿರಂಗದಲ್ಲಿ ಸಂಚಲನ ಮೂಡಿಸಿದೆ.
Prabhas : ಬಾಹುಬಲಿ ಚಿತ್ರದ ಮೂಲಕ ಫ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಖ್ಯಾತಿ ಪಡೆದಿರುವ ಡಾರ್ಲಿಂಗ್ ಪ್ರಭಾಸ್ ಕುರಿತ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಒಂದು ಸಿನಿಮಾಗೆ ಕೋಟ್ಯಾಂತರ ರೂ. ಸಂಭಾವನೆ ಪಡೆಯುವ ನಟ ಕೇವಲ 21 ಕೋಟಿ ರೂ. ಸಾಲ ಮಾಡಲು ಆಸ್ತಿ ಒತ್ತೆಯಿಟ್ಟಿರುವುದಾಗಿ ಸುದ್ದಿಯಾಗುತ್ತಿದೆ. ಈ ವಿಚಾರ ಭಾರತೀಯ ಸಿನಿರಂಗದಲ್ಲಿ ಸಂಚಲನ ಮೂಡಿಸಿದೆ.
ಪ್ರಭಾಸ್‌ಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಭಿಮಾನಿಗಳ ಬಳಗ ಇದೆ. ಬಾಹುಬಲಿ ಮೂಲಕ ಅವರು ತೆಲುಗು ಚಿತ್ರರಂಗದ ಅಭಿಮಾನಿಗಳಲ್ಲದೆ ದೇಶದಾತ್ಯಂತ ಅಪಾರ ಫ್ಯಾನ್ಸ್‌ಗಳನ್ನು ಗಳಿಸಿದರು. ಇದಾದ ನಂತರ ಅವರಿಗೆ ಹಲವಾರು ಸಿನಿಮಾ ಅವಕಾಶಗಳು ಬಂದಿವು. ಅವರು ಪ್ರತಿ ಚಿತ್ರಕ್ಕೆ ರೂ.150 ಕೋಟಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಾರೆ. ಅಲ್ಲದೆ, ಅವರ ನಿವ್ವಳ ಮೌಲ್ಯವು ಈ ವರ್ಷಕ್ಕೆ ಸುಮಾರು $27 ಮಿಲಿಯನ್ ಆಗಿದೆ ಎನ್ನಲಾಗಿದೆ. ಈ ವೇಳೆ ನಟ ಪ್ರಭಾಸ್ ತಮ್ಮ ಆಸ್ತಿಯನ್ನು ಒತ್ತೆ ಇಟ್ಟು ಬ್ಯಾಂಕ್ ನಿಂದ 21 ಕೋಟಿ ರೂಪಾಯಿ ಸಾಲ ಪಡೆದಿರುವುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: Mahesh Babu : ತಂದೆ-ತಾಯಿಯ ಸಾವಿಗೆ ʼಮಹೇಶ್ ಬಾಬುʼ ಜಾತಕ ದೋಷ ಕಾರಣ..!
ಗೋಪಿಕೃಷ್ಣ ಮೂವೀಸ್ ಬ್ಯಾನರ್‌ನಲ್ಲಿ ಬಿಡುಗಡೆಯಾದ ಪ್ರಭಾಸ್ ಅಭಿನಯದ 'ರಾಧೆ ಶ್ಯಾಮ್' ಸಿನಿಮಾ ಫ್ಲಾಪ್ ಆಗಿತ್ತು. ಅದೇ ರೀತಿ ಫ್ರೆಂಡ್ಸ್ ಬ್ಯಾನರ್‌ನಲ್ಲಿ ಬಿಡುಗಡೆಯಾದ 'ಸಾಹೋ' ಕೂಡ ಸೋಲು ಅನುಭವಿಸಿತ್ತು. ಬಾಹುಬಲಿ ಚಿತ್ರದ ಮೂಲಕ ಯಶಸ್ವಿ ನಾಯಕನಾಗಿ ಮಿಂಚಿದ್ದ ಅವರಿಗೆ ಈ ಎರಡು ಚಿತ್ರಗಳು ಅವರ ಸಿನಿ ಜರ್ನಿಯಲ್ಲಿನ ಕಪ್ಪು ಚುಕ್ಕಿಗಳಾದವು. ಎರಡೂ ಚಿತ್ರಗಳು ಫ್ಲಾಪ್ ಆಗಿದ್ದರಿಂದ ನಟ ಪ್ರಭಾಸ್ ತಮ್ಮ ಸಂಭಾವನೆಯ ಬಹುಪಾಲು ಹಣವನ್ನು ಹಿಂದಿರುಗಿಸಿದ್ದಾರೆ ಎನ್ನಲಾಗಿದೆ.
ಕಳೆದ ಬುಧವಾರ ಪ್ರಭಾಸ್ ಬ್ಯಾಂಕ್ ನಿಂದ 21 ಕೋಟಿ ಸಾಲದ ಚೆಕ್ ಪಡೆದಿದ್ದಾರೆ ಎನ್ನಲಾದ ಸುದ್ದಿಯೇ ಈಗ ಚರ್ಚೆಗೆ ಗ್ರಾಸವಾಗಿದೆ. ಚಿತ್ರವೊಂದಕ್ಕೆ 100 ಕೋಟಿಗೂ ಹೆಚ್ಚು ಸಂಭಾವನೆ ಪಡೆದ ಪ್ರಭಾಸ್ ಕೇವಲ 21 ಕೋಟಿ ಸಾಲ ಪಡೆಯುತ್ತಿರುವುದು ಯಾಕೆ ಎಂದು ಅವರ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಅದು ಬಿಟ್ಟರೆ ಪ್ರಭಾಸ್ ಮಾಮೂಲಿ ವ್ಯಕ್ತಿಯಲ್ಲ, ತೆಲುಗು ಚಿತ್ರರಂಗದ ಬಹುದೊಡ್ಡ ನಟ, ಪ್ರಭಾಸ್ ಯಾಕೆ ಸಾಲ ಮಾಡಿದ್ರು ಅನ್ನೋ ಪ್ರಶ್ನೆ ತುಂಬಾ ನೆಟ್ಟಿಗರಲ್ಲಿ ಮೂಡಿದೆ. ಪ್ರಭಾಸ್ ಹೊಸ ಉದ್ಯಮದಲ್ಲಿ ಹೂಡಿಕೆ ಮಾಡಲು ಬ್ಯಾಂಕ್‌ನಿಂದ ಸಾಲ ಪಡೆದಿದ್ದಾರೆ ಎಂದೂ ಕೆಲವರು ಹೇಳುತ್ತಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.