ಗಂಡುಮೆಟ್ಟಿದ ನಾಡಿನಲ್ಲಿ ʼಗಜʼ : ಹುಬ್ಬಳ್ಳಿಯಲ್ಲಿಂದು ರಿಲೀಸ್‌ ಆಗಲಿದ್ದಾಳೆ ʼಪುಷ್ಪಾವತಿʼ..!

ನಟ ದರ್ಶನ್‌ ಅಭಿನಯದ ಕ್ರಾಂತಿ ಸಿನಿಮಾದ ಮೂರನೇ ಹಾಡು ಇಂದು ಬಿಡುಗಡೆಯಾಗುತ್ತಿದೆ. ಇತ್ತೀಚಿಗೆ ನಡೆದ ಅವಮಾನದಿಂದ ಕುಗ್ಗದ ದಚ್ಚು ಕಚ್ಚೆದೆಯಿಂದ ಮುಂದೆ ಸಾಗುತ್ತಿದ್ದಾರೆ. ಕ್ರಾಂತಿ ಸಿನಿಮಾದ ಬಹುನಿರೀಕ್ಷಿತ ʼಪುಷ್ಪಾವತಿʼ ಸಾಂಗ್‌ನ್ನು ಇಂದು ಹುಬ್ಬಳ್ಳಿ ನಗರದಲ್ಲಿ ರಿಲೀಸ್‌ ಮಾಡಲಾಗುತ್ತಿದ್ದು, ದಾಸನ ಆಗಮನಕ್ಕೆ ವಾಣಿಜ್ಯ ನಗರಿ ಸಿದ್ಧವಾಗಿದೆ.

Written by - Krishna N K | Last Updated : Dec 25, 2022, 10:50 AM IST
  • ನಟ ದರ್ಶನ್‌ ಅಭಿನಯದ ಕ್ರಾಂತಿ ಸಿನಿಮಾದ ಮೂರನೇ ಹಾಡು ಇಂದು ಬಿಡುಗಡೆಮಾಡಲಾಗುತ್ತಿದೆ.
  • ಬಹುನೀರಿಕ್ಷಿತ ʼಪುಷ್ಪಾವತಿʼ ಸಾಂಗ್‌ನ್ನು ಇಂದು ಹುಬ್ಬಳ್ಳಿ ನಗರದಲ್ಲಿ ರಿಲೀಸ್‌ ಮಾಡಲಾಗುತ್ತಿದೆ.
  • ದಾಸನ ಆಗಮನಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿ ಸಿದ್ಧವಾಗಿದೆ.
ಗಂಡುಮೆಟ್ಟಿದ ನಾಡಿನಲ್ಲಿ ʼಗಜʼ : ಹುಬ್ಬಳ್ಳಿಯಲ್ಲಿಂದು ರಿಲೀಸ್‌ ಆಗಲಿದ್ದಾಳೆ ʼಪುಷ್ಪಾವತಿʼ..! title=

Kranti Pushpavathi song : ನಟ ದರ್ಶನ್‌ ಅಭಿನಯದ ಕ್ರಾಂತಿ ಸಿನಿಮಾದ ಮೂರನೇ ಹಾಡು ಇಂದು ಬಿಡುಗಡೆಯಾಗುತ್ತಿದೆ. ಇತ್ತೀಚಿಗೆ ನಡೆದ ಅವಮಾನದಿಂದ ಕುಗ್ಗದ ದಚ್ಚು ಕಚ್ಚೆದೆಯಿಂದ ಮುಂದೆ ಸಾಗುತ್ತಿದ್ದಾರೆ. ಕ್ರಾಂತಿ ಸಿನಿಮಾದ ಬಹುನಿರೀಕ್ಷಿತ ʼಪುಷ್ಪಾವತಿʼ ಸಾಂಗ್‌ನ್ನು ಇಂದು ಹುಬ್ಬಳ್ಳಿ ನಗರದಲ್ಲಿ ರಿಲೀಸ್‌ ಮಾಡಲಾಗುತ್ತಿದ್ದು, ದಾಸನ ಆಗಮನಕ್ಕೆ ವಾಣಿಜ್ಯ ನಗರಿ ಸಿದ್ಧವಾಗಿದೆ.

ವಿ ಹರಿಕೃಷ್ಣ ಸಂಗೀತ ಅಂದ್ರೆ ಕೇಳ್ಬೇಕೆ, ಅದರ ಗಮ್ಮತ್ತೇ ಬೇರೆ. ಇದೀಗ ʼಧರಣಿ ಮಂಡಲʼ ʼಬೊಂಬೆ ಬೊಂಬೆʼ ಸಾಂಗ್‌ ನಂತರ ʼಪುಷ್ಪಾವತಿʼ ಹಾಡು ಬಿಡುಗಡೆಗೆ ಸಿದ್ಧವಾಗಿದೆ. ಇಂದು ಹುಬ್ಬಳ್ಳಿ ನಗರದ ಗೋಕುಲ ರಸ್ತೆಯಲ್ಲಿರುವ ಅರ್ಬನ್‌ ಒಯಾಸಿಸ್‌ ಮಾಲ್‌ನಲ್ಲಿ ಈ ಹಾಡಿನ ಬಿಡುಗಡೆ ಕಾರ್ಯಕ್ರಮ ಸಂಜೆ 7 ಗಂಟೆಗೆ ನಡೆಯಲಿದೆ. ಮೊನ್ನೆ ನಡೆದ ಘಟನೆಯಿಂದ ಮನನೊಂದಿದ್ದ ದಚ್ಚು ಅಭಿಮಾನಿಗಳಿಗೆ ಈ ಹಾಡು ಬೂಸ್ಟ್‌ ನೀಡಲಿದೆ ಅಂದ್ರೆ ತಪ್ಪಾಗಲ್ಲ.

ಇದನ್ನೂ ಓದಿ: Padavi Poorva Trailer: ‘ಪದವಿಪೂರ್ವ’ ಟ್ರೈಲರ್ ರಿಲೀಸ್ ಮಾಡಿದ ಅಭಿಷೇಕ್ ಅಂಬರೀಶ್

ಈಗಾಗಲೇ ಧರಣಿ ಮಂಡಲ ಹಾಡು ಬಿಡುಗಡೆಯಾಗಿ ಸೂಪರ್‌ ಹಿಟ್‌ ಆಗಿದೆ. ಈ ಹಾಡನ್ನು ಪಂಚಮ್ ಜೀವ, ಸಂತೋಷ್ ವೆಂಕಿ, ಅನಿರುದ್ಧ ಶಾಸ್ತ್ರಿ, ಮದ್ವೇಶ ಭಾರದ್ವಾಜ್, ವಿಹಾನ್‌, ಖುಶಾಲಾ, ಲಕ್ಷ್ಮಿ ವಿಜಯ್, ಮೇಘನಾ ಕುಲಕರ್ಣಿ, ಪೂಜಾ ರಾವ್, ಅರ್ಚನಾ ಮತ್ತು ಪ್ರಾರ್ಥನ ಅವರು ಹಾಡಿದ್ದಾರೆ. ಎರಡನೇ ಹಾಡು ಬೊಂಬೆಯನ್ನು ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು ಹಾಡಿದ್ದಾರೆ. ಇದೋಂದು ರೋಮ್ಯಾಂಟಿಕ್‌ ಹಾಡಾಗಿದೆ. ಬಹುನೀರಿಕ್ಷಿತ ಹಾಡು ಪುಷ್ಪಾವತಿ ಇಂದು ಬಿಡುಗಡೆಯಾಗುತ್ತಿದೆ.

ದರ್ಶನ್‌ ನಟನೆಯ ಪ್ರತಿ ಸಿನಿಮಾಗಳಲ್ಲಿ ಒಂದಾದ್ರೂ ಐಟಮ್‌ ಸಾಂಗ್‌ ಇದ್ರೇನೆ ಆ ಚಿತ್ರಕ್ಕೆ ಒಂದು ಖದರ್‌. ಕುಲುಕ ಬೇಡ ಕುಲುಕ ಬೇಡ ಸಿಲ್ಕು ಹಾಡಿನಿಂದ ಹಿಡಿದು ಬಸಣ್ಣಿ ಬಾ ಹಾಡಿನ ವರೆಗೂ ಎಲ್ಲಾ ಹಾಡುಗಳು ಸೂಪರ್‌ ಹಿಟ್‌ ಆಗಿವೆ. ಬಸಣ್ಣಿ ಹಾಡಂತೂ ಸಖತ್‌ ಟ್ರೆಂಡ್‌ ಆಗಿತ್ತು. ಇದೀಗ ಮತ್ತೆ ವಿ ಹರಿಕೃಷ್ಣ ಪುಷ್ಪಾವತಿ ಮೂಲಕ ಟ್ರೆಂಡ್‌ ಕ್ರಿಯೇಟ್‌ ಮಾಡೋಕೆ ಹೊರಟಿದ್ದಾರೆ. ದರ್ಶನ್‌ ಅಭಿಮಾನಿಗಳು ಸಹ ಕಾತುರತೆಯಿಂದ ಕಾಯುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News