ಮದುವೆಯಾದ ವರ್ಷದ ನಂತರ ಫ್ಯಾನ್ಸ್ಗೆ ಗುಡ್ ನ್ಯೂಸ್ ನೀಡಿದ ನಟಿ..! ತುಂಬಾ ಗ್ಯಾಪ್ ತಗೊಂಡ್ರಿ ಎಂದ ನೆಟ್ಟಿಗರು..
Sathi Leelavathi Movie : ಮೆಗಾ ಕುಟುಂಬದ ಸೊಸೆ ಲಾವಣ್ಯ ತ್ರಿಪಾಠಿ ಮದುವೆಯಾದ ಒಂದು ವರ್ಷದ ನಂತರ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ನಟಿ ‘ಸತಿ ಲೀಲಾವತಿ’ ಹೊಸ ಚಿತ್ರವನ್ನು ಘೋಷಿಸಿದ್ದಾರೆ. ದುರ್ಗಾದೇವಿ ಪಿಕ್ಚರ್ಸ್ ಮತ್ತು ಟ್ರಿಯೋ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಸಿನಿಮಾವನ್ನು ತಾತಿನೇನಿ ಸತ್ಯ ನಿರ್ದೇಶನ ಮಾಡುತ್ತಿದ್ದಾರೆ..
Lavanya Tripathi Upcoming Movies : ಕಳೆದ ಕೆಲವು ದಿನಗಳಿಂದ ಸಿನಿಮಾದಿಂದ ದೂರ ಉಳಿದಿದ್ದ ಮೆಗಾ ಸೊಸೆ ಲಾವಣ್ಯ ತ್ರಿಪಾಠಿ ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ.. ಈ ವರ್ಷದ ಮೊದಲ ವೆಬ್ ಸಿರೀಸ್ ಮಿಸ್ ಪರ್ಫೆಕ್ಟ್ ನಲ್ಲಿ ಕಾಣಿಸಿಕೊಂಡಿದ್ದ ಲಾವಣ್ಯ ತ್ರಿಪಾಠಿ ಈಗ ʼಸತಿ ಲೀಲಾವತಿʼಯಾಗಿ ಬೆಳ್ಳಿ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ.
ಈ ಚಿತ್ರವನ್ನು ನಾಗಮೋಹನ್ ಬಾಬು ಎಂ ಮತ್ತು ರಾಜೇಶ್.ಟಿ ಜಂಟಿಯಾಗಿ ನಿರ್ಮಿಸಿದ್ದಾರೆ. ಲಾವಣ್ಯ ತ್ರಿಪಾಠಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಡಿಸೆಂಬರ್ 15 ರಂದು ಚಿತ್ರದ ಶೀರ್ಷಿಕೆಯನ್ನು ಅಧಿಕೃತವಾಗಿ ಘೋಷಿಸಲಾಯಿತು. ವಿಭಿನ್ನ ಪಾತ್ರಗಳ ಮೂಲಕ ವಿಶಿಷ್ಟವಾದ ಐಡೆಂಟಿಟಿ ಗಳಿಸಿರುವ ಲಾವಣ್ಯ ಈ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ಇದನ್ನೂ ಓದಿ:ಹೆಂಡತಿಗೆ ಡಿವೋರ್ಸ್ ನೀಡಿ 19 ವರ್ಷದ ನಟಿಯನ್ನು ಮದುವೆಯಾಗಲು ಬಯಸಿದ್ದ ರಜಿನಿ..! ಶಾಕಿಂಗ್ ವಿಚಾರ ರಿವೀಲ್
ಸದ್ಯದ ಮಾಹಿತಿ ಪ್ರಕಾರ ಈ ಸಿನಿಮಾದ ಶೂಟಿಂಗ್ ಶೀಘ್ರದಲ್ಲೇ ಆರಂಭವಾಗಲಿದೆ. ಈ ಚಿತ್ರದ ಸಂಗೀತವನ್ನು ಮಿಕ್ಕಿ ಜೇ ಮೇಯರ್ ಸಂಯೋಜಿಸಿದ್ದಾರೆ. ಬಿನೇಂದ್ರ ಮೆನನ್ ಛಾಯಾಗ್ರಹಣವಿದ್ದು, ಉದಯ್ ಪೊಟ್ಟಿಪಾಡು ಸಂಭಾಷಣೆಯನ್ನು ಬರೆದಿದ್ದಾರೆ. ಕೊಸನಂ ವಿಠಲ್ ಕಲಾ ನಿರ್ದೇಶನ ಮತ್ತು ಸತೀಶ್ ಸೂರ್ಯ ಸಂಕಲನವಿದೆ.
ಇತರೆ ಪಾತ್ರವರ್ಗದ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು. ಸದ್ಯದಲ್ಲೇ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ಚಿತ್ರತಂಡ ತಿಳಿಸಿದೆ. ಈ ಸಿನಿಮಾ ಲಾವಣ್ಯ ತ್ರಿಪಾಠಿ ಎಷ್ಟರ ಮಟ್ಟಿಗೆ ಹಿಟ್ ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕು.
ಇದನ್ನೂ ಓದಿ:'ಆತ ನನ್ನ ಸ್ಕರ್ಟ್ ಒಳಗೆ ಕೈ ಹಾಕಿದ' ಎಂದ ಖ್ಯಾತ ಗಾಯಕಿ..! ಅಷ್ಟಕ್ಕೂ ಆ ವ್ಯಕ್ತಿ ಯಾರು ಅಂತೀರಾ?
2021ರಲ್ಲಿ ತೆರೆಕಂಡ ಚೌ ಕಬ್ಬೂರು ಚಾಜ ಸಿನಿಮಾದಿಂದ ಸತತ ಫ್ಲಾಪ್‌ಗಳನ್ನು ಸ್ವೀಕರಿಸುತ್ತಿರುವ ಮೆಗಾ ಸೊಸೆ 2022ರಲ್ಲಿ ಹ್ಯಾಪಿ ಬರ್ತ್‌ಡೇ ಸಿನಿಮಾ ಮೂಲಕ ಪ್ರೇಕ್ಷಕರನ್ನು ಮತ್ತೆ ರಂಜಿಸಲು ಸಾಧ್ಯವಾಗಲಿಲ್ಲ. ಈ ಸಿನಿಮಾದ ಮೂಲಕ ಲಾವಣ್ಯ ಅವರಿಗೆ ಉತ್ತಮ ಕಮ್ ಬ್ಯಾಕ್ ಕೊಡಬೇಕು ಎಂಬ ನಿರೀಕ್ಷೆ ಅಭಿಮಾನಿಗಳದ್ದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.