Tollywood :ಟಾಲಿವುಡ್‌ ಹಾಟ್‌ ಬೆಡಗಿ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.ಇತ್ತೀಚೆಗಷ್ಟೇ ಸಮಂತಾ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ಶಾಕುಂತಲಂ' ತೆರೆಗೆ ಬಂದಿತ್ತು. ಈ ಚಿತ್ರದಲ್ಲಿ ಪೌರಣಿಕ ಪಾತ್ರಧಾರಿ'ಶಾಕುಂತಲೆಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಅಷ್ಟಾಗಿ ಸದ್ದು ಮಾಡದೇ ನೀರೀಕ್ಷಿಸುವಷ್ಟು ಖ್ಯಾತಿ ಗಳಿಸಲಿಲ್ಲ. ಸಿನಿಮಾ ಹಿಟ್‌ ಆಗದಿದ್ದರೂ ಸ್ಯಾಮ್‌ ಸುಮ್ಮನೆ ಕೂರುವ ನಟಿಯಲ್ಲ. ಏನಾದರೂ ಒಂದು ಹೊಸ ವಿಷಯದಲ್ಲಿ ಸುದ್ದಿಯಲ್ಲಿರುತ್ತಾರೆ. 


COMMERCIAL BREAK
SCROLL TO CONTINUE READING

ಇತ್ತೀಚೆಗೆ ‘ಸಿಟಾಡೆಲ್​’ ಎಂಬ ವೆಬ್​ ಸರಣಿಯ ಪ್ರೀಮಿಯರ್​ ಶೋ ಸಲುವಾಗಿ ವರುಣ್​ ಧವನ್ ಹಾಗೂ ಸಮಂತಾ ಲಂಡನ್​ಗೆ ತೆರಳಿದ್ದರು. ಈ ವೆಬ್‌ ಸರಣಿಯಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್​ ಮ್ಯಾಡನ್​ ಜೊತೆಗೆ ಸ್ಯಾಮ್‌ ಹಾಗೂ ವರುಣ್​ ಧವನ್ ಕೂಡ ಒಂದಿಷ್ಟು ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಕಾರಣಕ್ಕಾಗಿ ಇಬ್ಬರು ಲಂಡನ್‌ ‘ಸಿಟಾಡೆಲ್​’ ಪ್ರೈಂ ವಿಡೀಯೊ  ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 


ಇದನ್ನೂ ಓದಿ: Sanya IyerHot Photos: ಕಿರುತೆರೆಯ ಪುಟ್ಟಗೌರಿ ಖ್ಯಾತಿಯ ನಟಿ ಸಾನ್ಯ ಅಯ್ಯರ್ ಬಾಲಿವುಡ್‌ಗೆ ಹಾರಿದ್ರೇ?


ಸಿಟಾಡೆಲ್ ನಲ್ಲಿ ಭಾಗವಹಿಸಿದ ಬಳಿಕ ಮತ್ತೆ ಸಮಂತಾ ಟ್ರೋಲ್‌ಗರ ಕೆಂಗಣ್ಣಿಗೆ ಗುರಿಯಾಗಿದ್ದರು. ತಮ್ಮ ಪಾತ್ರದ ಬಗ್ಗೆ ಇಂಗ್ಲಿಷ್​ ಮಾಧ್ಯಮದವರೊಂದಿಗೆ ಮಾತಾನಾಡುವಾಗ ಉಚ್ಚಾರಣೆ ತಪ್ಪಾಗಿ ಟ್ರೋಲ್‌ಗೆ ಒಳಗಾಗಿದ್ದಾರೆ. ಇದೀಗ ಹುಟ್ಟು ಸಂಭ್ರಮದಲ್ಲಿರುವ ಸ್ಯಾಮ್‌ ಗೆ ಅನೇಕ ಸಿನಿಮಾ ತಾರೆಯರು ಸೇರಿದಂತೆ ಹಲವಾರು ಮಂದಿ ಶುಭ ಕೋರಿದ್ದಾರೆ.


ಅಷ್ಟೇ ಅಲ್ಲದೇ ಟಾಲಿವುಡ್‌ ನಟಿ ಸಮಂತಾ ಬರ್ತ್‌ಡೇಗೆ ಅಭಿಮಾನಿಗಳು ಆಕೆಯ ಹೆಸರಿನ ಗುಡಿ ಕಟ್ಟಿಸಿದ್ದಾರೆ. ಸದ್ಯ ಟಾಲಿವುಡ್‌ ನಟಿ ಸಮಂತಾ 36ನೇ ಬರ್ತ್‌ಡೇ ಸಂಭ್ರಮದಲ್ಲಿದ್ದಾರೆ. ಆಕೆ ಸಿನಿಮಾ ಮಾತ್ರವಲ್ಲದೇ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರಿಂದ ಸಮಾಜ ಸೇವೆಯನ್ನು ಮೆಚ್ಚಿ ಸಂದೀಪ್‌ ಎಂಬ ಯುವಕನೊಬ್ಬ ಗುಡಿ ಕಟ್ಟಿಸಿರುವ  ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಬಾರಿ ಸದ್ದು ಮಾಡುತ್ತಿದೆ.ನಟರನ್ನು ಮಾತ್ರ ದೇವರ ಸ್ಥಾನದಲ್ಲಿ ಆರಾಧಿಸದೇ ಸಿನಿಮಾ ನಟಿಯರನ್ನು ಪೂಜಿಸುವುದನ್ನು ನೋಡಬಹುದಾಗಿದೆ. 


ಇದನ್ನೂ ಓದಿ: Vikram Ravichandran: ಕ್ರೇಜಿಸ್ಟಾರ್ ಸುಪುತ್ರನ ಎರಡನೇ ಚಿತ್ರಕ್ಕೆ ಶೀರ್ಷಿಕೆ ಫಿಕ್ಸ್..’ಮುಧೋಳ್’ ಜೊತೆ ಬಂದ ವಿಕ್ರಮ್ ರವಿಚಂದ್ರನ್..


ನಟಿಗೆ ಹುಟ್ಟು ಹಬ್ಬದ ಸಂಭ್ರಮ ಒಂದೆಡೆಯಾದರೆ, ಈಕೆ ಮತ್ತೆ ಆಸ್ಪತ್ರೆಗೆ ಸೇರಿ ಆತಂಕ ಮೂಡಿಸಿದ್ದಾರೆ. ಸ್ಯಾಮ್‌ ಗೆ ಕೆಲ ತಿಂಗಳಿಂದ ತಮ್ಮ ಆರೋಗ್ಯದಲ್ಲಿ ಒಂದಲ್ಲ ಒಂದು ಸಮಸ್ಯೆ ಅನುಭವಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಮಯೋಸಿಟಿಸ್ ಎಂಬ ಕಾಯಿಲೆಗೆ ತುತ್ತಾಗಿ ಕೆಲ ದಿನಗಳಿಂದ ಚೇತರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಆಕ್ವೀಟ್‌ ಆಗಿದ್ದರು. ಮತ್ತೆ ಆಸ್ಪತ್ರೆಗೆ ದಾಖಲಾಗಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಸಮಂತಾ ಹಂಚಿಕೊಂಡಿದ್ದಾರೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.