Yash about toxic movie : ಇಂದು ಸ್ಯಾಂಡಲ್‌ವುಡ್‌ ರಾಕಿಂಗ್‌ ಸ್ಟಾರ್‌ ಯಶ್ ಮುಟ್ಟಿದ್ದೆಲ್ಲಾ ಚಿನ್ನ ಆಗಿದೆ. KGF 2 ಬಳಿಕ ಟಾಕ್ಸಿಕ್ ಸಿನಿಮಾದಲ್ಲಿ ಬ್ಯುಸಿ ಆಗಿರೋ ರಾಕಿ, ರಾಮಾಯಣ ಸಿನಿಮಾದಲ್ಲಿ ರಾವಣನಾಗಿ ಮಿಂಚಲು ಸಿದ್ದರಾಗುತ್ತಿದ್ದಾರೆ ಅನ್ನೋ ಇನ್ಫಾರ್ಮಶನ್ ಇದ್ದೇ ಇದೆ. ಈಗ ಮ್ಯಾಟರ್ ಏನಪ್ಪಾ ಅಂದ್ರೆ ಯಶ್ ತನ್ನ ಪತ್ನಿ ನನ್ನ ಕೇಳೋದು ಅದೊಂದೇ ಅಂದಿದ್ದಾರೆ ಅದೇನು ಅನ್ನೋದನ್ನ ಹೇಳ್ತಿವಿ ನೋಡಿ 


COMMERCIAL BREAK
SCROLL TO CONTINUE READING

ರಾಧಿಕಾ ನನ್ನನ್ನು ಚೆನ್ನಾಗಿ ಅರಿತ್ತಿದ್ದಾಳೆ. ನಾವಿಬ್ಬರು ಒಟ್ಟೊಟ್ಟಿಗೆ ಬೆಳೆದವರು. ಅದು ಸರಿಯಾಗಿಯಾಗಿದೆ. ಆಕೆ ನನಗೆ ಮೊದಲು ಸ್ನೇಹಿತೆ. ಬಳಿಕ ಪತ್ನಿ ಆಗಿದ್ದು. ಲೈಫ್ ಪಾರ್ಟ್ನರ್ ಆಗಿ ನನಗೆ ಏನು ಇಷ್ಟ, ಯಾವುದು ಸಂತೋಷ ಕೊಡುತ್ತದೆ ಎನ್ನುವುದು ಅವಳಿಗೆ ಗೊತ್ತು. ನೀನು ಎಷ್ಟು ಹಣ ಸಂಪಾದಿಸಿದ್ದೀಯಾ.. ಈ ಚಿತ್ರದಿಂದ ಎಷ್ಟು ಹಣ ಬರುತ್ತದೆ ಎಂದು ಯಾವತ್ತು ಆಕೆ ಕೇಳುವುದಿಲ್ಲ. ನನ್ನ ಆಯ್ಕೆ ಸರೀನಾ? ತಪ್ಪಾ? ಎಂದು ಸಹ ಕೇಳುವುದಿಲ್ಲ. ಆಕೆ ಕೇಳುವುದು ನೀವು ಖುಷಿಯಾಗಿದ್ದೀರಾ? ಅಂತ ಮಾತ್ರ" ಅನ್ನೋದನ್ನ ಯಶ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ:ಅದ್ಭುತ ಮೈಕಟ್ಟು, ಅಪರೂದ ಸೌಂದರ್ಯ, ಮೇಲಾಗಿ ಸ್ಟಾರ್ ನಟನ ಮಗಳು.. ಆದ್ರೂ ಸಿನಿಮಾ ಆಫರ್‌ ಸಿಗ್ತಿಲ್ಲ ಈ ಸುಂದರಿಗೆ..!


ರಾಧಿಕಾ ಯಾವಾಗಲೂ ನನ್ನ ಅಟೆಂಕ್ಷನ್ ಹಾಗೂ ಟೈಮ್ ಮಾತ್ರ ಕೇಳುತ್ತಾಳೆ. ಅದೇ ನನಗೆ ಬಹಳ ಕಷ್ಟ. ಆದರೆ ಅದು ನನ್ನ ಜವಾಬ್ದಾರಿ. ನನ್ನ ಗುರಿ ಸಾಧನೆಗೆ ನಾನು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧ. ಅದಕ್ಕೆ ನನ್ನ ಫ್ಯಾಮಿಲಿ ಬೆಂಬಲವಿದೆ. ರಾಧಿಕಾ ಕೇಳುವುದು ಎಷ್ಟು ದಿನ ಶೂಟಿಂಗ್, ಯಾವಾಗ ಮತ್ತೆ ಸಿಗ್ತೀರಾ? ಈ ಪ್ರಾಜೆಕ್ಟ್ ಎಷ್ಟು ದಿನ ಅಂತ ಕೇಳ್ತಾರೆ. ಹಾಗಾಗಿ ನಾನು ನಿಜಕ್ಕೂ ಅದೃಷ್ಟವಂತ" ಎಂದು ಯಶ್ ಹೇಳಿಕೊಂಡಿದ್ದಾರೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ