Yashvanthapura Traffic Police : ಹೌದು ವ್ಹೀಲಿಂಗ್‌ ಮಾಡೋದು ಯುವಕರಿಗೆ ಕ್ರೇಜ್‌ ಆಗಿದೆ. ರಾತ್ರಿವೇಳೆಯಲ್ಲಿ ಬೆಂಗಳೂರಿನ ಪ್ರಮುಖ ರಸ್ತೆಗಳ ಮೇಲೆ ವ್ಹೀಲಿಂಗ್‌ ಮಾಡುತ್ತಿರುತ್ತಾರೆ. ಇದೀಗ ಕೇವಲ ರಾತ್ರಿ ಹೊತ್ತು ಮಾತ್ರವಲ್ಲ ಹಗಲಿನಲ್ಲೂ ವ್ಹೀಲಿಂಗ್‌ ಮಾಡುವವರ ಸಂಖ್ಯೆ ಬಹತೇಕ ಹೆಚ್ಚಾಗಿದೆ. ಇದರಿಂದ ಅನೇಕ ಯುವಕರು ಪ್ರಾಣ ಕಳೆದುಕೊಂಡಿರುವ ನಿದಶರ್ನಗಳು ಇವೆ. 


COMMERCIAL BREAK
SCROLL TO CONTINUE READING

ಈ ವ್ಹೀಲಿಂಗ್‌ ಮಾಡುವ ಯುವಕರು ತಮ್ಮ ಜೀವಕ್ಕಾಗುವ ಅಪಾಯವನ್ನು ಲೆಕ್ಕಿಸದೇ ವ್ಹೀಲಿಂಗ್‌ ಅನ್ನೋ ಹುಚ್ಚಿನ ಹಿಂದೆ ಬಿದ್ದಿದ್ದಾರೆ. ಇದರಿಂದ ಟ್ರಾಫಿಕ್‌ ಪೋಲಿಸರು ಬೆಸೋತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಟ್ರಾಫಿಕ್‌ ಕಂಟ್ರೋಲ್‌ ಮಾಡುವುದರ ಜೊತೆಗೆ ಈ ವ್ಹೀಲಿಂಗ್‌ ಮಾಡುವವರನ್ನು ಕಂಟ್ರೋಲ್‌ ಮಾಡುವ ಕೆಲಸ ಟ್ರಾಫಿಕ್‌ ಪೋಲಿಸರದ್ದಾಗಿದೆ. 


ಇದನ್ನೂ ಓದಿ-ʼದಿ ಕೇರಳ ಸ್ಟೋರಿʼ ನಾಯಕಿ ಅದಾ ಶರ್ಮಾ ಚಿತ್ರದ ಬಗ್ಗೆ ಹೇಳಿದ್ದೇನು..?


ಪೋಲಿಸರು ಎಷ್ಟೇ ವಾರ್ನಿಂಗ್‌ ಕೊಟ್ಟರು ಯುವಕರು ಎಚ್ಚೆತ್ತುಕೊಳ್ಳುತ್ತಿಲ್ಲ, ಇದೀಗ ಇದೇ ವಿಚಾರವಾಗಿ ಯಶವಂತಪುರ ಪೋಲಿಸರು ಕ್ರಿಯೆಟಿವ್‌ ಆಗಿ ʼಕಾಂತಾರʼ ಸಿನಿಮಾ ಡೈಲಾಗ್‌ ಮೂಲಕ ಟಾಂಗ್‌ ನೀಡುವುದರ ಜೊತೆಗೆ ವಾರ್ನಿಂಗ್‌ ಕೂಡ ಕೊಟ್ಟಿದ್ದಾರೆ.


ಡೇರ್ ಡೆವಿಲ್ ಮುಸ್ತಫಾ' ರಿಲೀಸ್ ಗೆ ಡೇಟ್ ಫಿಕ್ಸ್....ಡಾಲಿ ಸಾಥ್ ಕೊಟ್ಟಿರುವ ಸಿನಿಮಾ ಮೇ 19ಕ್ಕೆ ರಿಲೀಸ್


ಯಶವಂತಪುರ ಟ್ರಾಫಿಕ್‌ ಪೋಲಿಸರ ಈ ಟ್ವೀಟ್‌ಗೆ ಕೆಲವು ತಮಾಷೆ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, "ದೈವ ತೀರ್ಮಾನ ಮಾಡುತ್ತೆ ಎಂದುಕೊಂಡು ನೀವು ಬಿಡಬೇಡಿ, ದೇವರ ಜೊತೆ ಇವರ ಭೇಟಿ ಮಾಡಿಸುವುದು ನಿಮ್ಮ ಕೆಲಸ ಸಾರ್" ಎಂದು ಕಾಮೆಂಟ್‌ ಮಾಡಿದ್ದಾರೆ. ಜೊತೆಗೆ "ವಾಹನಗಳನ್ನು ವಶಪಡಿಸಿಕೊಳ್ಳಿ ಮತ್ತು ಸ್ಕ್ರ್ಯಾಪ್ ಮಾಡಿ, ಹರಾಜಿಗೆ ಹಾಕಬೇಡಿ, ಅವರು ಮತ್ತೆ ಖರೀದಿಸುತ್ತಾರೆ, ವೀಲಿಂಗ್ ಮಾಡುತ್ತಾರೆ"  ಎಂದು ಕೆಲವರು ಉತ್ತಮ ರೀತಿಯಲ್ಲಿ ಕಾಮೆಂಟ್‌ ಮಾಡಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.