ಬಿಡುಗಡೆಗೆ ಸಿದ್ದವಾಗಿ ನಿಂತಿದೆ Redmi 13 5G : ವೈಶಿಷ್ಟ್ಯ ತಿಳಿದರೆ ಖರೀದಿಸುವುದು ಗ್ಯಾರಂಟಿ

Redmi 13 5G :Xiaomi ತನ್ನ ಹೊಸ ಬಜೆಟ್ 5G ಸ್ಮಾರ್ಟ್‌ಫೋನ್ Redmi 13 5G ಅನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲಿದೆ.ಅಧಿಕೃತ ಬಿಡುಗಡೆಗೂ ಮುನ್ನ ಈ ಸ್ಮಾರ್ಟ್‌ಫೋನ್ ಕುರಿತು 5 ವಿಶೇಷತೆಗಳನ್ನು ತಿಳಿದುಕೊಳ್ಳೋಣ.  

Written by - Ranjitha R K | Last Updated : Jun 25, 2024, 04:22 PM IST
  • Redmi 13 5G ಅನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ
  • ಜುಲೈ 9 ರಂದು ಫೋನ್ ಬಿಡುಗಡೆ
  • ಇದು Redmi 12 5Gಯ ​​ಹೊಸ ಆವೃತ್ತಿಯಾಗಿದೆ.
ಬಿಡುಗಡೆಗೆ ಸಿದ್ದವಾಗಿ ನಿಂತಿದೆ Redmi 13 5G : ವೈಶಿಷ್ಟ್ಯ ತಿಳಿದರೆ ಖರೀದಿಸುವುದು ಗ್ಯಾರಂಟಿ  title=

Redmi 13 5G : Xiaomi ತನ್ನ ಹೊಸ ಬಜೆಟ್ 5G ಸ್ಮಾರ್ಟ್‌ಫೋನ್ Redmi 13 5G ಅನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲಿದೆ.ಈ ಫೋನ್ ಅನ್ನು ಜುಲೈ 9 ರಂದು ಬಿಡುಗಡೆ ಮಾಡಲಾಗುವುದು ಎಂದು ಕಂಪನಿಯು ಕಳೆದ ವಾರವಷ್ಟೇ ತಿಳಿಸಿತ್ತು.ಈ ಫೋನ್ ಕಳೆದ ವರ್ಷ ಆಗಸ್ಟ್‌ನಲ್ಲಿ ಬಿಡುಗಡೆಯಾದ Redmi 12 5Gಯ ​​ಹೊಸ ಆವೃತ್ತಿಯಾಗಿದೆ. ಇತ್ತೀಚೆಗೆ, ಈ ಫೋನ್ ಅನ್ನು ಅಮೆಜಾನ್ ಇಂಡಿಯಾದಲ್ಲಿ ಲಿಸ್ಟ್ ಮಾಡಲಾಗಿದೆ.ಇದು ಅದರ ವಿನ್ಯಾಸ,ಪ್ರೊಸೆಸರ್ ಮತ್ತು ಬ್ಯಾಟರಿ ಬಗೆಗಿನ ಮಾಹಿತಿಯನ್ನು ಬಹಿರಂಗಪಡಿಸಿತ್ತು. ಅಧಿಕೃತ ಬಿಡುಗಡೆಗೂ ಮುನ್ನ ಈ ಸ್ಮಾರ್ಟ್‌ಫೋನ್ ಕುರಿತು 5 ವಿಶೇಷತೆಗಳನ್ನು ತಿಳಿದುಕೊಳ್ಳೋಣ.

Redmi 13 5G ವಿನ್ಯಾಸ : 
Redmi 13 5G ಕೂಡಾ Redmi 12 ರಂತೆಯೇ ಅದೇ ವಿನ್ಯಾಸವನ್ನು ಹೊಂದಿದೆ.  ಆದರೆ ಇಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ನೀಡಲಾಗಿದೆ.ಇದು ಬಾಕ್ಸ್ ವಿನ್ಯಾಸದಲ್ಲಿ ಬರುತ್ತದೆ.ಅಮೆಜಾನ್ ಲಿಸ್ಟ್ ಪ್ರಕಾರ,ಇದು 'ಕ್ರಿಸ್ಟಲ್ ಗ್ಲಾಸ್ ಡಿಸೈನ್'ನೊಂದಿಗೆ ಬರುತ್ತದೆ.ಇದು ಕಡಿಮೆ ಬೆಲೆಯಲ್ಲಿ  ಪ್ರೀಮಿಯಂ ಅನುಭವವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಈ ಫೋನ್ ಗುಲಾಬಿ ಮತ್ತು ನೀಲಿ ಬಣ್ಣಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. 

ಇದನ್ನೂ ಓದಿ : ಹೀಗಿರಲಿದೆ iPhone 16 ಹೊಸ ವಿನ್ಯಾಸ ! ಇಲ್ಲಿದೆ ನೋಡಿ Leak Video

Redmi 13 5G ಡಿಸ್ಪ್ಲೇ : 
ಡಿಸ್ಪ್ಲೇ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಬಿಡುಗಡೆಯಾಗಿಲ್ಲ.ಆದರೆ Redmi Note 13 5G ಅದರ ಬೆಲೆ ಶ್ರೇಣಿಯಲ್ಲಿ ದೊಡ್ಡ ಡಿಸ್ಪ್ಲೇ ಹೊಂದಿರುವ ಫೋನ್ ಆಗಿರುತ್ತದೆ ಎಂದು ಹೇಳಲಾಗುತ್ತಿದೆ.ಇದು ಸ್ಕ್ರೀನ್ ಮೇಲೆ ಮಧ್ಯದಲ್ಲಿ ಸಣ್ಣ ಕ್ಯಾಮೆರಾವನ್ನು ಹೊಂದಿರುತ್ತದೆ.ಸ್ಕ್ರಾಚ್ ನಿಂದ ರಕ್ಷಿಸಲು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ ಇರುತ್ತದೆ.ಹಿಂದಿನ ಮಾದರಿ Redmi 12 5G 6.79-ಇಂಚಿನ LCD ಸ್ಕ್ರೀನ್ ಅನ್ನು ಹೊಂದಿತ್ತು. ಹೊಸ ಫೋನ್ ಸ್ವಲ್ಪ ದೊಡ್ಡ ಸ್ಕ್ರೀನ್ ಹೊಂದಿರುವ ಸಾಧ್ಯತೆಯಿದೆ.

Redmi 13 5G ಪ್ರೊಸೆಸರ್ :
Redmi Note 13 5G ಫೋನ್ Qualcomm Snapdragon 4 Gen 2 ಪ್ರೊಸೆಸರ್‌ನೊಂದಿಗೆ ಬರಲಿದೆ.ಇದು ಹಿಂದಿನ ಮಾದರಿಯ Redmi 12 5G ಯಲ್ಲಿಯೂ ಬಳಸಲಾದ ಅದೇ ಪ್ರೊಸೆಸರ್ ಆಗಿದೆ.Redmi 12 5G MIUI 14 ಆಪರೇಟಿಂಗ್ ಸಿಸ್ಟಮ್ ಹೊಂದಿದ್ದರೂ,ಹೊಸ Redmi 13 5G ಕಂಪನಿಯ ಹೊಸ HyperOS ನೊಂದಿಗೆ ಬರುತ್ತದೆ.

ಇದನ್ನೂ ಓದಿ : ಮೈಕ್ರೋಸಾಫ್ಟ್ ಮತ್ತು ಗೂಗಲ್ ಕ್ರೋಮ್ ಬಳಕೆದಾರರಿಗೆ ಎಚ್ಚರಿಕೆ...!

Redmi 13 5G ಬ್ಯಾಟರಿ :
ಈ ಫೋನ್ 5,030mAh ಬ್ಯಾಟರಿಯೊಂದಿಗೆ ಬರುತ್ತದೆ.ಇದು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Redmi 13 5G ನಿರೀಕ್ಷಿತ ಬೆಲೆ :
Redmi Note 13 5G ಬೆಲೆಯು 15,000 ರೂ.ಗಿಂತ ಕಡಿಮೆಯಿರುವ ನಿರೀಕ್ಷೆಯಿದೆ. ಆದರೆ ಫೋನ್‌ನ ನಿಖರವಾದ ಬೆಲೆಯನ್ನು ಜುಲೈ 9 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆ ಮಾಡುವ ಸಮಯದಲ್ಲಿಯೇ  ಬಹಿರಂಗಪಡಿಸಲಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News