Viral Video: ಟೊಮೇಟೊ ಬೆಲೆಯಿಂದ ಕಂಗೆಟ್ಟ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಏನ್ ಮಾಡಿದ್ದಾರೆ ನೋಡಿ!
Tomato Price: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಹ ಟೊಮೇಟೊ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದಾರೆ. ಮುಂಬೈನ ಮಾಲ್‍ವೊಂದರಲ್ಲಿ ಟೊಮೇಟೊ ಖರೀದಿಗೆ ಮುಂದಾಗಿದ್ದ ಅವರು ಬೆಲೆ ಕಂಡು ಹೌಹಾರಿದ್ದಾರೆ.
ಮುಂಬೈ: ಕರ್ನಾಟಕ ಸೇರಿದಂತೆ ದೇಶದಾದ್ಯಂತ ಟೊಮೇಟೊ ಬೆಲೆ ಏರಿಕೆಯಾಗಿದ್ದು, ಶತಕ ಬಾರಿಸಿದೆ. ಸದ್ಯ ಟೊಮೇಟೊ ಬೆಲೆ ಪ್ರತಿ ಕೆಜಿ 110-150 ರೂ. ನಂತೆ ಮಾರಾಟವಾಗುತ್ತಿದೆ. ದುಬಾರಿ ಬೆಲೆಯಿಂದಾಗಿ ಜನಸಾಮಾನ್ಯರು ಟೊಮೇಟೊ ಖದೀರಿಸಲು ಹಿಂದೇಟು ಹಾಕುತ್ತಿದ್ದಾರೆ.
ರಾಷ್ಟ್ರರಾಜಧಾನಿ ದೆಹಲಿ ಮತ್ತು ವಾಣಿಜ್ಯ ನಗರಿ ಮುಂಬೈ ಸೇರಿದಂತೆ ಅನೇಕ ಕಡೆ ಟೊಮೇಟೊ ಬೆಲೆ ಗಗನಕ್ಕೇರಿದೆ. ಟೊಮೇಟೊ ಬೆಲೆ ಏರಿಕೆಯ ವಿಷಯವು ವಿವಿಧ ರೀತಿಯಲ್ಲಿ ಟ್ರೋಲ್ ಆಗುತ್ತಿದೆ. ಇದಲ್ಲದೆ ಟೊಮೇಟೊ ಬೆಲೆ ಏರಿಕೆಯ ಬಿಸಿ ಸೆಲೆಬ್ರೆಟಿಗಳಿಗೆ ತಟ್ಟಿದೆ. ಬೆಲೆ ಏರಿಕೆ ಕಾರಣ ನಾನು ಟೊಮೇಟೊ ತಿನ್ನುವುದನ್ನೇ ಕಡಿಮೆ ಮಾಡಿದ್ದೇನೆ, ನಮ್ಮ ಅಡುಗೆ ಮನೆ ದುಬಾರಿಯಾಗಿದೆ ಅಂತಾ ಬಾಲಿವುಡ್ ನಟ ಸುನೀಲ್ ಶೆಟ್ಟಿ ಹೇಳಿದ್ದರು.
ಇದನ್ನೂ ಓದಿ: ಸೆಲಬ್ರಿಟಿ ಜೋಡಿಗಳ ಕೈ ರುಚಿ ತೋರಿಸೋಕೆ ʼಕಪಲ್ಸ್ ಕಿಚನ್ʼ ರೆಡಿ.! ಮನರಂಜನೆ ಜೊತೆ ಸಂಬಂಧ ಬೆಸುಗೆಯ ಕತೆ
ಟೊಮೇಟೊ ಬೆಲೆ ಏರಿಕೆ ವಿಚಾರವಾಗಿ ಸುನೀಲ್ ಶೆಟ್ಟಿ ನೀಡಿದ್ದ ಈ ಹೇಳಿಕೆಯು ರೈತರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಟೀಕಿಸಿದ್ದರು. ಈ ಬಗ್ಗೆ ಬಾಲಿವುಡ್ ನಟನನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ ಸುನೀಲ್ ಶೆಟ್ಟಿ ಕ್ಷಮೆಯಾಚಿಸಿದ್ದು, ‘ನಾನು ಯಾವತ್ತೂ ರೈತರ ವಿರುದ್ಧ ಇಲ್ಲವೇ ಇಲ್ಲ. ನಾನು ಕನಸಿನಲ್ಲೂ ರೈತರ ವಿರುದ್ಧ ಮಾತನಾಡೋದನ್ನು ಯೋಚಿಸಲ್ಲ’ಎಂದು ಹೇಳಿದ್ದರು.
ಟೊಮೇಟೊ ಬೆಲೆ ಏರಿಕೆಗೆ ಕಂಗೆಟ್ಟ ಶಿಲ್ಪಾ ಶೆಟ್ಟಿ!
ಇನ್ನು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಹ ಟೊಮೇಟೊ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದಾರೆ. ಮುಂಬೈನ ಮಾಲ್‍ವೊಂದರಲ್ಲಿ ಟೊಮೇಟೊ ಖರೀದಿಗೆ ಮುಂದಾಗಿದ್ದ ಅವರು ಬೆಲೆ ಕಂಡು ಹೌಹಾರಿದ್ದಾರೆ. ಮಾಲ್‍ವೊಂದರಲ್ಲಿ ಟೊಮೇಟೊವನ್ನು ತೆಗೆದುಕೊಳ್ಳುವ ಅವರು ಅದನ್ನು ತಮ್ಮ ಕೆನ್ನೆಗೆ ಒತ್ತಿಕೊಂಡು ಖುಷಿಪಡುತ್ತಾರೆ. ಬಳಿಕ ಅದರ ಮೇಲಿನ ಬೆಲೆ ಕಂಡು ಗಾಬರಿಯಾಗುತ್ತಾರೆ. ಬಳಿಕ ಅದನ್ನುಅಲ್ಲೇ ಇಟ್ಟುಬಿಡುತ್ತಾರೆ.
ಇದನ್ನೂ ಓದಿ: ಶೀಘ್ರದಲ್ಲೇ ರಾಮ್ ಚರಣ್ ಜೊತೆ ಪ್ರಭಾಸ್ ಸಿನಿಮಾ..! ಬಾಕ್ಸ್ ಆಫೀಸ್ ಬ್ಲಾಸ್ಟ್ ಮಾಡೋಕೆ ಸಿದ್ಧತೆ
ಈ ವಿಡಿಯೋವನ್ನು ಅವರು ತಮ್ಮ ಇನ್ಸ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘टमाटर ke prices are raising my Dhadkan’ ಎಂದು ಕ್ಯಾಪ್ಶನ್ ನೀಡಿದ್ದಾರೆ. 15 ಲಕ್ಷಕ್ಕೂ ಅಧಿಕ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದು, ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.