ʼಒಂದೇ ಹಾಡಿಗೆ 16 ಬಟ್ಟೆ ಬದಲಿಸಿದ ರಣಬೀರ್ ಮತ್ತು ಶ್ರದ್ಧಾ.ʼ. ಯಾಕೆ ಗೊತ್ತೇ..!
ಬಹುನಿರೀಕ್ಷಿತ ಹಿಂದಿ ಸಿನಿಮಾ ʼತೂ ಜೂಟಿ ಮೈನ್ ಮಕ್ಕರ್` ಚಿತ್ರದ ʼತೇರೆ ಪ್ಯಾರ್ ಮೈನ್ʼ ಹಾಡು ಬಿಡುಗಡೆಯಾಗಿದೆ. ಈಗಾಗಲೇ ಸಾಂಗ್ ನೋಡಿದ ಪ್ರೇಕ್ಷಕರು ಸೂಪರ್ ಅಂತ ಕಾಮೆಂಟ್ ಮಾಡಿ ಹಾಡಿ ಹೊಗಳಿದ್ದಾರೆ. ಈ ಹಾಡಿನ ವಿಶೇಷ ಅಂದ್ರೆ, ಒಂದೇ ಹಾಡಿನಲ್ಲಿ ನಟ ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಒಟ್ಟು 16 ಬಟ್ಟೆಗಳನ್ನು ಬದಲಾಯಿಸಿದ್ದಾರೆ.
Tu Jhoothi Main Makkaar : ಬಹುನಿರೀಕ್ಷಿತ ಹಿಂದಿ ಸಿನಿಮಾ ʼತೂ ಜೂಟಿ ಮೈನ್ ಮಕ್ಕರ್' ಚಿತ್ರದ ʼತೇರೆ ಪ್ಯಾರ್ ಮೈನ್ʼ ಹಾಡು ಬಿಡುಗಡೆಯಾಗಿದೆ. ಈಗಾಗಲೇ ಸಾಂಗ್ ನೋಡಿದ ಪ್ರೇಕ್ಷಕರು ಸೂಪರ್ ಅಂತ ಕಾಮೆಂಟ್ ಮಾಡಿ ಹಾಡಿ ಹೊಗಳಿದ್ದಾರೆ. ಈ ಹಾಡಿನ ವಿಶೇಷ ಅಂದ್ರೆ, ಒಂದೇ ಹಾಡಿನಲ್ಲಿ ನಟ ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಒಟ್ಟು 16 ಬಟ್ಟೆಗಳನ್ನು ಬದಲಾಯಿಸಿದ್ದಾರೆ.
'ತೇರೆ ಪ್ಯಾರ್ ಮೈನ್' ಹಾಡನ್ನು ಸ್ಪೇನ್‌ನಲ್ಲಿ ಚಿತ್ರೀಕರಿಸಲಾಗಿದೆ. ಅದ್ಭುತ ಸ್ಥಳಗಳಲ್ಲಿ ಹಾಡಿನ ದೃಶ್ಯಗಳನು ಮನಮೋಹಕವಾಗಿ ಮೂಡಿಬಂದಿವೆ. ಅಲ್ಲದೆ, ಹಾಡಿನಲ್ಲಿ ರಣಬೀರ್ ಮತ್ತು ಶ್ರದ್ಧಾ ಅವರು 16 ತರಹದ ಬಟ್ಟೆಗಳನ್ನು ಧರಿಸಿದ್ದು ವಿಶೇಷವಾಗಿದೆ. ಹಾಡು ನೋಡಿದ ಮೇಲೆ ಇಬ್ಬರು ಸ್ಟಾರ್‌ಗಳ ಫ್ಯಾನ್‌ಗಳು ರಣಬೀರ್ ಮತ್ತು ಶ್ರದ್ಧಾ ರೊಮ್ಯಾಂಟಿಕ್ ಸೀನ್‌ಗಳನ್ನು ತೆರೆ ಮೇಲೆ ನೋಡಲು ಸಿದ್ಧರಾಗಿದ್ದಾರೆ.
ಅದ್ಭುತವಾಗಿದೆ ʼಕಡಲತೀರದ ಭಾರ್ಗವʼ ಚಿತ್ರದ ʼಸಮಯವೇʼ ಸಾಂಗ್
16 ಲುಕ್‌ಗಳು ತುಂಬಾ ಸೊಗಸಾಗಿ ವಿನ್ಯಾಸಗೊಳಿಸಲಾಗಿದೆ. ರಣಬೀರ್ ಮತ್ತು ಶ್ರದ್ಧಾ ಲುಕ್ ಕಣ್ಣು ಕುಕ್ಕುವಂತಿವೆ. ಇದಕ್ಕಾಗಿಯೇ ಈ ಹಾಡಿನ ಚಿತ್ರೀಕರಣ ಸಾಕಷ್ಟು ಸಮಯ ತೆಗೆದುಕೊಂಡಿದ್ದೇವೆ. ರಣಬೀರ್ ಮತ್ತು ಶ್ರದ್ಧಾ ಇಬ್ಬರೂ ಸಖತ್ ಫಿಟ್ ಆಗಿದ್ದಾರೆ. ಅವರನ್ನೂ ಇನ್ನೂ ಅದ್ಭುತವಾಗಿ ಕಾಣುವಂತೆ ಮಾಡುವುದು ಸವಾಲಾಗಿತ್ತು ಎಂಬುದನ್ನು ನಾನು ಅಲ್ಲಗಳೆಯುವಂತಿಲ್ಲ ಎಂದು ಡಿಸೈನರ್ ಸಮಿದಾ ಕಾಸ್ಟ್ಯೂಮ್ ಕುರಿತು ಮಾತನಾಡಿದ್ದಾರೆ.
ಲವ್ ರಂಜನ್ ನಿರ್ದೇಶನ ʼತೂ ಜೂಟಿ ಮೈನ್ ಮಕ್ಕರ್ʼ ಚಿತ್ರ ರೋಮ್ಯಾಂಟಿಕ್ ಮತ್ತು ಕಾಮಿಡಿ ಕಥಾಹಂದರ ಹೊಂದಿದೆ. ರಣಬೀರ್ ಅಭಿನಯದ 'ಬ್ರಹ್ಮಾಸ್ತ್ರ' ಮತ್ತು 'ಶಂಶೇರಾ'ದಂತಹ ಸಿನಿಮಾಗಿಂತ ಇದು ಭಿನ್ನವಾಗಿದೆ. ಇತ್ತೀಚಿಗೆ ಬಿಡುಗಡೆಯಾಗಿದ್ದ ಸಿನಿಮಾ ಟ್ರೇಲರ್ ಚಿತ್ರದ ಮೇಲಿನ ಕುತೂಹಲ ಹೆಚ್ಚಿಸಿದೆ. ಮಾರ್ಚ್ 8 ರಂದು ಈ ಸಿನಿಮಾ ತೆರೆಗೆ ಬರಲಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.