Tunisha Sharma suicide case : ಹಿಂದಿ ಕಿರುತೆರೆ ನಟಿ ತುನೀಶಾ ಶರ್ಮಾ ಶನಿವಾರ ಧಾರಾವಾಹಿಯ ಸೆಟ್‌ನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು. ಇದೀಗ ತುನೀಶಾ ಶರ್ಮಾ ಅವರ ಸಾವಿನ ನಂತರ ಅವರ ಆತ್ಮಹತ್ಯೆಯ ಬಗ್ಗೆ ಹಲವಾರು ಹೊಸ ವಿಷಯಗಳು ಬೆಳಕಿಗೆ ಬರುತ್ತಿವೆ. ತುನೀಶಾ ಸಾಯುವ ಒಂದು ದಿನ ಮೊದಲು, ಆಕೆಯ ಸಹನಟ ಶೀಜನ್, ತುನೀಶಾಳಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸಿದ್ದ ಎಂದು ತುನೀಶಾಳ ತಾಯಿ ಆರೋಪಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದಾದ ಬಳಿಕ ಪೊಲೀಸರು ಜೀಶಾನ್‌ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಜಿಶಾನ್‌ನನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ. 20ರ ಹರೆಯದ ನಟಿ ಈ ರೀತಿ ಸಾವನ್ನಪ್ಪಿದ್ದು, ಅವರ ಅಭಿಮಾನಿಗಳು ಹಾಗು ಸಿನಿರಂಗದ ಕಲಾವಿದರಿಗೆ ಶಾಕ್‌ ನೀಡಿದೆ. ಈ ಘಟನೆಯಿಂದ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ. ತುನೀಶಾ ಸ್ನೇಹಿತರು ಮತ್ತು ಕುಟುಂಬಸ್ಥರಿಗೆ ಇದು ನಂಬಲಾರದ ಸತ್ಯವಾಗಿದೆ.


ಇದನ್ನೂ ಓದಿ: ಬಿಗ್ ಬಾಸ್ ನಿಂದ ಅರುಣ್ ಸಾಗರ್ ಔಟ್...!



ಮಾಧ್ಯಮ ವರದಿಗಳ ಪ್ರಕಾರ, ತುನಿಶಾಗೆ ಹಲವು ಕನಸುಗಳಿದ್ದವು. ಅವರ ವೃತ್ತಿಜೀವನವು ಇದೀಗ ಪ್ರಾರಂಭವಾಗುತ್ತಿತ್ತು. ಅನೇಕ ದೊಡ್ಡ ದೊಡ್ಡ ಯೋಜನೆಗಳ ಅವರು ಹಾಕಿಕೊಂಡಿದ್ದರು. ತುನೀಶಾ ಪ್ರೀತಿಯಲ್ಲಿ ನಂಬಿಕೆ ಇಟ್ಟಿದ್ದಳು. ಅದಕ್ಕಾಗಿ ಯಾವ ಹಂತಕ್ಕೂ ಹೋಗಲು ಸಿದ್ಧಳಾಗಿದ್ದಳು ಎಂದು ಹೇಳಲಾಗುತ್ತಿದೆ. ತನ್ನ ಸಾವಿಗೆ 12 ವಾರಗಳ ಮೊದಲು, ತುನಿಶಾ ತನ್ನ ಕೈ ಮೇಲೆ 'ಪ್ರೀತಿ ಎಲ್ಲಕ್ಕಿಂತ ಹೆಚ್ಚು' ಎಂಬ ಹಚ್ಚೆಯನ್ನು ಹಾಕಿಸಿಕೊಂಡಿದ್ದಳು.


ಅಲ್ಲದೆ ಇದೇ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಳು. ಅಲ್ಲದೆ, ಐ ಲವ್ ಇಟ್ ಎಂಬ ಶೀರ್ಷಿಕೆಯನ್ನೂ ನೀಡಿದ್ದರು. ತುನೀಶಾ ಪ್ರೀತಿಯನ್ನು ದೇವರಿಗಿಂತ ಹೆಚ್ಚಾಗಿ ನಂಬುತ್ತಿದ್ದಳು ಎಂದು ತುನೀಶಾ ಆಪ್ತರು ಹೇಳುತ್ತಾರೆ. 2023 ಜನವರಿ 21 ರಂದು, ತುನಿಶಾ ತನ್ನ 21 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಿತ್ತು. ಆದರೆ ವಿಧಿ ಆಟಕ್ಕೆ ಅನಿರೀಕ್ಷಿತವಾಗಿ ತುನೀಶಾ ಜಗತ್ತಿಗೆ ವಿದಾಯ ಹೇಳಿದ್ದಾಳೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.