Big Boss Kannada 9 : ಬಿಗ್ ಬಾಸ್ ನಿಂದ ಅರುಣ್ ಸಾಗರ್ ಔಟ್...!

ಬಿಗ್ ಬಾಸ್ ನ ಮೊದಲ ಸೀಸನ್ 1 ರಲ್ಲಿಯೂ ಸ್ಪರ್ಧಿಸುವ ಮೂಲಕ ರನ್ನರ್ ಅಪ್ ಆಗಿದ್ದ ಅರುಣ್ ಸಾಗರ್ ಮತ್ತೆ ಒಂಬತ್ತನೆ ಸೀಸನ್ ನಲ್ಲಿಯೂ ಕಾಣಿಸಿಕೊಳ್ಳುವ ಮೂಲಕ ಸೈ ಎನಿಸಿಕೊಂಡಿದ್ದರು.

Written by - Manjunath N | Last Updated : Dec 25, 2022, 04:54 PM IST
  • ಪುತ್ರಿಗೆ ಹುಷಾರಿಲ್ಲ ಎಂದು ಹೊರಗೆ ಹೋಗಿ ತಮ್ಮ ಮಗಳ ಶಸ್ತ್ರಚಿಕಿತ್ಸೆ ಮುಗಿಸಿಕೊಂಡು ಬಂದಿದ್ದರು.
  • ನಿನ್ನೆಯಷ್ಟೇ ಅಮೂಲ್ಯಗೌಡ ಎಲಿಮಿನೆಟ್ ಆಗಿದ್ದರು.
  • ಅರುಣ್ ಸಾಗರ್ ಪ್ರತಿಷ್ಠಿತ ರಿಯಾಲಿಟಿ ಷೋ ನಿಂದ ಹೊರ ಬಿದ್ದಿರುವುದು ಎಲ್ಲರಲ್ಲೂ ನಿರಾಸೆ ಮೂಡಿಸಿದೆ.
Big Boss Kannada 9 : ಬಿಗ್ ಬಾಸ್ ನಿಂದ ಅರುಣ್ ಸಾಗರ್ ಔಟ್...! title=

ಬೆಂಗಳೂರು: ಸ್ಯಾಂಡಲ್ ವುಡ್ ನ ಪ್ರತಿಭಾವಂತ ಕಲಾವಿದ ಅರುಣ್ ಸಾಗರ್ ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 9 ಷೋ ನಿಂದ ಹೊರ ನಡೆದಿದ್ದಾರೆ.

ಬಿಗ್ ಬಾಸ್ ನ ಮೊದಲ ಸೀಸನ್ 1 ರಲ್ಲಿಯೂ ಸ್ಪರ್ಧಿಸುವ ಮೂಲಕ ರನ್ನರ್ ಅಪ್ ಆಗಿದ್ದ ಅರುಣ್ ಸಾಗರ್ ಮತ್ತೆ ಒಂಬತ್ತನೆ ಸೀಸನ್ ನಲ್ಲಿಯೂ ಕಾಣಿಸಿಕೊಳ್ಳುವ ಮೂಲಕ ಸೈ ಎನಿಸಿಕೊಂಡಿದ್ದರು.

ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಅರುಣ್ ಸಾಗರ ತಮ್ಮ ಸೃಜನಶೀಲತೆಯಿಂದ ಪ್ರೇಕ್ಷಕರನ್ನು ಗೆಲ್ಲಬಲ್ಲವರಾಗಿದ್ದರು.ಈಗ ಫೈನಲ್ ಗೆ ಕೇವಲ 7 ದಿನಗಳು ಬಾಕಿ ಇವೆ ಈ ಸಂದರ್ಭದಲ್ಲಿ ಈಗ ಅವರು ಸ್ಪರ್ಧೆಯಿಂದ ಎಲಿಮಿನೆಟ್ ಆಗಿದ್ದಾರೆ.

ಇದನ್ನೂ ಓದಿ: Mahesh Babu : ತಂದೆ-ತಾಯಿಯ ಸಾವಿಗೆ ʼಮಹೇಶ್ ಬಾಬುʼ ಜಾತಕ ದೋಷ ಕಾರಣ..!

ಕೆಲವು ದಿನಗಳ ಹಿಂದಷ್ಟೇ ಅವರು ತಮ್ಮ ಪುತ್ರಿಗೆ ಹುಷಾರಿಲ್ಲ ಎಂದು ಹೊರಗೆ ಹೋಗಿ ತಮ್ಮ ಮಗಳ ಶಸ್ತ್ರಚಿಕಿತ್ಸೆ ಮುಗಿಸಿಕೊಂಡು ಬಂದಿದ್ದರು.ನಿನ್ನೆಯಷ್ಟೇ ಅಮೂಲ್ಯಗೌಡ ಎಲಿಮಿನೆಟ್ ಆಗಿದ್ದರು. ಇದಾದ ಬೆನ್ನಲ್ಲೇ ಈಗ ಅರುಣ್ ಸಾಗರ್ ಅವರು ಪ್ರತಿಷ್ಠಿತ ರಿಯಾಲಿಟಿ ಷೋ ನಿಂದ ಹೊರ ಬಿದ್ದಿರುವುದು ಎಲ್ಲರಲ್ಲೂ ನಿರಾಸೆ ಮೂಡಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News