ಧಾರಾವಾಹಿ ನಟಿಯ ಹನಿಟ್ರ್ಯಾಪ್ಗೆ 11 ಲಕ್ಷ ರೂ. ಕಳೆದುಕೊಂಡ 75 ವರ್ಷ ವೃದ್ಧ..!
actress Nithya Sasi : ಸಿರಿಯಲ್ ನಟಿಯ ಹನಿಟ್ರ್ಯಾಪ್ಗೆ ಕೇರಳ ವಿಶ್ವವಿದ್ಯಾಲಯದ ಮಾಜಿ ಉದ್ಯೋಗಿ ಸುಮಾರು 11 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಸಧ್ಯ ನಟಿ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.
Nithya Sasi honey trap : ಹನಿ ಟ್ರ್ಯಾಪ್‌ನಲ್ಲಿ 11 ಲಕ್ಷ ರೂಪಾಯಿ ದರೋಡೆ ಮಾಡಿದ ಪ್ರಕರಣದಲ್ಲಿ ಧಾರಾವಾಹಿ ನಟಿ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಕೇರಳದ ಪತ್ತನಂತಿಟ್ಟ ಮಲಯಾಳಪ್ಪುಳ ಮೂಲದ ನಿತ್ಯಾ ಸಸಿ (32), ಪರವೂರು ಕಲೈಕೋಡ್ ನಿವಾಸಿ ಬಿನು (48) ಬಂಧಿತ ಆರೋಪಿಗಳು.
ಕೇರಳ ವಿಶ್ವವಿದ್ಯಾಲಯದ ಮಾಜಿ ಉದ್ಯೋಗಿಯೊಬ್ಬರು ಹನಿ ಟ್ರ್ಯಾಪ್‌ನಲ್ಲಿ ಸಿಕ್ಕಿಬಿದ್ದು, ಸುಮಾರು 11 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಮನೆ ಬಾಡಿಗೆ ನೀಡುವ ಸಂಬಂಧ ನಿತ್ಯಾ 75 ವರ್ಷದ ವೃದ್ಧನನ್ನು ಭೇಟಿಯಾಗಿದ್ದಾಳು. ಮನೆಯನ್ನು ಬಾಡಿಗೆಗೆ ಪಡೆದ ನಂತರ ಇಬ್ಬರೂ ಸ್ನೇಹಿತರಾದರು. ವಯೋವೃದ್ಧನನ್ನು ಬಾಡಿಗೆ ಮನೆಗೆ ಕರೆಸಿಕೊಂಡು ಬೆದರಿಸಿ ಬಟ್ಟೆ ಬಿಚ್ಚಿಸಿ ನಿತ್ಯಾ ಜೊತೆ ನಿಲ್ಲಿಸಿ ಅಶ್ಲೀಲ ಫೋಟೋ ತೆಗೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮಹಿಳೆಯರ ಒಳಉಡುಪುಗಳ ಬಗ್ಗೆ ಟ್ವೀಟ್ ಮಾಡಿ ಪೇಚಿಗೆ ಸಿಲುಕಿದ ಅಮಿತಾಭ್ ಬಚ್ಚನ್!
ಅಲ್ಲದೆ, ದೃಶ್ಯಾವಳಿಗಳನ್ನು ಬಿಡುಗಡೆ ಮಾಡುವುದಾಗಿ ಹೆದರಿಸಿ 25 ಲಕ್ಷ ರೂಪಾಯಿ ನೀಡುವಂತೆ ಒತ್ತಾಯಿಸಿದರು. ಈ ಮೂಲಕ ಆತನಿಂದ 11 ಲಕ್ಷ ರೂ.ವರೆಗೆ ಸುಲಿಗೆ ಮಾಡಿದ್ದರು. ನಂತರ ಹನಿ ಟ್ರ್ಯಾಪ್‌ಗೆ ಬಲಿಯಾದ ವೃದ್ಧ ಪೊಲೀಸರಿಗೆ ದೂರು ನೀಡಿದ್ದರು.
75 ವರ್ಷದ ವ್ಯಕ್ತಿ ದೂರು ದಾಖಲಿಸಿಕೊಂಡು ಆರೋಪಿಗಳಿ ಬಲೆ ಎಣೆದ ಪೊಲೀಸರು, ಉಳಿದ ಹಣವನ್ನು ನೀಡುವುದಾಗಿ ನಿತ್ಯ ಮತ್ತು ಆಕೆಯ ಸಹಚರನನ್ನು ಫ್ಲಾಟ್‌ಗೆ ಕರೆದಿದ್ದಾರೆ. ಅಲ್ಲಿ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಆರೋಪಿಗಳನ್ನು ರಿಮಾಂಡ್ ಮಾಡಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.