ಬೆಂಗಳೂರು: ಅಪ್ಪು ಅಂದ್ರೆ ಆಕಾಶ,ಪುನೀತ್ ಅಂದ್ರೆ ದೇವ್ರು, ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ,


COMMERCIAL BREAK
SCROLL TO CONTINUE READING

ಡಾ.ಪುನೀತ್ ರಾಜಕುಮಾರ್ ನಮ್ಮ ಜೊತೆಯಲ್ಲಿ ಇಲ್ಲದೇ ಇರಬಹುದು, ಆದ್ರೆ ನಾವು ಉಸಿರಾಡೋ ಗಾಳಿ,ಬೆಳಕು ಎಲ್ಲವೂ ಪುನೀತ್ ಮಯವಾಗಿದೆ ಮಕ್ಕಳಿಗೂ ಅಪ್ಪು ಅಂದ್ರೆ ಪ್ರಾಣ. ಊಟ ಮಾಡಿಸುವಾಗ ಅಪ್ಪು ಫೋಟೋ, ಡ್ಯಾನ್ಸ್ ಮತ್ತು ಹಾಡನ್ನ ತೋರಿಸಿದ್ರೆ ಸಾಕು ಹೊಟ್ಟೆ ತುಂಬಾ ಊಟ ಮಾಡೋ ಲೆವೆಲ್ಲಿಗೆ ಮಕ್ಕಳು ಇಷ್ಟ ಪಡೋ ಜೀವ ಪುನೀತ್ ಮಾತ್ರ.


ಅಪ್ಪು ಇಲ್ಲ ಅನ್ನೋದನ್ನ ಅರಗಿಸಿಕೊಳ್ಳೋದು ಇಂದಿಗೂ ಕಠಿಣವೇ ಬಿಡಿ.ಜಸ್ಟ್ ಎರಡು ವರ್ಷದ ಮಗು ಮುದ್ದು ಮುದ್ದಾಗಿ ಪುನೀತ್ ಅಂದ್ರೆ ನಂಗೆ ತುಂಬಾ ಇಷ್ಟ ಅನ್ನೋ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆ ವಿಡಿಯೋ ನೋಡಿದ ಅಪ್ಪು ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.


ಹಾಗೆಯೇ ಮುಂದುವರೆದು ಎರಡು ವರ್ಷದ ಪುಟ್ಟ ಧನ್ವಿನ್ 'ನಾನು ಯಾರು ಗೊತ್ತಾ "ರಾಕಿ ಬಾಯ್" ಅಂತಾನೆ.ಜೊತೆಗೆ ದೊಡ್ಡವನಾದ ಮೇಲೆ "ರಾಕಿ ಬಾಯ್" ಆಗ್ತೀನಿ ಅನ್ನೋ ಮಾತುಗಳು ಕೂಡ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ದಿಲ್ ಖುಷ್ ಆಗುವಂತೆ ಮಾಡಿದೆ.


ಇದನ್ನೂ ಓದಿ: ಕರ್ನಾಟಕ ರತ್ನ ‘ಅಪ್ಪು’ ಅಭಿಮಾನಿಗಳಿಗೆ ಕಿಚ್ಚ ಸುದೀಪ್‌ ಸ್ಪೆಷಲ್‌ ಥ್ಯಾಂಕ್ಸ್..!‌


Puneeth Rajkumar Twitter: ಪುನೀತ್‌ ಟ್ವಿಟರ್‌ ಖಾತೆಗೆ ಮರಳಿದ ಬ್ಲೂ ಟಿಕ್


ರಾಕಿಂಗ್ ಸ್ಟಾರ್ ಯಶ್ ಫ್ಯಾನ್ಸ್ ಕೂಡ ಈ ವೈರಲ್ ವಿಡಿಯೋವನ್ನ ಲೈಕ್ ಮತ್ತು ಶೇರ್ ಮಾಡೋದ್ರ ಮೂಲಕ ಮಕ್ಕಳಿಗೂ ಕೂಡ ಪುನೀತ್ ಮತ್ತು ಯಶ್ ಅಂದ್ರೆ ಎಷ್ಟು ಇಷ್ಟ ನೋಡಿ ಅಂತ ಕಾಮೆಂಟ್ ಮಾಡುತ್ತಿದ್ದಾರೆ.


ಒಂದಂತೂ ಸತ್ಯ ಪುನೀತ್ ಅಮರ..ಈ ಭೂಮಿ ಇರೋವರೆಗೂ ಪುನೀತ್ ಹೆಸ್ರು ಮಾತ್ರ ಶಾಶ್ವತವಾಗಿರುತ್ತೆ. ಈಗ ಹುಟ್ಟೋ ಕೂಸು ಕೂಡ ಪುನೀತ್ ನಮ್ಮ ದೇವ್ರು ಅಂತ ಖಂಡಿತ ಹೇಳೇ ಹೇಳುತ್ತೆ ಅನ್ನೋದು ಕೂಡ ಅಷ್ಟೇ ಸತ್ಯ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.