Puneeth Rajkumar Twitter: ಪುನೀತ್ ರಾಜ್‌ಕುಮಾರ್ ವಿಧಿವಶರಾದ ಬಳಿಕ ಟ್ವಿಟರ್ ಖಾತೆಯಲ್ಲಿ ಯಾವುದೇ ಚಟುವಟಿಕೆ ಇರಲಿಲ್ಲ. ಆದ್ದರಿಂದ ಟ್ವಿಟರ್‌ನಲ್ಲಿ ಅವರ ಖಾತೆಯಿಂದ ಬ್ಲೂ ಟಿಕ್ ತೆಗೆಯಲಾಗಿತ್ತು. ಇದಕ್ಕೆ ಫ್ಯಾನ್ಸ್ ಅಸಮಾಧಾನ ಹೊರಹಾಕಿದ್ದರು. ಚಂದನವನದ ನಟ ಪುನೀತ್ ರಾಜ್‌ಕುಮಾರ್ ಇಹಲೋಕದಿಂದ ದೂರವಾಗಿದ್ದರೂ, ಅಭಿಮಾನಿಗಳ ಹೃದಯದಲ್ಲಿ ಎಂದೆಂದಿಗೂ ಅಜರಾಮರ.
Thank you ❤️@verified @Twitter @TwitterIndia for the Verification @PuneethRajkumar Appu Anna is alive in People Heart & this is one of the example😍 Thank you Powerfull Fans of The Powerfull Man💪💪💪 love u Puneethians🤗🤗🤗 This is a Good note to start the week 🙌🙌 pic.twitter.com/OdMCPBGiKE
— Santhosh Ananddram (@SanthoshAnand15) July 18, 2022
ಇತ್ತೀಚೆಗೆ ಪುನೀತ್ ರಾಜ್‌ಕುಮಾರ್ ಅವರ ಟ್ವಿಟರ್ ಖಾತೆಯಲ್ಲಿ ಇದ್ದ ಬ್ಲೂ ಟಿಕ್ ತೆಗೆದುಹಾಕಲಾಗಿತ್ತು. ಇದರ ವಿರುದ್ಧ ಅಪ್ಪು ಅಭಿಮಾನಿಗಳು ಧ್ವನಿ ಎತ್ತಿದ್ದರು. ಅಲ್ಲದೇ ಈ ಬಗ್ಗೆ ಅಸಮಾಧಾನ ಸಹ ಹೊರಹಾಕಿದ್ದರು. ಆ ಬಳಿಕ ಎಚ್ಚೆತ್ತುಕೊಂಡ ಟ್ವಿಟರ್ ಸಂಸ್ಥೆ, ಅಭಿಮಾನಿಗಳ ಭಾವನೆಗೆ ಗೌರವ ಕೊಟ್ಟು, ಪುನೀತ್ ರಾಜ್‌ಕುಮಾರ್ ಅವರ ಟ್ವಿಟರ್ ಖಾತೆಗೆ ಬ್ಲೂ ಟಿಕ್ ಮರಳಿ ನೀಡಿದೆ.
ಜನಪ್ರಿಯ ವ್ಯಕ್ತಿ ಮತ್ತು ಸಂಸ್ಥೆಗಳ ಟ್ವಿಟರ್ ಖಾತೆಗಳಿಗೆ ಬ್ಲೂ ಟಿಕ್ ನೀಡಲಾಗುತ್ತದೆ. ನಿರ್ದಿಷ್ಟ ಖಾತೆ ಅಧಿಕೃತವಾಗಿದೆ ಎಂಬುದು ಈ ಬ್ಲೂ ಟಿಕ್‌ನ ಅರ್ಥವಾಗಿದೆ. ನಕಲಿ ಮತ್ತು ಅಸಲಿ ಖಾತೆಗಳ ನಡುವೆ ವ್ಯತ್ಯಾಸ ತಿಳಿಯಲು ಕೂಡ ಈ ಬ್ಲೂ ಟಿಕ್ ಸಹಕಾರಿ ಆಗಿದೆ. ಬಹುತೇಕ ಎಲ್ಲ ಸೆಲೆಬ್ರಿಟಿಗಳ ಸೋಶಿಯಲ್ ಮೀಡಿಯಾ ಖಾತೆಗಳಿಗೆ ಬ್ಲೂ ಟಿಕ್ ಇರುತ್ತದೆ. ದೀರ್ಘ ಸಮಯದ ವರಗೆ ಯಾವುದೇ ಟ್ವಿಟರ್ ಖಾತೆಯಲ್ಲಿ ಯಾವದೇ ಚಟುವಟಿಕೆಗಳು ಇಲ್ಲದಿದ್ದರೆ ಬ್ಲೂ ಟಿಕ್ ತೆಗೆದುಹಾಕಲಾಗುತ್ತದೆ. ಇದೇ ರೀತಿ ಅಪ್ಪು ಅವರ ಖಾತೆಯ ಬ್ಲೂ ಟಿಕ್‌ನ್ನು ಸಹ ತೆಗೆದು ಹಾಕಲಾಗಿತ್ತು.
ಟ್ವಿಟರ್ ಕಂಪನಿಯ ಈ ನಡೆಯನ್ನು ಖಂಡಿಸಿ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಇದರ ಪರಿಣಾಮ, ಈಗ ಪುನೀತ್ ರಾಜ್‌ಕುಮಾರ್ ಅವರ ಖಾತೆಗೆ ಬ್ಲೂ ಟಿಕ್ ಮರಳಿ ನೀಡಲಾಗಿದೆ. ಇದರಿಂದ ಅಪ್ಪು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಈ ಕುರಿತು ನಿರ್ದೇಶಕ ಸಂತೋಷ್ ಆನಂದ್ ರಾಮ್ ಕೂಡ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.