ಬಿಗ್ ಬಾಸ್ ಕನ್ನಡ ಒಟಿಟಿ ಸದ್ಯ ಸಖತ್ ಯಶಸ್ವಿ ಪ್ರಸಾರ ಕಾಣುತ್ತಿದೆ. ಈಗಾಗಲೇ ಗೆಲುವಿಗಾಗಿ ನಾನಾ ತರಹದ ದಾರಿಗಳನ್ನು ಸ್ಪರ್ಧಿಗಳು ಹಿಡಿದಾಗಿದೆ. ಇನ್ನೊಂದೆಡೆ ಕಳೆದ ದಿನವಷ್ಟೇ ಕಿರಣ್ ಯೋಗೇಶ್ವರಿ ಅವರು ಮೊದಲ ಎಲಿಮಿನೇಶನ್ ಆಗಿ ಮನೆಯಿಂದ ಹೊರಬಂದಿದ್ದಾರೆ. ಇವೆಲ್ಲದರ ಮಧ್ಯೆ ಮನೆಯೊಳಗಿರುವ ಸ್ಪರ್ಧಿಯೊಬ್ಬರ ಬಗ್ಗೆ ಉದಯ್ ಹೇಳಿರುವ ಮಾತು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಆಮೀರ್‌ ಖಾನ್‌ ಸಿನಿಮಾ ಜೀವನದಲ್ಲೇ ಇದು ಅತ್ಯಂತ ಕಳಪೆ ಓಪನಿಂಗ್..!


ಸೋನು ಶ್ರೀನಿವಾಸ್ ಗೌಡ ಎಂದರೆ ಕರ್ನಾಟಕದಲ್ಲಿ ಪ್ರತಿಯೊಬ್ಬರಿಗೂ ತಿಳಿದಿರುವ ಹೆಸರು. ಟ್ರೋಲ್ ನಿಂದಲೇ ಹೆಸರು ಗಳಿಸಿರುವ ಸೋನು ಬಗ್ಗೆ ಉದಯ್ ಸೂರ್ಯ ಹೇಳಿಕೆಯೊಂದನ್ನು ನೀಡಿದ್ದಾರೆ.


“ಅವಳು ಫೇಮಸ್ ಆಗಿದ್ದೇ ಟ್ರೋಲ್ ನಿಂದ. ಆಕೆಗೆ ನೆಗೆಟಿವ್ ಕಮೆಂಟ್ ಬಂದರೂ ಪರವಾಗಿಲ್ಲ. ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಫೇಮಸ್ ಆದ್ರೆ ಸಾಕು ಎಂಬ ಆಸೆಯಿದೆ. ಒಳ್ಳೆಯದ್ದೋ ಕೆಟ್ಟದ್ದೋ ಗೊತ್ತಿಲ್ಲ” ಎಂದು ಹೇಳಿದ್ದಾರೆ. ಇದಕ್ಕೆ ಅವರ ಜೊತೆ ಕುಳಿತಿದ್ದ ಇನ್ನೂ ಕೆಲವರು ದನಿಗೂಡಿಸಿದ್ದಾರೆ.


ಈ ಹಿಂದೆ ಸೋಮಣ್ಣ ಮಾಚಿಮಾಡ ಅವರು ಸೋನು ಗೌಡಗೆ ಪ್ರಶ್ನೆಯನ್ನು ಕೇಳಿದ್ದರು; “ ನಿಮ್ಮ ಜೀವನದ ಕೆಲ ವಿಷಯಗಳನ್ನು ಮುಕ್ತವಾಗಿ ಹೀಗೆ ಹೇಳಿಕೊಂಡರೆ ನಿಮ್ಮ ಭವಿಷ್ಯಕ್ಕೆ ಸಮಸ್ಯೆಯಾಗುವುದಿಲ್ಲವೇ?” ಎಂದು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಸೋನು, “ನಾನು ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ” ಎಂದು ಹೇಳಿದ್ದರು.


ಇದನ್ನೂ ಓದಿ: Bigg Boss Kannada OTT : ಕಾಂಟ್ರವರ್ಷಿಯಲ್‌ ಲೇಡಿ ಸೋನು ಗೌಡ ಎಲಿಮಿನೇಟ್‌ ಆದ್ರಾ..? ಇಲ್ವಾ..?


ಬಿಗ್ ಮನೆಯಲ್ಲಿ ಪ್ರೇಮ ಪುರಾಣ: ಕೋಸ್ಟಲ್ ವುಡ್ ಸ್ಟಾರ್, ನಿರೂಪಕ ರೂಪೇಶ್ ಶೆಟ್ಟಿ ಮತ್ತು ಸಾನಿಯಾ ಅಯ್ಯರ್ ಹೆಸರನ್ನು ದೊಡ್ಡ ಮನೆಯೊಳಗೆ ತಳುಕು ಹಾಕಲಾಗುತ್ತಿದೆ. ಇಬ್ಬರದ್ದೂ ಬೆಸ್ಟ್ ಕಪಲ್ ಎಂದೆಲ್ಲಾ ತಮಾಷೆ ಮಾಡಲಾಗುತ್ತಿದೆ. ರೂಪೇಶ್ ಸಹ ತಾನು ಸಾನಿಯಾಗೆ ಕನೆಕ್ಟ್ ಆಗಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.