Bigg Boss Kannada OTT : ಕಾಂಟ್ರವರ್ಷಿಯಲ್‌ ಲೇಡಿ ಸೋನು ಗೌಡ ಎಲಿಮಿನೇಟ್‌ ಆದ್ರಾ..? ಇಲ್ವಾ..?

ಇದಕ್ಕೂ ಮೊದಲು ಸೋನು ಶ್ರೀನಿವಾಸ್‌ ಗೌಡ ಎಲಿಮಿನೇಟ್‌ ಆಗಬೇಕು ಅಥವಾ ಆಗಲಿದ್ದಾರೆ ಅನ್ನೋ ವಿಚಾರ ಎಲ್ಲಾ ಕಡೆ ಬಿಸಿಬಿಸಿ ಚರ್ಚೆಗೆ ಕಾರಣವಾಗಿತ್ತು. ಆದರೆ ಇವತ್ತು ನಡೆದಿದ್ದೇ ಬೇರೆ ಸ್ಟೋರಿ.

Written by - Malathesha M | Last Updated : Aug 13, 2022, 08:46 PM IST
  • ಬಿಗ್‌ಬಾಸ್ ಓಟಿಟಿ ಸೀಸನ್-1‌ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತಿದ್ದು
  • ಈ ವಾರ ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗೋದು ಯಾರು?
  • ಮೊದಲು ಸೋನು ಶ್ರೀನಿವಾಸ್‌ ಗೌಡ ಎಲಿಮಿನೇಟ್‌ ಆಗಬೇಕು
Bigg Boss Kannada OTT : ಕಾಂಟ್ರವರ್ಷಿಯಲ್‌ ಲೇಡಿ ಸೋನು ಗೌಡ ಎಲಿಮಿನೇಟ್‌ ಆದ್ರಾ..? ಇಲ್ವಾ..? title=

Bigg Boss Kannada OTT : ಬಿಗ್‌ಬಾಸ್ ಓಟಿಟಿ ಸೀಸನ್-1‌ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತಿದ್ದು, ಈ ವಾರ ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗೋದು ಯಾರು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಇದಕ್ಕೂ ಮೊದಲು ಸೋನು ಶ್ರೀನಿವಾಸ್‌ ಗೌಡ ಎಲಿಮಿನೇಟ್‌ ಆಗಬೇಕು ಅಥವಾ ಆಗಲಿದ್ದಾರೆ ಅನ್ನೋ ವಿಚಾರ ಎಲ್ಲಾ ಕಡೆ ಬಿಸಿಬಿಸಿ ಚರ್ಚೆಗೆ ಕಾರಣವಾಗಿತ್ತು. ಆದರೆ ಇವತ್ತು ನಡೆದಿದ್ದೇ ಬೇರೆ ಸ್ಟೋರಿ.

ಸೋನು ಶ್ರೀನಿವಾಸ್‌ ಗೌಡ ಬಿಗ್‌ಬಾಸ್ ಓಟಿಟಿ ಸೀಸನ್-1‌ಗೆ ಆಯ್ಕೆ ಆದ ದಿನದಿಂದಲೂ ವ್ಯಾಪಕವಾಗಿ ಟೀಕೆ ವ್ಯಕ್ತವಾಗುತ್ತಿತ್ತು. ಹಾಗೇ ಟ್ರೋಲರ್ಸ್‌ ಮಾಡೋ ಟ್ರೋಲ್‌ಗಳಿಗೆ ಸೋನು ಶ್ರೀನಿವಾಸ್‌ ಗೌಡ ಆಹಾರ ಆಗುತ್ತಿದ್ದಾರೆ. ಹೊರಗೆ ಇದ್ದಾಗಲೂ ಟ್ರೋಲ್‌ ಆಗುತ್ತಿದ್ದ ಸೋನು, ಬಿಗ್‌ಬಾಸ್‌ ಮನೆಯಲ್ಲಿ ಇದ್ದರೂ ಟ್ರೋಲರ್ಸ್ ಕೆಂಗಣ್ಣಿಗೆ ಗುರಿಯಾಗಿ ಟ್ರೋಲ್‌ ಆಗುತ್ತಿದ್ದಾರೆ. ಹಾಗೇ ಮತ್ತೊಂದೆಡೆ ಎಲಿಮಿನೇಷನ್‌ ವಿಚಾರ ಗಂಭೀರ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ : Bigg Boss Kannada OTT : ಆರ್ಯವರ್ಧನ್‌ ಗುರೂಜಿ ಬಿಗ್‌ಬಾಸ್‌ ಮನೆಯಿಂದ ಹೊರಗೆ ಹೋ...

ಸೋನು ಸೇಫ್‌..!

ಕಾಂಟ್ರವರ್ಷಿಯಲ್‌ ಸ್ಟಾರ್ ಸೋನು ಶ್ರೀನಿವಾಸ್‌ ಗೌಡ ಈ ವಾರ ಸೇಫ್‌ ಆಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಎಷ್ಟೆಷ್ಟೋ ಚರ್ಚೆ ನಡೆದರೂ ಈ ವಾರ ಮಾತ್ರ ಸೋನು ಶ್ರೀನಿವಾಸ್‌ ಗೌಡ ಸೇಫ್‌ ಆಗಿದ್ದಾಗಿದೆ. ಇಂದು ನಡೆದ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ನಟ ಕಿಚ್ಚ ಸುದೀಪ್‌ ಅವರು ಸೋನು ಸೇಫ್‌ ಆಗಿರುವ ವಿಚಾರವನ್ನ ಸ್ಪಷ್ಟಪಡಿಸಿದ್ರು. ಆದರೆ ಮತ್ತೊಂದು ಕಡೆ ಕೆಲವರ ಮೇಲೆ ಎಲಿಮಿನೇಷನ್‌ ಕತ್ತಿ ತೂಗುತ್ತಿದ್ದು, ಇನ್ನು ಕೆಲವೇ ಕ್ಷಣದಲ್ಲಿ ಬಿಗ್‌ಬಾಸ್ ಓಟಿಟಿ ಸೀಸನ್-1‌ನ ಮೊದಲ ವಾರ ಎಲಿಮಿನೇಟ್‌ ಆಗುವ ಸ್ಪರ್ಧಿ ಯಾರು ಎಂಬುದು ತಿಳಿಯಲಿದೆ.

ಒಟ್ಟಾರೆ ಹೇಳುವುದಾದರೆ ಸೋನು ಶ್ರೀನಿವಾಸ್‌ ಗೌಡ ಸೋಷಿಯಲ್‌ ಮೀಡಿಯಾ ಹಾಗೂ ಇತರೆಡೆ ಎಷ್ಟೇ ಕಾಂಟ್ರವರ್ಸಿ ಮಾಡಿಕೊಂಡರೂ, ಮತ್ತೊಂದು ಅವಕಾಶ ಸಿಗುತ್ತಿದೆ. ಆದರೆ ಮುಂದಿನ ವಾರ  ಸೋನು ಶ್ರೀನಿವಾಸ್‌ ಗೌಡ ಉಳಿಯುತ್ತಾರಾ..? ಅಥವಾ ಎಲಿಮಿನೇಟ್‌ ಆಗಲಿದ್ದಾರಾ ಅನ್ನೋ ಪ್ರಶ್ನೆ ಭಾರಿ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ : BiggBoss OTT: ಸಾನಿಯಾ ಬೆನ್ನುಬಿಡುತ್ತಿಲ್ಲ ರೂಪೇಶ್! ಬಿಗ್ ಮನೆಯಲ್ಲಿ ಮತ್ತೊಂದು ಪ್ರೇಮಪುರಾಣ?

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News