Umair Sandhu Tweet On Yash : ರಾಕಿಂಗ್‌ ಸ್ಟಾರ್‌ ಯಶ್..‌ ಸ್ಯಾಂಡಲ್‌ವುಡ್‌ ಹೆಸರನ್ನು ಮತ್ತೊಂದು ಲೆವಲ್‌ಗೆ ಕೊಂಡೊಯ್ದ್‌ ನಟರಲ್ಲಿ ಇವರು ಒಬ್ಬರು. ಕೆಜಿಎಫ್‌ ಚಾಪ್ಟರ್‌ 2 ಸಿನಿಮಾ ಮೂಲಕ ಪ್ಯಾನ್‌ ಇಂಡಿಯಾ ಸ್ಟಾರ್‌ ಆದರು. ಕೆಜಿಎಫ್‌ ವಿಶ್ವಾದ್ಯಂತ ಹಿಟ್‌ ಕಂಡಿತು. ಯಶ್‌ ವೃತ್ತಿಜೀವನ ಮಾತ್ರವಲ್ಲ ಕನ್ನಡ ಸಿನಿರಂಗದಲ್ಲೇ ದೊಡ್ಡ ಮೈಲಿಗಲ್ಲನ್ನು ಸೃಷ್ಟಿಸಿತು. ರಾಕಿಭಾಯ್‌ ಖದರ್‌ ಕಂಡು ಸಿನಿ ಪ್ರೇಕ್ಷಕರು ಫಿದಾ ಆದರು. ಯಶ್‌ ಅಬ್ಬರಕ್ಕೆ ಸಿನಿರಂಗದ ಎಲ್ಲ ದಾಖಲೆಗಳು ಉಡೀಸ್‌ ಆದವು. ಆ ಬಳಿಕ ಯಶ್‌ ಅಭಿಮಾನಿ ಬಳಗವೂ ಹೆಚಾಯ್ತು. ಆದರೆ ಇದೀಗ ಯಶ್‌ ಫ್ಯಾನ್ಸ್‌ ಕೆಂಗಣ್ಣಿಗೆ ಓರ್ವ ವ್ಯಕ್ತಿ ಗುರಿಯಾಗಿದ್ದಾನೆ. 


COMMERCIAL BREAK
SCROLL TO CONTINUE READING

ಯಶ್ ಸ್ಯಾಂಡಲ್‌ವುಡ್‌ನಲ್ಲಿ ಬಹುಬೇಡಿಕೆಯ ನಟರಲ್ಲಿ ಒಬ್ಬರು. ಅವರು ಕೊನೆಯದಾಗಿ ಕೆಜಿಎಫ್ ಫ್ರಾಂಚೈಸಿಯಲ್ಲಿ ಕಾಣಿಸಿಕೊಂಡರು. ಕೆಜಿಎಫ್ ರಿಲೀಸ್ ಆಗಿ ವರ್ಷ ಆಗುತ್ತಾ ಬಂದರೂ ಯಶ್ ಹೊಸ ಚಿತ್ರದ ಬಗ್ಗೆ ಘೋಷಣೆ ಮಾಡಿಲ್ಲ. ಹೀಗಿರುವಾಗಲೇ ಇವರ ಬಗ್ಗೆ ಕೆಟ್ಟದಾಗಿ ಮಾತನಾಡುವ, ಗಾಳಿಸುದ್ದಿ ಹರಡುವ ಟ್ವೀಟ್‌ಗಳು ವೈರಲ್‌ ಆಗಿವೆ. ಇದು ಯಶ್‌ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಸ್ವಯಂಘೋಷಿತ ವಿಮರ್ಶಕ ಉಮೈರ್ ಸಂಧು ಅವರ ಮೇಲೆ ಯಶ್‌ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. 


ಇದನ್ನೂ ಓದಿ: ಐಕಾನಿಕ್ ಗೋಲ್ಡ್ ಅವಾರ್ಡ್ಸ್ ಮುಡಿಗೇರಿಸಿಕೊಂಡ  'ದಿ ಕಾಶ್ಮೀರ್ ಫೈಲ್ಸ್' 


ಯಶ್‌ ಸಿನಿಮಾ ಕುರಿತು ಟ್ವೀಟ್‌ ಮಾಡುವ ಮೊದಲು ಶ್ರೀನಿಧಿ ಶೆಟ್ಟಿ ಬಗ್ಗೆ ಉಮೈರ್ ಸಂಧು ಟ್ವೀಟ್ ಮಾಡಿದ್ದರು. ನಂತರ ಯಶ್ ಬಗ್ಗೆ ಟ್ವೀಟ್ ಮಾಡಿದರು. ಆದರೆ ಎರಡರಲ್ಲೂ ಯಶ್‌ ಬಗ್ಗೆ ಡ್ಯಾಮೇಜಿಂಗ್‌ ಸ್ಟೇಟ್‌ಮೆಂಟ್‌ಗಳನ್ನೇ ನೀಡಿದ್ದಾರೆ. ಯಶ್ ಅವರ ಘನತೆಗೆ ಧಕ್ಕೆ ತರುವ ಮಾತುಗಳನ್ನಾಡಿದ್ದಾರೆ. 


ಕೆಜಿಎಫ್‌ ಸಿನಿಮಾದ ಶೂಟಿಂಗ್‌ ಸೆಟ್‌ನಲ್ಲಿ ನಟ ಯಶ್‌ ಅವರಿಂದ ಶ್ರೀನಿಧಿ ಶೆಟ್ಟಿ ಕಿರುಕುಳ ಅನುಭವಿಸಿದ್ದಾರೆ ಎಂಬ ಗಾಳಿಸುದ್ದಿ ವೈರಲ್‌ ಆಗಿತ್ತು. ಉಮೈರ್‌ ಸಂಧು, "ಕೆಜಿಎಫ್‌ ಚಾಪ್ಟರ್‌ 2 ಶೂಟಿಂಗ್‌ ಸೆಟ್‌ನಲ್ಲಿ ಯಶ್‌ ಅವರಿಂದ ನಾನು ಸಾಕಷ್ಟು ಮುಜುಗರಕ್ಕೆ ಒಳಗಾಗಬೇಕಾಯಿತು. ಇನ್ಮುಂದೆ ನಾನು ಯಶ್‌ ಜೊತೆ ಯಾವತ್ತೂ ಕೆಲಸ ಮಾಡಲ್ಲ. ವಿಷಕಾರಿ, ಕಿರುಕುಳ ನೀಡುವ ವ್ಯಕ್ತಿತ್ವ ಇರುರ ವ್ಯಕ್ತಿ ಅವರು" ಎಂದು ಶ್ರೀನಿಧಿ ಹೇಳಿದ್ದಾರೆಂದು ಹೇಳಿಕೊಂಡು ಟ್ಟಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದರು.


 


Virat Kohli Biopic: ವಿರಾಟ್‌ ಕೊಹ್ಲಿ ಬಯೋಪಿಕ್‌ನಲ್ಲಿ ಈ ಸೌತ್‌ ಸ್ಟಾರ್‌.!


ಇದಕ್ಕೆ ಸ್ಟಷ್ಟನೆ ಕೊಟ್ಟ ನಟಿ ಶ್ರೀನಿಧಿ ಶೆಟ್ಟಿ, "ಅವರ ಪೋಸ್ಟ್ ಓದಿದೆ. ಕೆಲವರು ಸಾಮಾಜಿಕ ಮಾಧ್ಯಮದ ಸಾಧನವನ್ನು ಅಪಪ್ರಚಾರ ಮಾಡಲು ಮತ್ತು ಗಾಳಿಸುದ್ದಿ ಹರಡಲು ಪ್ರಯತ್ನಿಸಬಹುದು ಆದರೆ, ನಾನು ಪ್ರೀತಿ, ಸಂತೋಷವನ್ನು ಹರಡಲು ಮತ್ತು ನನ್ನ ಜೀವನದಲ್ಲಿ ಮಹತ್ವದ ವ್ಯಕ್ತಿಗಳಿಗೆ ನನ್ನ ಆಳವಾದ ಮೆಚ್ಚುಗೆಯನ್ನು ತೋರಿಸಲು ಅದನ್ನು ಬಳಸಲು ಬಯಸುತ್ತೇನೆ. ನಾನು ಮತ್ತೊಮ್ಮೆ ಹೇಳುತ್ತೇನೆ, KGF ನ ವೈಭವದ ಜಗತ್ತು ಸೃಷ್ಟಿಯಾದಾಗ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರೊಂದಿಗೆ ಕೆಲಸ ಮಾಡಿರುವುದು ನಿಜವಾಗಿಯೂ ಒಂದು ಸಂಪೂರ್ಣ ಗೌರವ ನೀಡಿದೆ. ಯಶ್‌ ಜತೆ ಕೆಲಸ ಮಾಡಲು ನಾನು ನಿಜಕ್ಕೂ ಅದೃಷ್ಟ ಮಾಡಿದ್ದೆ ಎನಿಸುತ್ತದೆ. ಅವರೊಬ್ಬ ರಿಯಲ್‌ ಜೆಂಟಲ್‌ಮ್ಯಾನ್, ಒಬ್ಬ ಮೆಂಟರ್‌, ಅಷ್ಟೇ ಒಳ್ಳೆಯ ಸ್ನೇಹಿತರಾಗಿದ್ದಾರೆ. ಯಶ್‌ ನನ್ನ ಸ್ಫೂರ್ತಿ. ಇದೆಲ್ಲದಕ್ಕಿಂತ ಹೆಚ್ಚಾಗಿ ನಾನು ರಾಕಿಂಗ್‌ ಸ್ಟಾರ್‌ ಯಶ್‌ ಅವರ ಬಹುದೊಡ್ಡ ಅಭಿಮಾನಿಯಾಗಿರುವೆ" ಎಂದು ಹೇಳಿದ್ದರು. 


ಆದರೆ ಆ ಬಳಿಕ ಉಮೈರ್ ಯಶ್ ಬಗ್ಗೆ ಮತ್ತೊಂದು ಟ್ವೀಟ್ ಮಾಡಿದ್ದು, ಅಭಿಮಾನಿಗಳು ಕೆಂಡಾಮಂಡಲರಾಗಿದ್ದಾರೆ. "ಆ್ಯಟಿಟ್ಯೂಡ್ ನೋಡಿ ದಕ್ಷಿಣ ಹಾಗೂ ಬಾಲಿವುಡ್‌ನ ಪ್ರೊಡಕ್ಷನ್​ ಹೌಸ್‌ಗಳು ಯಶ್ ಅವರನ್ನು ಹೊರಗಿಟ್ಟಿವೆ. ಕೆಜಿಎಫ್ 2 ಬಳಿಕ ಅವರು ಪ್ರತಿ ಚಿತ್ರಕ್ಕೆ 75 ಕೋಟಿ ರೂಪಾಯಿ ಸಂಭಾವನೆ ಕೇಳುತ್ತಿದ್ದಾರೆ. ಇದು ತುಂಬಾ ಜಾಸ್ತಿಯಾಯಿತು ಎಂದು ನಿರ್ಮಾಪಕರ ಅಭಿಪ್ರಾಯಪಟ್ಟಿದ್ದಾರೆ. ಈ ಕಾರಣಕ್ಕೆ ಯಾರೂ ಯಶ್ ಜೊತೆ ಸಿನಿಮಾ ಮಾಡಲು ಮುಂದೆ ಬರ್ತಿಲ್ಲ" ಎಂದು ಹೇಳಿದ್ದಾರೆ. ಇದನ್ನು ಅನೇಕರು ಟೀಕಿಸಿದ್ದು, ಸಿಕ್ಕಾಪಟ್ಟೆ ಸಿಡಿದೆದ್ದಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.